formalism ಹಾರ್ಮಲಿಸಮ್‍
ನಾಮವಾಚಕ
  1. ಅತಿಯಾದ ನಿಯಮಬದ್ಧತೆ; ಅತಿ ನಿಯಮನಿಷ್ಠೆ; ಅತಿ ಸಾಂಪ್ರದಾಯಿಕತೆ.
  2. ಹಾರ್ಮಲಿಸ್‍ಮ್‍; ರೂಪನಿಷ್ಠೆ:
    1. ಗಣಿತ ಸಂಕೇತಗಳ ಅರ್ಥವನ್ನು ಕಡೆಗಣಿಸಿ ಗಣಿತಕ್ರಿಯೆಗಳಿಗೆ ಪ್ರಾಧಾನ್ಯನೀಡುವುದು.
    2. ಭೌತವಿದ್ಯಮಾನಗಳನ್ನು ಕೇವಲ ಗಣಿತೀಯವಾಗಿ ನಿರೂಪಿಸುವುದು.
  3. ಬಾಹ್ಯಾಚಾರ; ಬಹಿರಾಚರಣೆ; ಒಳ ಅರ್ಥವನ್ನು ಗಮನಿಸದೆ ಕೇವಲ ಬಾಹ್ಯ ವಿಧಿಗಳ ಯಾ ಆಚಾರಗಳ ಅನುಸರಣೆ.
  4. (ನಾಟಕ ಕಲೆ) ಸಾಂಕೇತಿಕ ಮತ್ತು ನಿರ್ದಿಷ್ಟ ಸಂಪ್ರದಾಯವೊಂದನ್ನು ಅನುಸರಿಸಿದ ಪ್ರದರ್ಶನ.
  5. (ಹೀನಾರ್ಥಕ ಪ್ರಯೋಗ) ರೂಪನಿಷ್ಠೆ; ರೂಪಪ್ರಾಧಾನ್ಯ; ವಿಷಯವನ್ನು ಕಡೆಗಣಿಸಿ ಅದನ್ನು ಅಭಿವ್ಯಕ್ತಿಸುವ ರೂಪಕ್ಕೆ, ರಚನೆಗೆ ನೀಡುವ ಪ್ರಾಮುಖ್ಯ, ಪ್ರಾಧಾನ್ಯ.