formula ಹಾರ್ಮ್ಯುಲ
ನಾಮವಾಚಕ
(ಬಹುವಚನ formulas ಯಾ formulae ಉಚ್ಚಾರಣೆ ಹಾರ್ಮ್ಯುಲೀ).
  1. ಸೂತ್ರ; ಲಕ್ಷಣ ತಿಳಿಸುವ ಯಾ ತತ್ತ್ವ ನಿರೂಪಿಸುವ ನಿಷ್ಕೃಷ್ಟ ಪದಗಳ ಸಂಕ್ಷಿಪ್ತ ರಚನೆ.
  2. ಯಾವುದೇ ಉತ್ಸವ, ಸಾಮಾಜಿಕ ಸಂದರ್ಭ, ಮೊದಲಾದವುಗಳಲ್ಲಿ ಬಳಸಲು ವಿಧಿಸಿರುವ ಹೇಳಿಕೆ; ಉಕ್ತಿ; ಒಕ್ಕಣೆ; ಸೂಕ್ತಿ.
  3. ಗೊಡ್ಡು ಸಂಪ್ರದಾಯ; ಅರ್ಥತಿಳಿಯದೆ ಅನುಸರಿಸುವ ನಿಯಮ; ಕೇವಲ ಪರಂಪರಾಗತ ಪದ್ಧತಿ ಯಾ ನಂಬಿಕೆ.
  4. ಪಾಕಸೂತ್ರ ಯಾ ಪರಿಕರಗಳ ಪಟ್ಟಿ; ಅಡುಗೆ, ಔಷಧಿ, ಮೊದಲಾದವುಗಳ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳ ಪಟ್ಟಿ, ಅನುಸರಿಸುವ ವಿಧಾನ, ಮೊದಲಾದವು.
  5. ಸಮನ್ವಯ ಸೂತ್ರ; ಭಿನ್ನಾಭಿಪ್ರಾಯಗಳನ್ನು ಯಾ ಭಿನ್ನೋದ್ದೇಶಗಳನ್ನು ಸಾಮರಸ್ಯಗೊಳಿಸಲು ರೂಪಿಸಿಕೊಂಡ ಸೂತ್ರ: diplomatists seeking a formula ಸಮನ್ವಯ ಸೂತ್ರವೊಂದನ್ನು ಹುಡುಕುತ್ತಿರುವ ರಾಜತಂತ್ರಜ್ಞರು.
  6. ಸೂತ್ರ:
    1. (ಬೀಜಗಣಿತ) ಬೀಜಗಣಿತ ಸಂಕೇತಗಳಿಂದ ಸೂಚಿಸುವ ಯಾವುದೇ ನಿಯಮ ಯಾ ಉಕ್ತಿ.
    2. ಯಾವುದೇ ಪದಾರ್ಥದ ರಾಸಾಯನಿಕ ಸಂಯೋಜನೆಯನ್ನು ಸೂಚಿಸಲು ಬಳಸುವ ರಾಸಾಯನಿಕ ಸಂಕೇತಗಳನ್ನೊಳಗೊಂಡ ಉಕ್ತಿ.
  7. (ಅಮೆರಿಕನ್‍ ಪ್ರಯೋಗ) ಪಾಕಸೂತ್ರಕ್ಕೆ ಅನುಸಾರವಾಗಿ ತಯಾರಿಸಿದ ಮಗುವಿನ ಆಹಾರ; ಮಗುವಿಗೆ ಕುಡಿಸಲು ಹಾಲು, ಸಕ್ಕರೆಗಳನ್ನು ನಿಗದಿಯಾದ ಪ್ರಮಾದಲ್ಲಿ ಬೆರೆಸಿ ಸಿದ್ಧಪಡಿಸಿದ ಶಿಶುವಿನ ಆಹಾರ.
  8. ಪಟ್ಟಿರಚನೆ; ವಿಷಯಗಳನ್ನು ಸಂಕೇತಗಳು ಹಾಗೂ ಅಂಶಗಳಲ್ಲಿ ಪಟ್ಟಿ ಮಾಡುವುದು.
  9. (ಮುಖ್ಯವಾಗಿ ಎಂಜಿನಿನ ಸಾಮರ್ಥ್ಯದ ಆಧಾರದ ಮೇಲೆ) ರೇಸಿಂಗ್‍ ಕಾರನ್ನು ವರ್ಗೀಕರಿಸುವುದು.
ಪದಗುಚ್ಛ
  1. empirical formula ಮಾತ್ರಕ ಸೂತ್ರ; ಸಂಯುಕ್ತದಲ್ಲಿನ ವಿವಿಧ ಧಾತುಗಳ ಪರಮಾಣ್ವಕ ಅನುಪಾತವನ್ನು ಸೂಚಿಸುವ ಸೂತ್ರ.
  2. molecular formula ಅಣುಸೂತ್ರ; ಸಂಯುಕ್ತದ ಅಣುವಿನಲ್ಲಿರುವ ವಿವಿಧ ಪರಮಾಣುಗಳ ಸಂಖ್ಯೆಗಳನ್ನು ಸೂಚಿಸುವ ಸೂತ್ರ.
  3. structural formula ರಚನಾಸೂತ್ರ; ಸಂಯುಕ್ತದ ಅಣುವಿನಲ್ಲಿರುವ ಪರಮಾಣುಗಳು ಒಂದರೊಡನೊಂದು ಹೇಗೆ ಸೇರಿಕೊಂಡಿವೆ ಎಂಬುದನ್ನು ಸೂಚಿಸುವ ಸೂತ್ರ.