See also 2former  3former
1former ಹಾರ್ಮರ್‍
ಗುಣವಾಚಕ
  1. ಹಿಂದಿನ; ಹಿಂದಿನ ಕಾಲದ; ಪೂರ್ವದ; ಪೂರ್ವಕಾಲದ: in former times ಹಿಂದಿನ ಕಾಲದಲ್ಲಿ.
  2. ಈಗಿಗಿಂತ ಹಿಂದಿನ ಅವಧಿಯ; ಪೂರ್ವದ; ಮೊದಲಿನ; ಮುಂಚಿನ; ಹಳೆಯ: like her former self ಆಕೆಯ ಮುಂಚಿನ ಸ್ಥಿತಿಯಂತೆ ಯಾ ರೂಪದಂತೆ. our former haunts ನಮ್ಮ ಹಳೆಯ ನೆಲೆಗಳು; ನಾವು ಹಿಂದೆ ಓಡಾಡುತ್ತಿದ್ದ, ವಿಹರಿಸುತ್ತಿದ್ದ ಸ್ಥಳಗಳು.
ಪದಗುಚ್ಛ

the former ಮೊದಲನೆಯ; ಪೂರ್ವದ; ಎರಡರಲ್ಲಿ ಯಾ ಇಬ್ಬರಲ್ಲಿ ಪ್ರಥಮ.

See also 1former  3former
2former ಹಾರ್ಮರ್‍
ನಾಮವಾಚಕ

ಪೂರ್ವ; ಪ್ರಥಮ; (ಇಬ್ಬರಲ್ಲಿ) ಮೊದಲನೆಯವನು ಯಾ ಎರಡರಲ್ಲಿ ಮೊದಲನೆಯದು.

See also 1former  2former
3former ಹಾರ್ಮರ್‍
ನಾಮವಾಚಕ
  1. ರೂಪರಚಕ:
    1. ರೂಪಿಸುವವ(ಳು); ಸೃಷ್ಟಿಸುವವ(ಳು); ರೂಪಕೊಡುವವ(ಳು).
    2. ವಸ್ತುಗಳಿಗೆ ರೂಪ ಕೊಡಲು ಬಳಸುವ ಹತ್ಯಾರುಗಳು ಮೊದಲಾದವು.
  2. ಹಾರ್ಮರು:
    1. (ವಿದ್ಯುದ್ವಿಜ್ಞಾನ) ವಾಹಕ ಸುರುಳಿಗೆ ಆಧಾರವಾಗಿರುವ ಸರಳು, ಚೌಕಟ್ಟು, ಇತ್ಯಾದಿ.
    2. (ವಾಯುಯಾನ) ವಿಮಾನದ ರೆಕ್ಕೆ ಮೊದಲಾದವುಗಳ ರೂಪವನ್ನು ನಿರ್ಧರಿಸುವ ಬಂಧಕ ಅಡ್ಡಪಟ್ಟಿಗಳು.