See also 2forty
1forty ಹಾರ್ಟಿ
ಗುಣವಾಚಕ

ನಲವತ್ತು: forty-one ನಲವತ್ತೊಂದು.

ನುಡಿಗಟ್ಟು

forty winks (ಮುಖ್ಯವಾಗಿ ಮಧ್ಯಾಹ್ನದ ಊಟವಾದ ಮೇಲೆ ಮಾಡುವ) ಸಣ್ಣ – ನಿದ್ದೆ, ಜೊಂಪು.

See also 1forty
2forty ಹಾರ್ಟಿ
ನಾಮವಾಚಕ
  1. ನಲವತ್ತನೆಯ ವಯಸ್ಸು; ನಲವತ್ತರ ಪ್ರಾಯ.
  2. ನಲವತ್ತು; ನಲವತ್ತನ್ನು ಸೂಚಿಸುವ ಸಂಖ್ಯೆ ಯಾ ಸಂಕೇತ (40, xl, XL).
  3. (ಬಹುವಚನದಲ್ಲಿ) ನಲವತ್ತರ ವರ್ಷಗಳು; ವ್ಯಕ್ತಿಯ ಜೀವಿತ ಕಾಲದಲ್ಲಿ ಯಾ ಒಂದು ಶತಮಾನದಲ್ಲಿ 40 ರಿಂದ 49 ವರ್ಷಗಳವರೆಗಿನ ಕಾಲ.
ಪದಗುಚ್ಛ
  1. forty–penny nail (ಬ್ರಿಟಿಷ್‍ ಪ್ರಯೋಗ) ಐದು ಅಂಗುಲ ಉದ್ದದ, ನಲವತ್ತು ಪೆನ್ನಿ ಮೊಳೆ, ಆಣೆ.
  2. roaring forties ಉತ್ತರ ಮತ್ತು ದಕ್ಷಿಣ $40^\circ$ ರಿಂದ $49^\circ$ ವರೆಗಿನ ಅಕ್ಷಾಂಶಗಳಲ್ಲಿನ ಸಂಕ್ಷುಬ್ಧ ಸಾಗರಭಾಗಗಳು.
  3. forty-one ನಲವತ್ತೊಂದು.
  4. one-and-forty (ಪ್ರಾಚೀನ ಪ್ರಯೋಗ) ನಲವತ್ತೊಂದು.
  5. the Forties (ಬ್ರಿಟಿಷ್‍ ಪ್ರಯೋಗ) ಸ್ಕಾಟ್ಲಂಡಿನ ಈಶಾನ್ಯ ತೀರ ಹಾಗೂ ನಾರ್ವೆಯ ನೈಋತ್ಯ ತೀರಗಳ ನಡುವಣ ಸಾಗರಭಾಗ (ನಲವತ್ತು ಮಾರುಗಳ (‘ಹ್ಯಾದಂ’) ಅಥವಾ ಇನ್ನೂ ಆಳವಿರುವುದರಿಂದ ಈ ಹೆಸರು ಬಂದಿದೆ).
  6. the Forty five (ಇಂಗ್ಲಂಡಿನಲ್ಲಿ) ಕ್ರಿಸ್ತಶಕ 1745 ರಲ್ಲಿ ನಡೆದ ‘ಜ್ಯಾಕೋಬೈಟ್‍’ ದಂಗೆ.