forget ಹರ್ಗೆಟ್‍
ಸಕರ್ಮಕ ಕ್ರಿಯಾಪದ
(ಭೂತರೂಪ forgot, ಭೂತಕೃದಂತ forgotten, (ಕಾವ್ಯಪ್ರಯೋಗ)
  1. (ಯಾವುದೇ ವ್ಯಕ್ತಿ ಯಾ ವಿಷಯವನ್ನು) ಮರೆ; ಮರೆತು ಬಿಡು; ನೆನಪು ತಪ್ಪು; ಜ್ಞಾಪಕ ಕಳೆದುಕೊ: I forgot his name ನಾನು ಅವನ ಹೆಸರು ಮರೆತೆ.
  2. ಮರೆ; ಮಾಡದೆ ಬಿಡು; ಮಾಡುವುದನ್ನು ಅಸಡ್ಡೆ ಯಾ ಉದಾಸೀನ ಮಾಡು: don’t forget to post the letter ಕಾಗದವನ್ನು ಅಂಚೆಗೆ ಹಾಕಲು ಮರೆಯಬೇಡ. I forgot to close the door ಬಾಗಿಲು ಹಾಕುವುದನ್ನು ಮರೆತುಬಿಟ್ಟೆ.
  3. ಮರೆ; ಮನಸ್ಸಿನಿಂದ ಹೊರದೂಡು; ಯೋಚಿಸದಿರು: let us forget our quarrels ನಮ್ಮ ಜಗಳಗಳನ್ನು ಮರೆಯೋಣ.
  4. ಮರೆ; ಉಲ್ಲೇಖಿಸದಿರು; ಹೆಸರು ಹೇಳದಿರು.
  5. ಮರೆ; ಅಜಾಗರೂಕತೆಯಿಂದ – ತರದಿರು, ತೆಗೆದುಕೊಂಡು ಹೋಗದಿರು ಯಾ ಅಲ್ಲಿಯೇ ಬಿಡು: in our hurry we forgot the keys ನಮ್ಮ ಅವಸರದಲ್ಲಿ ನಾವು ಬೀಗದ ಕೈಗಳನ್ನು (ತರುವುದನ್ನು) ಮರೆತೆವು ಯಾ ಅಲ್ಲಿಯೇ ಬಿಟ್ಟು ಬಂದೆವು.
  6. ಮರೆ; ನೆನೆಯದಿರು; ಗಮನಿಸದಿರು; ಗಮನಕೊಡದಿರು: don’t forget the waiter ಪರಿಚಾರಕನನ್ನು ಮರೆಯಬೇಡ (ಅಂದರೆ ಅವನಿಗೆ ಕೊಡಬೇಕಾದ ಭಕ್ಷೀಸು ಕೊಡು).
  7. (ಉದ್ದೇಶಪೂರ್ವಕವಾಗಿ) ನಿರ್ಲಕ್ಷಿಸು; ಉಪೇಕ್ಷಿಸು; ಕಡೆಗಣಿಸು; ಅಲಕ್ಷ್ಯದಿಂದ, ಅನುಚಿತವಾಗಿ – ಕಾಣು: the successful leader does not forget his subordinates ಯಶಸ್ವಿ ನಾಯಕ ತನ್ನ ಕೈಕೆಳಗಿನವರನ್ನು ಉಪೇಕ್ಷಿಸುವುದಿಲ್ಲ.
ಅಕರ್ಮಕ ಕ್ರಿಯಾಪದ

ನೆನೆಯದಿರು; ನೆನಪಿನಲ್ಲಿಡದಿರು; ಸ್ಮರಿಸದಿರು; ಯೋಚಿಸದಿರು; ಮರೆ: forgive and forget ಕ್ಷಮಿಸಿ ಮರೆತುಬಿಡು.

ನುಡಿಗಟ್ಟು
  1. forget (about) it! (ಆಡುಮಾತು) ಅದನ್ನು ಮರೆತುಬಿಡು: (ಅದರ ಬಗ್ಗೆ ಕೃತಜ್ಞತೆ ಯಾ ತಪ್ಪೊಪ್ಪಿಗೆ ಬೇಕಿಲ್ಲ).
  2. forget oneself
    1. (ಇತರರಿಗಾಗಿ) ತನ್ನನ್ನು ತಾನೇ ಮರೆತುಬಿಡು; ತನ್ನ ಹಿತವನ್ನೇ ಕಡೆಗಣಿಸು.
    2. (ತನ್ನ ಸ್ವಭಾವ, ಸ್ಥಾನಮಾನ, ಮೊದಲಾದವುಗಳಿಗೆ) ಅಯೋಗ್ಯವಾಗಿ, ಅನುಚಿತವಾಗಿ – ವರ್ತಿಸು.
    3. (ಪ್ರಾಚೀನ ಪ್ರಯೋಗ) ಮೈಮರೆ; ಪ್ರಜ್ಞೆ ತಪ್ಪು.