See also 2formal
1formal ಹಾರ್ಮಲ್‍
ಗುಣವಾಚಕ
  1. (ತತ್ತ್ವಶಾಸ್ತ್ರ) ಸ್ವರೂಪಭೂತ; ಸಾರಭೂತ; ಮೂಲಭೂತ; ಒಂದು ವಸ್ತುವಿನ ನೈಜ ಸ್ವರೂಪಕ್ಕೆ ಸಂಬಂಧಿಸಿದ: formal cause ಸಂಕಲ್ಪ ಕಾರಣ; ಸ್ವರೂಪ ಕಾರಣ.
  2. ಬಾಹ್ಯಾಕಾರದ; ಹೊರ ರೂಪು, ಆಕಾರ, ತೋರ್ಕೆ, ಜೋಡಣೆ ಯಾ ಲಕ್ಷಣಗಳು – ಇವುಗಳಿಗೆ ಸಂಬಂಧಿಸಿದ.
  3. (ತರ್ಕಶಾಸ್ತ್ರ) ವಾದದ ವಿಷಯಕ್ಕೆ ಮಾತ್ರ ಸಂಬಂಧಿಸಿದ: (ಅರ್ಥಾತ್ಮಕವಲ್ಲದೆ) ಕೇವಲ ಶಾಬ್ದಿಕ ಯಾ ಶಬ್ದಾತ್ಮಕವಾದ.
  4. (ರೂಪ ನಿರ್ದುಷ್ಟವಾಗಿರುವ ಕಾರಣ) ತರ್ಕಸಮ್ಮತವಾದ.
  5. (ಇಂಗಿತ ಮಾತ್ರ ಆಗಿರದೆ) ಸ್ಪಷ್ಟವಾಗಿಯೂ ಖಚಿತವಾಗಿಯೂ ನಿರೂಪಿಸಿದ.
  6. ಶಾಸ್ತ್ರೋಕ್ತ; ವಿಧ್ಯುಕ್ತ; ಸಾಂಪ್ರದಾಯಿಕ; ಕಲೆ ಮೊದಲಾದವುಗಳ ಪ್ರಕಾರಗಳಿಗೆ ಯಾ ವಿಧಿ ನಿಯಮಗಳಿಗೆ ಅನುಸಾರವಾಗಿರುವ.
  7. ಕಾಟಾಚಾರದ; ತತ್ತ್ವಕ್ಕೆ ಯಾ ಅರ್ಥಕ್ಕೆ ಗಮನ ಕೊಡದೆ ಕೇವಲ ಬಾಹ್ಯಾಚರಣೆಯ.
  8. ಔಪಚಾರಿಕ; ಕೇವಲ ರೂಢಿಯ; ಸಂಪ್ರದಾಯದ: formal call ಒಂದು ಔಪಚಾರಿಕ ಭೇಟಿ.
  9. ಸಂಪ್ರದಾಯಬದ್ಧ; ವಿಧಿಬದ್ಧ; ನಿಯಮನಿಷ್ಠ; ವಿಹಿತವಿಧಾನಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವ; ಶಾಸ್ತ್ರೋಕ್ತ ಕ್ರಮಗಳನ್ನು ಚಾಚೂ ತಪ್ಪದ; ವಿಧ್ಯುಕ್ತ ಆಚಾರಗಳಲ್ಲಿ ತೀರ ಖಚಿತ ನಿಷ್ಠೆ ಇರುವ.
  10. ಕ್ರಮಬದ್ಧ; ವ್ಯವಸ್ಥಿತ; ಸಕ್ರಮದ ರಚನೆಯುಳ್ಳ: formal garden ವ್ಯವಸ್ಥಿತ(ವಾಗಿ ರೂಪಿಸಿದ) ಉದ್ಯಾನ.
  11. ಬಿಗುಮಾನದ; ಸಾಂಪ್ರದಾಯಿಕ ನಡೆನುಡಿಯಲ್ಲಿ ತೀರ ಔಪಚಾರಿಕವಾಗಿ ವರ್ತಿಸುವ.
  12. ಸಮಪ್ರಮಾಣದ ಯಾ ಸಮರೂಪತೆಯ.
  13. ಅತಿರೇಕದ; ಅತಿ ಬಿಗಿಯ; ಅತಿ ಕಟ್ಟುನಿಟ್ಟಿನ; ಅತಿ ನಿಷ್ಠ.
  14. ಕ್ರಮನಿಷ್ಠ; ವ್ಯವಸ್ಥಿತ ವಿಧಾನಗಳನ್ನು ಸಕ್ರಮವಾಗಿ ಅನುಸರಿಸುವ.
See also 1formal
2formal ಹಾರ್ಮಲ್‍
ನಾಮವಾಚಕ

(ಅಮೆರಿಕನ್‍ ಪ್ರಯೋಗ)

  1. ಸಂಜೆಯುಡುಪು; ಸಾಯಂಕಾಲ ಧರಿಸುವ ಉಡುಪು.
  2. ಸಂಜೆಯುಡುಪು ಧರಿಸುವ (ಭೋಜನಕೂಟ ಮೊದಲಾದ) ಸಂದರ್ಭ.