fore- ಹೋರ್‍-
ಪೂರ್ವಪ್ರತ್ಯಯ
  1. ಕ್ರಿಯಾಪದ ಮತ್ತು ತಜ್ಜನ್ಯ ಪದಗಳಿಗೆ ಪೂರ್ವದಲ್ಲಿ ಬಂದಾಗ:
    1. ಮುಂದೆ; ಮುಂದುಗಡೆ: forerunner ಮುಂದುಗಡೆ ಬರುವವನು.
    2. ಮುಂಚಿತವಾಗಿ; ಮೊದಲೇ: foreordain ಮೊದಲೇ ನಿರ್ಧರಿಸು: ಪೂರ್ವನಿಯಾಮಿಸು.
  2. ನಾಮಪದಗಳಿಗೆ ಪೂರ್ವದಲ್ಲಿ ಬಂದಾಗ:
    1. ಮುಂದಿನ: ಮುಂಭಾಗದಲ್ಲಿರುವ; ಮುಂದುಗಡೆಯ: fore–quarter (ಹಡಗಿನ) ಕ್ವಾರ್ಟರ್‍ ಮುಂಭಾಗದ.
    2. ಮುಂಭಾಗದ: forearm ಮುಂದೋಳು.
    3. ಮುಂಭಾಗದ ಕಡೆಯ; ಮುಂಭಾಗಕ್ಕೆ ಹತ್ತಿರದ: forecastle (ಹಡಗಿನ) ಮುನ್ನಟ್ಟ.
    4. ಪೂರ್ವಭಾವಿ; ಮುಂಚಿನ; ಮೊದಲೇ ತಿಳಿಯುವ: fore knowledge ಮುನ್ನರಿವು. forefather ಪೂರ್ವಜ.