See also 2forfeit  3forfeit
1forfeit ಹಾರ್‍ಹಿಟ್‍
ನಾಮವಾಚಕ
  1. ಜುಲ್ಮಾನೆ; (ತಕ್ಸೀರಿನಿಂದ ಯಾ ತಪ್ಪಿತದಿಂದ) ದಂಡವಾಗಿ ತೆತ್ತವಸ್ತು: his life was the forfeit ಅವನ ಪ್ರಾಣವೇ ಅದಕ್ಕೆ ಜುಲ್ಮಾನೆ, ದಂಡ.
  2. (ಒಪ್ಪಂದ ತಪ್ಪಿದುದಕ್ಕೆ ಯಾ ಅಲಕ್ಷ್ಯಮಾಡಿದುದಕ್ಕೆ ತೆರಬೇಕಾದ) ದಂಡ; ಜುಲ್ಮಾನೆ.
  3. (ಕ್ಲಬ್ಬು ಮೊದಲಾದ ಕಡೆ ಯಾ ಆಟಗಳಲ್ಲಿ ನಿಯಮಗಳನ್ನು ಉಲ್ಲಂಘಿಸಿದಾಗ ಹಾಕುವ) ಅಲ್ಪಜುಲ್ಮಾನೆ.
  4. (ಹಾರಹಿಟ್ಸ್‍ಎಂಬ ಆಟದಲ್ಲಿ ಆಟಗಾರ ದಂಡವಾಗಿ ಕೊಟ್ಟ ಮತ್ತು ಏನಾದರೂ ಹಾಸ್ಯಾಸ್ಪದ ಕಾರ್ಯಮಾಡಿ ಹಿಂದಕ್ಕೆ ಪಡೆಯಬೇಕಾದ) ದಂಡ(ವಸ್ತು).
  5. ಮುಟ್ಟುಗೋಲು.
See also 1forfeit  3forfeit
2forfeit ಹಾರ್‍ಹಿಟ್‍
ಗುಣವಾಚಕ

(ತಪ್ಪಿಗಾಗಿ) ದಂಡ ತೆತ್ತ; ಜುಲ್ಮಾನೆ ಕೊಡಬೇಕಾದ; ಮುಟ್ಟುಗೋಲಾದ.

See also 1forfeit  2forfeit
3forfeit ಹಾರ್‍ಹಿಟ್‍
ಸಕರ್ಮಕ ಕ್ರಿಯಾಪದ
  1. (ತಪ್ಪಿತ, ಅಪರಾಧ, ಒಪ್ಪಂದದ ಮುರಿತ, ಮೊದಲಾದವುಗಳಿಗೆ ದಂಡವಾಗಿ ಹಕ್ಕು, ಅಧಿಕಾರ, ಮೊದಲಾದವನ್ನು) ಕಳೆದುಕೊ.
  2. (ಅಪರಾಧ, ಉಪೇಕ್ಷೆ, ಮೊದಲಾದವುಗಳಿಗಾಗಿ) ದಂಡತೆರು.