fortify ಹಾರ್ಟಿಹೈ
ಸಕರ್ಮಕ ಕ್ರಿಯಾಪದ
  1. (ಕಟ್ಟಡವನ್ನು, ಸ್ಥಳವನ್ನು) ಬಲಪಡಿಸು.
  2. ವೀರ್ಯವತ್ತಾಗಿ, ಬಲಯುತವಾಗಿ, ಕಷ್ಟಸಹಿಷ್ಣುವಾಗಿ – ಮಾಡು.
  3. ಮನೋಬಲ ಯಾ ನೈತಿಕಬಲ ಉಂಟು ಮಾಡು; ಮಾನಸಿಕ ಯಾ ನೈತಿಕ ಶಕ್ತಿ ಹೆಚ್ಚಿಸು.
  4. ಹುರಿದುಂಬಿಸು; ಪ್ರೋತ್ಸಾಹಿಸು; ಉತ್ತೇಜನಕೊಡು.
  5. (ಆಹಾರ) ಪುಷ್ಟಿಗೊಳಿಸು; (ಮುಖ್ಯವಾಗಿ ಜೀವಸತ್ತ್ವಗಳಿಂದ) ಪೌಷ್ಟಿಕಾಂಶ ಹೆಚ್ಚಿಸು.
  6. (ಮಾದಕದ್ರವ್ಯಗಳಿಗೆ) ಆಲ್ಕಹಾಲ್‍ ಸೇರಿಸಿ – ಬಲಪಡಿಸು, ಸಾರ ಹೆಚ್ಚಿಸು.
  7. (ಪ್ರಾಚೀನ ಪ್ರಯೋಗ) (ಹೇಳಿಕೆಯನ್ನು ತಕ್ಕ ಪ್ರಮಾಣಗಳಿಂದ, ಸಾಕ್ಷ್ಯಗಳಿಂದ) ಸಮರ್ಥಿಸು; ದೃಢಪಡಿಸು.
  8. (ಊರು, ಸೈನ್ಯ, ಮೊದಲಾದವುಗಳಿಗೆ) (ಕೋಟೆ, ಆಳುವೇರಿ, ಮೊದಲಾದವುಗಳನ್ನು ನಿರ್ಮಿಸುವ ಮೂಲಕ) ರಕ್ಷಣೆ – ಒದಗಿಸು, ಒದಗಿಸಿಕೊ.
ಅಕರ್ಮಕ ಕ್ರಿಯಾಪದ

ಕೋಟೆಕೊತ್ತಲಗಳನ್ನು ಕಟ್ಟು; ದುರ್ಗ ರಚಿಸು.