See also 2form
1form ಹಾರ್ಮ್‍
ನಾಮವಾಚಕ
  1. ರೂಪು; ರೂಪ; ಆಕಾರ.
  2. (ಮುಖ್ಯವಾಗಿ ಬಣ್ಣವನ್ನು ಬಿಟ್ಟು) (ಕಣ್ಣಿಗೆ ಕಾಣುವ) ತೋರ್ಕೆ; ನೋಟ; ರೂಪ; ಆಕೃತಿ.
  3. ಮೈಕಟ್ಟು; ದೇಹದ ಆಕಾರ: face and form ಮುಖ ಮತ್ತು ಆಕಾರ.
  4. (ನೋಟಕ್ಕೆ ಯಾ ಸ್ಪರ್ಶಕ್ಕೆ ಗೋಚರವಾದಂತೆ, ಮನುಷ್ಯನ ಯಾ ಪ್ರಾಣಿಯ) ಆಕಾರ; ಮೂರ್ತಿ: saw a form before me ನನ್ನೆದುರಿಗೆ ಒಂದು ಆಕಾರ ಕಂಡೆ.
  5. (ತತ್ತ್ವಶಾಸ್ತ್ರ) (ತಾರ್ಕಿಕ ಪಂಥ) ಸ್ವರೂಪ; ವಸ್ತುವಿನ ಸಾರಭೂತವೂ ನಿರ್ಣಾಯಕವೂ ಆದ ತತ್ತ್ವ; ಯಾವುದೇ ವಸ್ತುವನ್ನು (ಭೌತದ್ರವ್ಯವನ್ನು) ಒಂದು ನಿರ್ದಿಷ್ಟ ವರ್ಗಕ್ಕೆ ಯಾ ಜಾತಿಗೆ ಸೇರಿದುದನ್ನಾಗಿ ಮಾಡುವ ಲಕ್ಷಣ.
  6. (ತತ್ತ್ವಶಾಸ್ತ್ರ) (ಬೇಕನ್ನನ ಸಿದ್ಧಾಂತದಲ್ಲಿ) ಸ್ವರೂಪ, ಸ್ಥಿತಿ, ಯಾ ಲಕ್ಷಣ; ಇಂದ್ರಿಯಗೋಚರವಾದ ಗುಣದ ಯಾ ವಸ್ತುವಿನ ಇರವು (ಅಸ್ತಿತ್ವವು) ಯಾವ ನೈಜವಾದ ಯಾ ವಾಸ್ತವವಾದ ಸ್ಥಿತಿಗತಿಗಳನ್ನು ಅವಲಂಬಿಸಿದೆಯೋ ಮತ್ತು ಯಾವುದನ್ನು ಅರಿತರೆ ಆ ಗುಣವನ್ನು ಯಾ ವಸ್ತುವನ್ನು ಸರಾಗವಾಗಿ ಸೃಷ್ಟಿಸಬಹುದೋ ಅಂತಹ ಸ್ಥಿತಿಗತಿಗಳು.
  7. (ತತ್ತ್ವಶಾಸ್ತ್ರ) (ಕ್ಯಾಂಟನ ಸಿದ್ಧಾಂತದಲ್ಲಿ) (ಸ್ವ)ರೂಪ; ಜ್ಞೇಯವಸ್ತುವಿಗೆ ನೈಜತೆಯನ್ನು ಕೊಡುವ, (ಕ್ಯಾಂಟನ ದೃಷ್ಟಿಯಲ್ಲಿ) ವ್ಯಕ್ತಿನಿಷ್ಠವಾದ, ಜ್ಞಾನದ ಅಂಶ; ವಸ್ತುವಿನ ವಿವಿಧಾಂಶಗಳನ್ನು ಒಂದುಗೂಡಿಸಿ ಏಕತೆಯನ್ನುಂಟುಮಾಡುವ (ಸ್ವ)ರೂಪಕಾರಕ ತತ್ತ್ವ.
  8. (ಒಂದು ವಸ್ತುವು ಇರುವ ಯಾ ಅಭಿವ್ಯಕ್ತಿಗೊಳಿಸಿಕೊಳ್ಳುವ ನಿರ್ದಿಷ್ಟ) ತೆರ; ಬಗೆ; ವಿಧ; ಕ್ರಮ; ರೀತಿ; ವಿಧಾನ: in the form of ಈ ತೆರನಾಗಿ; ಈ ರೀತಿ(ಯಲ್ಲಿ).
  9. (ಒಂದು ವಸ್ತುವು ಇರುವ ಯಾ ಅಭಿವ್ಯಕ್ತಿಗೊಳಿಸಿಕೊಳ್ಳುವ ವಿವಿಧ ರೂಪಗಳಲ್ಲಿ ಒಂದು) ಪ್ರಭೇದ; ಬಗೆ; ಜಾತಿ; ವರ್ಗ.
  10. (ವ್ಯಾಕರಣ) (ಅರ್ಥದೊಡನೆ ತಾರತಮ್ಯ ಮಾಡುವಾಗ ಪದಗಳ ಹೊರಲಕ್ಷಣಗಳಾದ ಕಾಗುಣಿತ, ಉಚ್ಚಾರಣೆ, ನಿಷ್ಪತ್ತಿಗಳಲ್ಲಿ ಒಂದು ಪದವು ತಳೆಯುವ ವಿವಿಧ ರೂಪಗಳಲ್ಲೊಂದು) ರೂಪ.
  11. (ಮುಖ್ಯವಾಗಿ ಬ್ರಿಟಿಷ್‍ ಪಬ್ಲಿಕ್‍ ಸ್ಕೂಲುಗಳಲ್ಲಿ 1ರಿಂದ 6ರ ವರೆಗಿನ ಒಂದು) ತರಗತಿ; ವರ್ಗ; ಇಯತ್ತೆ.
  12. (ಸಾಹಿತ್ಯ ಯಾ ಸಂಗೀತಕೃತಿಯ)
    1. ರೂಪ; ಪ್ರಕಾರ; ಪ್ರಭೇದ.
    2. ರಚನೆ; ಬಂಧ.
    3. ರೀತಿ; ಶೈಲಿ.
  13. ವಿಹಿತ ವಿಧಾನ; ರೂಢಿ; ಸಂಪ್ರದಾಯ; ವಿಹಿತ ಕ್ರಮ; ಪದ್ಧತಿಯಿಂದ ಬಂದ ನಡೆವಳಿಕೆ, ಆಚಾರ; ವಾಡಿಕೆಯಾಗಿರುವ ವಿಧಿ.
  14. (ಧಾರ್ಮಿಕ ಆಚರಣೆ, ದಸ್ತಾವೇಜು, ಮೊದಲಾದವುಗಳಲ್ಲಿ ಬಳಸುವ) ಸೂತ್ರ; ವಿಧ್ಯುಕ್ತ ಪದಕ್ರಮ; ಗೊತ್ತು ಮಾಡಿದ ಪದಕ್ರಮ.
  15. ಕ್ರಮಬದ್ಧವಾಗಿ ಬರೆದ ದಸ್ತಾವೇಜು; ನಿಯಮಾನುಸಾರ ಬರೆದ ಕಾಗದಪತ್ರ.
  16. ಹಾರಮು; ನಿಯಮಾನುಸಾರ ಬರೆಯಲು ಬೇಕಾದ ವಿವಿಧ ವಿವರಗಳನ್ನು ತುಂಬಲು ಖಾಲಿಕಲಮುಗಳುಳ್ಳ ದಸ್ತಾವೇಜು.
  17. ಬರಿಯ ಶಾಸ್ತ್ರ; ಶಾಸ್ತ್ರಕ್ಕಾಗಿ ಆಚರಣೆ; ಔಪಚಾರಿಕ ಅನುಷ್ಠಾನ.
  18. ಶಿಷ್ಟಾಚಾರ; ವಿಹಿತಾಚರಣೆ; ನಿಯಮಕ್ಕೆ ಯಾ ಪದ್ಧತಿಗೆ ಅನುಗುಣವಾದ ನಡವಳಿಕೆ, ವ್ಯವಹಾರ: good form (ಕಾಲ, ಸಂದರ್ಭ, ಮರ್ಯಾದೆಗಳಿಗೆ) ಉಚಿತ ವ್ಯವಹಾರ; ಉತ್ತಮ ವರ್ತನೆ; ಯೋಗ್ಯ ನಡವಳಿಕೆ; ಪ್ರಚಲಿತ ಆದರ್ಶಗಳಿಗನುಗುಣವಾದ ವರ್ತನೆ. bad form (ಕಾಲ, ಸಂದರ್ಭ, ಮರ್ಯಾದೆಗಳಿಗೆ) ತಗದ ವರ್ತನೆ; ಅನುಚಿತ ನಡವಳಿಕೆ.
  19. (ಸರಿಯಾದ) ಕಾರ್ಯವಿಧಾನ; ರೀತಿ; ವ್ಯವಹಾರ ಕ್ರಮ: he knows the form ಅವನಿಗೆ ಸರಿಯಾದ ಕಾರ್ಯವಿಧಾನ ಗೊತ್ತು.
  20. ಆರೋಗ್ಯದ ಮತ್ತು ತರಬೇತಿಯ ಸ್ಥಿತಿ: in form (ವ್ಯಾಯಾಮ ಪಟುಗಳ, ಮಲ್ಲರ ಮತ್ತು ಪಂದ್ಯದ ಕುದುರೆಗಳ ವಿಷಯದಲ್ಲಿ) ಆರೋಗ್ಯದ ಮತ್ತು ತರಬೇತಿಯ ಮಟ್ಟದಲ್ಲಿ ಇರುವ. off form ತಕ್ಕ ಸ್ಥಿತಿಯಲ್ಲಿ ಇರದ.
  21. ಗೆಲವು; ಉಲ್ಲಾಸ; ಹುರುಪು; ಉತ್ಸಾಹ; ಕಳೆ: was in great form ಅಪಾರ ಉಲ್ಲಾಸದಲ್ಲಿದ್ದ.
  22. ಬೆಂಚು; ಬೆನ್ನಿಲ್ಲದ ಉದ್ದನೆಯ ಕಾಲುಮಣೆ.
  23. (ಮುದ್ರಣ) ಹಾರಂ ಒಟ್ಟಿಗೆ ಮುದ್ರಿಸಲು ಚೌಕಟ್ಟಿನಲ್ಲಿ ಬಂಧಿಸಿ ಅಣಿಮಾಡಿರುವ ಮೊಳೆಗಳ ಜೋಡಣೆ.
  24. ಮೊಲದ ಹಕ್ಕೆ.
  25. (ಜೂಜು ಕಟ್ಟುವವರು ಬಳಸುವ) ಜೂಜು ಕುದುರೆಯ ಹಿಂದಿನ ಸಾಧನೆಗಳ ವಿವರಗಳುಳ್ಳ ಪಟ್ಟಿ.
  26. (ಅಶಿಷ್ಟ) ಪೊಲೀಸ್‍ ರಿಕಾರ್ಡು; ಆಪಾದನೆಗಳ ದಾಖಲೆ ಪಟ್ಟಿ, ಕಡತ.
  27. ಸೆಂಟ್ರಿಂಗು; ಊರೆಕಟ್ಟು; ಕಾಂಕ್ರೀಟಿಗೆ ಬೇಕಾದ ಆಕಾರ ಕೊಟ್ಟು, ‘ಸೆಟ್‍’ ಆಗುವಂತೆ ಮಾಡಲು ಹಾಕಿದ ತಾತ್ಕಾಲಿಕ ರಚನೆ.
ಪದಗುಚ್ಛ
  1. common form ವಾಡಿಕೆ ಸಂಪ್ರದಾಯ; ಸಾಮಾನ್ಯವಾಗಿ ಮಾಡುವ, ವಿಶೇಷ ಅರ್ಥವೇನೂ ಇಲ್ಲದ್ದು.
  2. form criticism ಕೃತಿರೂಪ ವಿಮರ್ಶೆ; ಗ್ರಾಂಥಿಕ ವಿಮರ್ಶೆ; ಬೈಬಲ್‍ ಮೊದಲಾದವುಗಳಲ್ಲಿರುವ ಗಾದೆಗಳು, ಪುರಾಣಕಥೆಗಳು, ಮೊದಲಾದ ಪ್ರಕಾರಗಳ ಇತಿಹಾಸವನ್ನು ಗುರುತಿಸುವ ಮೂಲಕ ನಡೆಸುವ ಗ್ರಂಥವಿಮರ್ಶೆ.
  3. form letter ಸಿದ್ಧಪತ್ರ; ವ್ಯಾಪಾರೀ ಸಂಸ್ಥೆಗಳು ವಿಳಾಸವೊಂದನ್ನು ಬಿಟ್ಟು ಬೇರೆ ಏನೂ ಬದಲಿಸದೆ, ಎಲ್ಲರಿಗೂ ಕಳುಹಿಸುವ ಪದೇಪದೇ ಬರುವ ವಿಷಯಗಳನ್ನು ಕುರಿತ ಪತ್ರ.
  4. in due form ವಿಹಿತ ವಿಧಾನದಲ್ಲಿ; ಸಂಪ್ರದಾಯಾನುಸಾರ; ಯಥಾವಿಧಿ; ರೂಢಿಗನುಗುಣವಾಗಿ; ವಾಡಿಕೆಯಂತೆ; ಪದ್ಧತಿಯಂತೆ.
  5. in good (or top) form (ಪಂದ್ಯ, ಸಂಗೀತ, ಅಭಿನಯ, ಭಾಷಣ, ಮೊದಲಾದವನ್ನು ಮಾಡುವಾಗ) ಅತ್ಯುತ್ತಮ ರೀತಿಯಲ್ಲಿ; ಉತ್ಕೃಷ್ಟ ಸ್ಥಿತಿಯಲ್ಲಿ.
  6. matter of form (ಬರಿಯ) ಮಾಮೂಲು: ಸರ್ವೇಸಾಧಾರಣ ವಿಧಾನ; ಕೇವಲ ಔಪಚಾರಿಕ ಕ್ರಮ.
  7. off form ಚೆನ್ನಾಗಿ ಆಡದಿರುವುದು ಮೊದಲಾದವು.
  8. on form = ಪದಗುಚ್ಛ \((4)\).
See also 1form
2form ಹಾರ್ಮ್‍
ಸಕರ್ಮಕ ಕ್ರಿಯಾಪದ
  1. ಆಕಾರಕೊಡು; ರೂಪುಕೊಡು; ಆಕಾರಕ್ಕೆ ತರು; ರೂಪಿಸು; ಒಂದು ಆಕೃತಿಗೆ ಯಾ ಮಾದರಿಗೆ ತಿದ್ದು.
  2. (ವ್ಯಕ್ತಿ, ಬುದ್ಧಿಶಕ್ತಿ, ಮೊದಲಾದವನ್ನು ಶಿಸ್ತಿಗೊಳಪಡಿಸಿ) ತಿದ್ದು; ತರಬೇತು ಮಾಡು; ಶಿಕ್ಷಣ ಕೊಡು.
  3. (ವಾಣಿಜ್ಯ ಯಾ ಸೈನಿಕ ಸಂಸ್ಥೆ ಮೊದಲಾದವುಗಳನ್ನಾಗಿ) ರಚಿಸು; ತಯಾರಿಸು; ಉಂಟುಮಾಡು; ಸೃಷ್ಟಿಸು.
  4. (ದ್ರವ್ಯಗಳಿಂದ ವಸ್ತುಗಳನ್ನು) ರಚಿಸು; ಮಾಡು; ಉತ್ಪಾದಿಸು; ತಯಾರಿಸು; ಸೃಷ್ಟಿಸು.
  5. (ಪದವನ್ನು) ಸ್ಫುಟವಾಗಿ ಉಚ್ಚರಿಸು.
  6. (ಭಾವನೆಯನ್ನು, ನಿರ್ಣಯವನ್ನು) ಕಲ್ಪಿಸಿಕೊ; ಮನಸ್ಸಿನಲ್ಲಿ ರೂಪಿಸಿಕೊ;
  7. (ಅಭ್ಯಾಸವನ್ನು) ಬೆಳೆಸಿಕೊ; ರೂಢಿಸಿಕೊ; ಕೃಷಿ ಮಾಡಿಕೊ.
  8. (ಸಂಬಂಧವನ್ನು) ಬೆಳಸು; ಮಾಡಿಕೊ.
  9. (ವ್ಯಾಕರಣ) (ವ್ಯುತ್ಪತ್ತಿ, ವಿಭಕ್ತಿ ಮತ್ತು ಆಖ್ಯಾತ ಪ್ರತ್ಯಯಗಳು, ಮೊದಲಾದವುಗಳಿಂದ) ಹೊಸ ಪದ ಸೃಷ್ಟಿಸು; ಶಬ್ದರಚನೆ ಮಾಡು.
  10. (ಸೇನೆ ಮೊದಲಾದವುಗಳ ವಿಷಯದಲ್ಲಿ) ವ್ಯೂಹರಚಿಸು; ಸಾಲುಗೂಡಿಸು: form line ಸಾಲುಗೂಡಿಸು; ಸಾಲಾಗಿ ನಿಲ್ಲಿಸು.
  11. ಅಂಗಾಂಶವಾಗು; ಘಟಕಾಂಶವಾಗು; ಸಾಮಗ್ರಿಯಾಗಿರು; ಅಂಶವಾಗಿರು; ಭಾಗವಾಗಿರು: two regiments now form the Life Guards ಎರಡು ಪಡೆಗಳು ಸೇರಿ ಈಗ ಮೈಗಾವಲು ಸೇನೆಯಾಗಿದೆ.
ಅಕರ್ಮಕ ಕ್ರಿಯಾಪದ
  1. ಆಕಾರಪಡೆ; ಆಕೃತಿಹೊಂದು; ರೂಪುಗೊಳ್ಳು.
  2. (ಸೇನೆ ಮೊದಲಾದವುಗಳ ವಿಷಯದಲ್ಲಿ) ವ್ಯೂಹವಾಗು; ಸಾಲುಸಾಲಾಗಿ ನಿಲ್ಲು; ಸಾಲುಸೇರು; ಸಾಲುಗೂಡು; ಪಂಕ್ತಿಯಾಗು: form line ಸಾಲಾಗಿ ನಿಲ್ಲು; ಸಾಲಿನಲ್ಲಿ ನಿಲ್ಲು.