fortification ಹಾರ್ಟಿಹಿಕೇಷನ್‍
ನಾಮವಾಚಕ
  1. ಕೋಟೆ–ನಿರ್ಮಾಣ, ಕಟ್ಟುವುದು.
  2. ಸಾರವರ್ಧನೆ; ವೈನಿಗೆ ಆಲ್ಕಹಾಲ್‍ ಬೆರಸಿ ಅದರ ಶಕ್ತಿ ಹೆಚ್ಚಿಸುವುದು.
  3. (ಸೈನ್ಯ) (ರಕ್ಷಣಾರ್ಥವಾಗಿ ಕಟ್ಟುವ) ದುರ್ಗಶಿಲ್ಪ; ಕೋಟೆ ಮೊದಲಾದವನ್ನು ಕಟ್ಟುವ ಕಲೆ, ಶಾಸ್ತ್ರ.
  4. (ಸಾಮಾನ್ಯವಾಗಿ ಬಹುವಚನದಲ್ಲಿ) ರಕ್ಷಣಾಸಾಧನಗಳು (ಕೋಟೆಯ ಗೋಡೆ, ಆಳುವೇರಿ, ಬತೇರಿ, ಮೊದಲಾದವು).
  5. (ರೂಪಕವಾಗಿ) ರಕ್ಷಣೋಪಾಯಗಳು.