See also 2fortune
1fortune ಹಾರ್ಚೂ(ರ್ಟ್ಯೂ)ನ್‍
ನಾಮವಾಚಕ
  1. (ಮನುಷ್ಯ ವ್ಯವಹಾರದಲ್ಲಿ ನೆರವಾಗಿ ನಿಲ್ಲುವ) ಒಳ್ಳೆಯ ಅದೃಷ್ಟಶಕ್ತಿ; ದೆಸೆ; ಭಾಗ್ಯ; ಸುಯೋಗ.
  2. (ಏಕವಚನ ಮತ್ತು ಬಹುವಚನದಲ್ಲಿ ಸಹ) (ಮನುಷ್ಯನಿಗೆ ಯಾ ಕೈಕೊಂಡ ಪ್ರಯತ್ನಕ್ಕೆ ಒದಗುವ ಒಳ್ಳೆಯ ಯಾ ಕೆಟ್ಟ) ಅದೃಷ್ಟ; ಯೋಗ: try one’s fortune (ಏನಾದರೂ ಅಪಾಯಕ್ಕೆ, ಸಾಹಸಕ್ಕೆ ಕೈಹಾಕಿ) ಅದೃಷ್ಟಪರೀಕ್ಷೆ ಮಾಡು.
  3. ಮುಂದಿನ, ಮುಂದೆ ಬರಲಿರುವ – ಯೋಗ; ಭವಿಷ್ಯ; ವಿಧಿ.
  4. ದೆಸೆ; ಪುಣ್ಯೋದಯ; ಯಶಸ್ಸು; ಸೌಭಾಗ್ಯ.
  5. ಏಳಿಗೆ; ಸುಯೋಗ; ಸುಸ್ಥಿತಿ.
  6. ಸಂಪತ್ತು; ಐಶ್ವರ್ಯ; ಸಿರಿ.
  7. (Fortune) ಭಾಗ್ಯದೇವತೆ ಅದೃಷ್ಟದೇವತೆ.
  8. ಭಾರಿ ಹಣ; ತುಂಬ ದುಡ್ಡು.
ಪದಗುಚ್ಛ
  1. fortune cookie (ಅಮೆರಿಕನ್‍ ಪ್ರಯೋಗ) ಕಣಿತಿಂಡಿ; ಅದೃಷ್ಟಭಕ್ಷ್ಯ; ಭವಿಷ್ಯವಾಣಿ ಯಾ ಸೂಕ್ತಿಯುಳ್ಳ ಕಾಗದವನ್ನು ಒಳಗಡೆ ಇಟ್ಟು ತಯಾರಿಸಿದ ಕೇಕು, ಭಕ್ಷ್ಯ.
  2. make a fortune ಆಸ್ತಿ ಮಾಡು; ಐಶ್ವರ್ಯ, ಸಂಪತ್ತು – ಗಳಿಸು, ಪಡೆ; ಐಶ್ವರ್ಯವಂತನಾಗು.
  3. make one’s fortune ಏಳಿಗೆ ಹೊಂದು; ಸಂಪತ್ತು, ಆಸ್ತಿ – ಗಳಿಸು.
  4. marry a fortune (ಪ್ರಾಚೀನ ಪ್ರಯೋಗ) ಬಹಳ ದುಡ್ಡುಳ್ಳವಳನ್ನು ಮದುವೆಯಾಗು; ಸಿರಿವಂತಳನ್ನು ಯಾ ಸ್ಥಿತಿವಂತಳನ್ನು ಮದುವೆಯಾಗು.
  5. small fortune = fortune(8): spent a small fortune on it ಅದಕ್ಕಾಗಿ ಬೇಕಾದಷ್ಟು ಹಣ ವೆಚ್ಚ ಮಾಡಿದೆ.
  6. tell fortunes ಅದೃಷ್ಟ, ಭವಿಷ್ಯ, ಕಣಿ – ಹೇಳು.
  7. tell (someone) his fortune = ಪದಗುಚ್ಛ \((6)\).
  8. try the fortune of war ಯುದ್ಧದಲ್ಲಿ ಅದೃಷ್ಟವನ್ನು ಪರೀಕ್ಷಿಸಿಬಿಡು.
See also 1fortune
2fortune ಹಾರ್ಚೂ(ರ್ಟ್ಯೂ)ನ್‍
ಅಕರ್ಮಕ ಕ್ರಿಯಾಪದ
  1. (ಪ್ರಾಚೀನ ಪ್ರಯೋಗ ಯಾ ಕಾವ್ಯಪ್ರಯೋಗ) ಸಂಭವಿಸು: ಆಗು: it fortuned that... ಈ ರೀತಿ... ಒದಗಿತು, ಸಂಭವಿಸಿತು.
  2. ಆಕಸ್ಮಿಕವಾಗಿ – ಬರು, ದೊರೆ, ಒದಗು, ಸಂಧಿಸು, ಸಂಭವಿಸು.