forum ಹೋರಮ್‍
ನಾಮವಾಚಕ
  1. (ರೋಮನ್‍ ಪ್ರಾಚೀನ ಚರಿತ್ರೆ)
    1. ಸಾರ್ವಜನಿಕ ಸಭಾಸ್ಥಾನ; ಒಂದು ಪಟ್ಟಣದ ಸಾರ್ವಜನಿಕ ಸ್ಥಳ.
    2. ಮಾರುಕಟ್ಟೆ; ಅಂಗಡಿಚೌಕ; ಪೇಟೆ.
    3. (ಮುಖ್ಯವಾಗಿ ಪುರಾತನ ರೋಮ್‍ನಲ್ಲಿ) ನ್ಯಾಯವಿಚಾರಣೆ ಮೊದಲಾದ ಸಾರ್ವಜನಿಕ ಕಾರ್ಯಗಳಿಗೆ ಸಭೆ ಸೇರುತ್ತಿದ್ದ ಸ್ಥಳ.
  2. (ಸಾರ್ವಜನಿಕರ) ವಾದಸ್ಥಾನ; ಚರ್ಚಾಸ್ಥಳ; ವಾದರಂಗ.
  3. ಚರ್ಚೆ, ಜಿಜ್ಞಾಸೆ, ಮೊದಲಾದವುಗಳಿಗೆ ಅವಕಾಶ ಮಾಡಿಕೊಡುವ ನಿಯತಕಾಲಿಕಗಳು ಮೊದಲಾದವು.
  4. ನ್ಯಾಯಾಲಯ; ನ್ಯಾಯಸ್ಥಾನ (ರೂಪಕವಾಗಿ ಸಹ): the forum of conscience ಆತ್ಮಸಾಕ್ಷಿಯ ನ್ಯಾಯಸ್ಥಾನ.