foreign ಹಾರಿನ್‍
ಗುಣವಾಚಕ
  1. ಇತರ; ಅನ್ಯ; ಹೊರ; ಹೊರಗಿನ; ಹೆರ; ಪರ; ಬಾಹ್ಯ; ಇತರ ವ್ಯಕ್ತಿಗಳಿಗೆ, ವಸ್ತುಗಳಿಗೆ ಯಾ ವಿಷಯಗಳಿಗೆ – ಸೇರಿದ, ಸಂಬಂಧಿಸಿದ: a statement supported by foreign testimony ಬಾಹ್ಯ ಪ್ರಮಾಣಗಳಿಂದ ಸಮರ್ಥಿಸಲ್ಪಟ್ಟ ಹೇಳಿಕೆ.
  2. ಹೊರತಾದ; ಹೊರಚ್ಚಾದ; ಅಸಂಗತ; ಸಂಬಂಧವಿಲ್ಲದ; ಅನುಚಿತ; ಅಪ್ರಕೃತ; ಅಪ್ರಸ್ತುತ: it is foreign to our discussion ನಮ್ಮ ಚರ್ಚೆಗೆ ಅದು ಅಪ್ರಕೃತ, ಹೊರತಾದುದು.
  3. ಬಾಹ್ಯ; ಹೊರಗಿನ; ಹೊರಗಿನಿಂದ ತಂದು ಸೇರಿಸಿದ ಯಾ ಬಂದು ಸೇರಿದ: foreign body or substance (ಮುಖ್ಯವಾಗಿ ಊತಕಗಳಲ್ಲಿ ಸಿಕ್ಕಿಕೊಂಡಿರುವ) ಬಾಹ್ಯವಸ್ತು; ಹೊರಗಿನ ಪದಾರ್ಥ.
  4. ಹೊರಪ್ರಾಂತದ; ಬೇರೆ ಜಿಲ್ಲೆ, ಸಮುದಾಯ, ಪ್ರಾಂತ, ಮೊದಲಾದವುಗಳಿಂದ ಬಂದ.
  5. ಹೊರನಾಡಿನ; ಪರದೇಶದ; ವಿದೇಶೀಯ; ಅನ್ಯದೇಶೀಯ.
  6. ವಿದೇಶೀ; ತನ್ನದಲ್ಲದ ದೇಶ ಯಾ ಭಾಷೆಯಿಂದ ಬಂದ; ಹೊರದೇಶವನ್ನು ಯಾ ವಿದೇಶಭಾಷೆಯನ್ನು ಕುರಿತಾದ: foreign correspondent ವಿದೇಶೀ ಬಾತ್ಮೀದಾರ. foreign trade ವಿದೇಶೀ ವ್ಯಾಪಾರ.