formality ಹಾರ್ಮ್ಯಾಲಿಟಿ
ನಾಮವಾಚಕ
  1. ನಿಯಮಾನುಸರಣೆ; ನಿಯಮಾನುಷ್ಠಾನ.
  2. ಔಚಿತ್ಯ; ವಿಹಿತತೆ.
  3. ಶಾಸ್ತ್ರಾಚಾರ; ಶಾಸ್ತ್ರೋಕ್ತ ಕ್ರಮ; ವಿಧ್ಯುಕ್ತರೀತಿ; ವಿಹಿತವಿಧಾನ; ತುಂಬ ವಿಸ್ತಾರವಾದ ಕಾರ್ಯವಿಧಾನ.
  4. ಬಾಹ್ಯೋಪಚಾರ; ಔಪಚಾರಿಕ ಯಾ ಸಾಂಪ್ರದಾಯಿಕ ನಿಯಮ, ವಿಧಿ, ಪದ್ಧತಿ, ರೂಢಿ, ನಡವಳಿಕೆ ಯಾ ಕ್ರಿಯೆ.
  5. ಶಿಷ್ಟಾಚಾರ; ವಿಹಿತಾಚರಣೆ; ಮರ್ಯಾದೆ ಯಾ ಪದ್ಧತಿ ನಿರೀಕ್ಷಿಸುವ ನಡೆ, ಕಾರ್ಯ.
  6. ಔಪಚಾರಿಕ ವರ್ತನೆ; ಮರ್ಯಾದೆಗಳಲ್ಲಿ ಅತಿ ಕಟ್ಟುನಿಟ್ಟಾಗಿರುವುದು.
  7. ಅತಿ ಕಟ್ಟುನಿಟ್ಟು; ಅತಿ ನಿಷ್ಠುರತೆ; ಯೋಜನೆ ಯಾ ವ್ಯವಸ್ಥೆಯಲ್ಲಿ ತೀರ ಬಿಗಿಯಾಗಿರುವುದು.