See also 2fore  3fore  4fore  5fore
1fore ಹೋರ್‍
ಗುಣವಾಚಕ

ಮುಂದುಗಡೆಯ; ಮುಂದಿರುವ; ಮುಂದಿನ; ಅಗ್ರ.

See also 1fore  3fore  4fore  5fore
2fore ಹೋರ್‍
ನಾಮವಾಚಕ
  1. ಮುಂದುಗಡೆ; ಮುಂಭಾಗ.
  2. ಹಡಗಿನ ಮುಂಗೋಟು.
ನುಡಿಗಟ್ಟು
  1. at the fore (ನೌಕಾಯಾನ) (ಮುಖ್ಯವಾಗಿ ಹಡಗು ಹೊರಡುವುದನ್ನು ಸೂಚಿಸಲು) (ಬಾವುಟವನ್ನು) ಮುಂಗೂವೆಯ ಮೇಲೆ (ಹಾರಿಸಿದ).
  2. come to the fore
    1. ಪ್ರಸಿದ್ಧಿಗೆ ಬರು: ಮುಂದಕ್ಕೆ ಬರು; ಎಲ್ಲರ ಕಣ್ಣಿಗೂ ಕಾಣು.
    2. ಮುಖ್ಯಪಾತ್ರ ವಹಿಸು; ಮುಂದಾಳಾಗು.
  3. to the fore
    1. (ವ್ಯಕ್ತಿಯ ವಿಷಯದಲ್ಲಿ) ಎದುರಿನಲ್ಲಿ; ಸಮಕ್ಷ; ಕೈಗೆ ಸಿಕ್ಕುವ ಹಾಗೆ; ಕೂಗಿದರೆ ಬರುವಂತೆ; ಹಾಜರಾಗಿ; ದೊರೆಯುವಂತೆ: if he hasn’t me to the fore to prove that I said ನಾನು ಹೇಳಿದ್ದನ್ನು ರುಜುವಾತುಪಡಿಸಲು ಅವನು ನನ್ನನ್ನು ಎದುರಿನಲ್ಲಿ ಇಟ್ಟುಕೊಳ್ಳದಿದ್ದರೆ.
    2. (ಹಣ ಮೊದಲಾದವುಗಳ ವಿಷಯದಲ್ಲಿ) ಸಿಗುವಂತೆ; ಕೈಯಲ್ಲಿ; ಸಿದ್ಧವಾಗಿ; ದೊರೆಯುವಂತೆ.
    3. ಜೀವಂತವಾಗಿ: while this grey head is still to the fore ಈ ಮುದಿತಲೆ ಉಳಿದಿರುವವರೆಗೆ.
    4. ಸ್ಪಷ್ಟವಾಗಿ; ಗೋಚರವಾಗಿ; ಎದ್ದು ಕಾಣುವಂತೆ: this vexed question must come to the fore in the next session ಈ ಕಿರಿಕಿರಿಯ ಪ್ರಶ್ನೆ ಮುಂದಿನ ಅಧಿವೇಶನದಲ್ಲಿ ಕಾಣಿಸಿಕೊಳ್ಳಬೇಕು.
See also 1fore  2fore  4fore  5fore
3fore ಹೋರ್‍
ಕ್ರಿಯಾವಿಶೇಷಣ

ಎದುರಿನಲ್ಲಿ; ಮುಂದೆ; ಸಮಕ್ಷ.

See also 1fore  2fore  3fore  5fore
4fore ಹೋರ್‍
ಉಪಸರ್ಗ

(ಆಣೆಮಾಡುವಾಗ) ಮುಂದೆ; ಎದುರು; ಸಮ್ಮುಖದಲ್ಲಿ; ಸಮಕ್ಷ: fore God ದೇವರ ಮುಂದೆ.

See also 1fore  2fore  3fore  4fore
5fore ಹೋರ್‍
ಭಾವಸೂಚಕ ಅವ್ಯಯ

(ಗಾಲ್ಫ್‍) ಮುಂದೆ ಹುಷಾರ್‍! (ಮುಂದೆ ನಿಂತಿರುವವರಿಗೆ ಚೆಂಡಿನ ಹೊಡೆತಕ್ಕೆ ಮುಂಚೆ ಕೊಡುವ ಎಚ್ಚರಿಕೆ).