fort ಹೋರ್ಟ್‍
ನಾಮವಾಚಕ
  1. ಕೋಟೆ; ದುರ್ಗ; ರಕ್ಷಣಾವರಣವುಳ್ಳ ಸ್ಥಳ (ಮುಖ್ಯವಾಗಿ ಒಂದು ಕಟ್ಟಡ ಯಾ ಒಟ್ಟಿಗಿರುವ ಅನೇಕ ಸೈನಿಕ ಕಟ್ಟಡಗಳು).
  2. (ಚರಿತ್ರೆ) (ಹಿಂದಿನ ಕಾಲದಲ್ಲಿ ಕೋಟೆಯಿಂದ ಸಂರಕ್ಷಿತವಾಗಿದ್ದ) ವ್ಯಾಪಾರ ಕೋಠಿ.
ನುಡಿಗಟ್ಟು

hold the fort

  1. ತಾತ್ಕಾಲಿಕವಾಗಿ ಒಬ್ಬರ ಬದಲಿಗೆ ಕೆಲಸಮಾಡು; ಬದಲಿಯಾಗಿರು; ಒಬ್ಬರ ಗೈರುಹಾಜರಿಯಲ್ಲಿ ಅವನ ಜವಾಬ್ದಾರಿ ಹೊರು, ಕೆಲಸ ನೋಡಿಕೊ: I’m going out for an hour or so, can you hold the fort? ನಾನು ಸುಮಾರು ಒಂದು ಗಂಟೆ ಹೊತ್ತು ಹೊರಗೆ ಹೋಗುತ್ತಿದ್ದೇನೆ, ನೀನು ನನ್ನ ಕೆಲಸ ಮಾಡುತ್ತಿರುತ್ತೀಯಾ?
  2. (ತನ್ನ ಸ್ಥಾನದಲ್ಲಿದ್ದುಕೊಂಡು) ಉತ್ಕಟಪರಿಸ್ಥಿತಿಯನ್ನು ನಿಭಾಯಿಸು.