See also 2force  3force
1force ಹೋರ್ಸ್‍
ನಾಮವಾಚಕ
  1. ಶಕ್ತಿ; ಬಲ; ಸತ್ವ.
  2. ಚಾಲಕಶಕ್ತಿ.
  3. ರಭಸ; ಭರ; ಪ್ರಬಲ ವೇಗ; ಜೋರು.
  4. ಪ್ರಯಾಸ; ಪ್ರಬಲ ಪರಿಶ್ರಮ ಯಾ ತೀವ್ರ ಯತ್ನ, ಪ್ರಯಾಸ.
  5. ಸೈನಿಕ ಶಕ್ತಿ; ಸೇನಾಬಲ.
  6. ಶಸ್ತ್ರಸಜ್ಜಿತ – ದಳ, ತಂಡ.
  7. ಸೇನೆ.
  8. (ಬಹುವಚನದಲ್ಲಿ) ಪಡೆಗಳು; ದಳಗಳು.
  9. ಜನ; ಮಂದಿ; ಕೆಲಸಗಾರರು ಮೊದಲಾದವರ ವ್ಯವಸ್ಥಿತ ತಂಡ, ದಳ, ಗುಂಪು: labour force ಕಾರ್ಮಿಕರ ತಂಡ.
  10. ಪೊಲೀಸು ದಳ.
  11. ಒತ್ತರ; ಕಡ್ಡಾಯ; ನಿರ್ಬಂಧ; ಬಲವಂತ; ಬಲಾತ್ಕಾರ; ಒಂದು ವಸ್ತುವಿನ ಮೇಲೆ ಪ್ರಯೋಗಿಸಿದ ಬಲ: by force ಯಾ per force ನಿರ್ಬಂಧದಿಂದ; ಬಲಾತ್ಕಾರದಿಂದ.
  12. ಮಾನಸಿಕ ಯಾ ನೈತಿಕ ಶಕ್ತಿ.
  13. ಪ್ರಭಾವ; ಪರಿಣಾಮ; ಪ್ರಾಬಲ್ಯ: the force of circumstances ಪರಿಸ್ಥಿತಿಗಳ ಪರಿಣಾಮ, ಪ್ರಭಾವ.
  14. ನಿಯಂತ್ರಣ; ಹಿಡಿತದಲ್ಲಿ ಯಾ ವಶದಲ್ಲಿ ಇಟ್ಟುಕೊಳ್ಳುವ ಶಕ್ತಿ.
  15. ಸಾಮರ್ಥ್ಯ; ಶಕ್ತಿ; ಪರಿಣಾಮಕಾರಿತ್ವ: justice loses its force, if not accompanied with mercy ದಯೆಯಿಂದ ಕೂಡಿರದೆ ಇದ್ದಲ್ಲಿ, ನ್ಯಾಯ ತನ್ನ ಶಕ್ತಿಯನ್ನು ಕಳೆದುಕೊಳ್ಳುತ್ತದೆ.
  16. ಮನವೊಲಿಸುವ ಶಕ್ತಿ: there is force in what you say ನೀನು ಹೇಳುವುದರಲ್ಲಿ ಮನವೊಲಿಸುವ ಶಕ್ತಿಯಿದೆ.
  17. ಸತ್ತ್ವ; ಸ್ಪಷ್ಟವಾಗಿ ಪರಿಣಾಮವುಂಟುಮಾಡುವ ಶಕ್ತಿ: described with much force ಬಹಳ ಸತ್ತ್ವಯುತವಾಗಿ ವರ್ಣಿಸಿದೆ.
  18. (ಸಡಿಲವಾಗಿ) ಅಪೇಕ್ಷಣೀಯತೆ; ಔಚಿತ್ಯ; ವಿವೇಚನೆ; ವಿವೇಕ; ಯುಕ್ತತೆ: can’t see the force of doing what one dislikes ತನಗೆ ಇಷ್ಟವಿಲ್ಲದ್ದನ್ನು ಮಾಡುವುದರ ಔಚಿತ್ಯವೇನೋ ನಾನಂತೂ ಕಾಣೆ.
  19. ಜಾರಿ; ಚಾಲ್ತಿ; ಆಚರಣೆ; ನಿಯಾಮಕತೆ; ಸಿಂಧುತ್ವ; ಕಟ್ಟಳೆಯ ಬಲ; ಕಟ್ಟುಪಾಡಿಗೊಳಪಡಿಸುವ ಶಕ್ತಿ; ವಿಧೇಯಕ ಶಕ್ತಿ; ಶಾಸನದ ಸಾಮರ್ಥ್ಯ; ಕಾನೂನಿನ, ಕಾಯಿದೆಯ – ಬಲ: law remains in force ಕಾನೂನು ಜಾರಿಯಲ್ಲಿರುತ್ತದೆ. comes into force ಜಾರಿಗೆ ಬರುತ್ತದೆ. put in force ಜಾರಿಗೆ – ಕೊಡು, ತರು.
  20. (ನ್ಯಾಯಶಾಸ್ತ್ರ) ಬಲಾತ್ಕಾರ; ಜುಲುಂ; ನ್ಯಾಯಬಾಹಿರವಾದ, ಕಾನೂನಿಗೆ ವಿರುದ್ಧವಾದ ಬಲ ಪ್ರಯೋಗ.
  21. ನಿಜವಾದ ಸಾರಾಂಶ; ಖಚಿತವಾದ ಅರ್ಥ: what is the force of ‘but’ here? ಇಲ್ಲಿ ‘ಆದರೆ’ ಎನ್ನುವುದರ ಅರ್ಥ ಏನು?
  22. (ಭೌತವಿಜ್ಞಾನ) ಬಲ; ಸ್ಥಾಯಿಸ್ಥಿತಿಯಲ್ಲಿರುವ ಯಾ ಒಂದೇ ನೇರದಲ್ಲಿ ಸಮವೇಗದಲ್ಲಿ ಚಲಿಸುತ್ತಿರುವ ಕಾಯದ ವೇಗವನ್ನಾಗಲಿ ವೇಗದ ದಿಕ್ಕನ್ನಾಗಲಿ ಬದಲಾಯಿಸಬಲ್ಲ ಭೌತಕಾರಕ.
  23. (ಭೌತವಿಜ್ಞಾನ) ಬಲದ ಪ್ರಮಾಣ.
  24. (ಭೌತವಿಜ್ಞಾನ) (ಪ್ರಾಚೀನ ಪ್ರಯೋಗ) ಚಲನಶಕ್ತಿ.
  25. ಬಲ; ಚಲನೆ, ಶಾಖ, ಕಾಂತತೆ, ಮುಂತಾದ ಯಾವುದೇ ಭೌತ ವಿದ್ಯಮಾನದ ಕಾರಕ.
  26. (ರೂಪಕವಾಗಿ) (ಪರಿಣಾಮಕಾರಿಯಾದ ಯಾ ಪ್ರಭಾವೀ) ಶಕ್ತಿ: considers himself a force in the world ಜಗತ್ತಿನಲ್ಲಿ ತಾನೊಂದು ಶಕ್ತಿಯೆಂದು ಭಾವಿಸಿಕೊಂಡುಬಿಟ್ಟಿದ್ದಾನೆ. the forces of nature (ಬಿರುಗಾಳಿ, ಭೂಕಂಪ, ಮೊದಲಾದ) ನಿಸರ್ಗಶಕ್ತಿಗಳು. communism has been a powerful force in the world affairs ಪ್ರಪಂಚದ ವ್ಯವಹಾರಗಳಲ್ಲಿ ಕಮ್ಯೂನಿಸಂ ಒಂದು ಪ್ರಬಲಶಕ್ತಿ ಆಗಿದೆ.
ಪದಗುಚ್ಛ
  1. by force of -ರ ಮೂಲಕ; -ಇಂದ.
  2. in force
    1. (ಸೈನ್ಯ) ದೊಡ್ಡ ಸಂಖ್ಯೆಯಲ್ಲಿ; ಬೃಹತ್‍ ಪ್ರಮಾಣದಲ್ಲಿ.
    2. (ಕಾನೂನಿನ ವಿಷಯದಲ್ಲಿ) ಸಿಂಧುವಾಗಿರುವ; ಚಾಲ್ತಿಯಲ್ಲಿರುವ; ಬಳಕೆಯಲ್ಲಿರುವ.
  3. in great force
    1. ಬಹಳ ಜೋರಾಗಿ; ಒಳ್ಳೆಯ ದಾರ್ಢ್ಯದಿಂದ; ಒಳ್ಳೆಯ ಹುರುಪಿನಿಂದ.
    2. ದೊಡ್ಡ ಸಂಖ್ಯೆಯಲ್ಲಿ.
  4. join forces (with) (ಸಂಯುಕ್ತಶಕ್ತಿಗಾಗಿ) ಸಂಘಟಿತನಾಗು; ಒಗ್ಗೂಡು; ಸೇರು; ಒಂದುಗೂಡು; ಪ್ರಯತ್ನಗಳನ್ನು ಒಗ್ಗೂಡಿಸು.
  5. the force ಪೊಲೀಸರು.
See also 1force  3force
2force ಹೋರ್ಸ್‍
ಸಕರ್ಮಕ ಕ್ರಿಯಾಪದ
  1. ಬಲಾತ್ಕಾರ ಮಾಡು; ಬಲವಂತಮಾಡು; (ಬಲಪ್ರಯೋಗದಿಂದ) ನಿರ್ಬಂಧಪಡಿಸು; ಒತ್ತಾಯಮಾಡು; ಕಡ್ಡಾಯಮಾಡು.
  2. ಬಲಾತ್ಕಾರಿಸು; ನಿರ್ಬಂಧಿಸು: force one’s hand (ಯುಕ್ತಕಾಲಕ್ಕೆ ಮೊದಲೇ ಕಾರ್ಯ ನಡೆಸುವಂತೆ, ಇಷ್ಟವಿಲ್ಲದ ನೀತಿಯನ್ನು ಅನುಸರಿಸುವಂತೆ) ಬಲವಂತ ಮಾಡು.
  3. (ಪದಗಳ ಮೇಲೆ) ಸಲ್ಲದ ಅರ್ಥವನ್ನು ಹೊರಿಸು; (ಪದಗಳಿಗೆ ನೇರವಾದ ಅರ್ಥ ಬಿಟ್ಟು ಅವುಗಳನ್ನು) ತಿರಿಚಿಮುರಿಚಿ ಅರ್ಥ ಕಲ್ಪಿಸು.
  4. (ಇಸ್ಪೀಟು ಆಟ)
    1. (ಆಟಗಾರ) ತುರುಪು ಆಡುವಂತೆ ಯಾ ತನ್ನ ಕೈಬಲ ಹೊರಪಡಿಸುವಂತೆ ಮಾಡು.
    2. (ಆಟಗಾರನನ್ನು) ಒಂದು ನಿರ್ದಿಷ್ಟ ಎಲೆಯನ್ನು ಇಳಿಸುವಂತೆ ನಿರ್ಬಂಧಗೊಳಿಸು.
  5. (ವ್ಯಕ್ತಿಯನ್ನು, ನಿರ್ದೇಶಿಸಿದ ಕೆಲಸವನ್ನು ಮಾಡುವಂತೆ) ಬಲಾತ್ಕರಿಸು; ನಿರ್ಬಂಧಿಸು.
  6. ಕೈಯಲ್ಲಾದಷ್ಟೂ ಪರಿಶ್ರಮಪಡು; ಸರ್ವ ಪ್ರಯತ್ನ ಮಾಡು; ಪೂರ್ಣಪ್ರಯತ್ನ ಮಾಡು.
  7. ಬಲಪ್ರಯೋಗದಿಂದ
    1. (ದುರ್ಗವನ್ನು) ವಶಪಡಿಸಿಕೊ; ಸೆರೆಹಿಡಿ.
    2. (ರಕ್ಷಣಾವ್ಯವಸ್ಥೆ, ಕಣಿವೆಮಾರ್ಗಗಳನ್ನು) ಭೇದಿಸಿ ನುಗ್ಗು; ಒಡೆದು ದಾರಿ ಮಾಡಿಕೊ.
    3. (ಬೀಗ, ಬಾಗಿಲುಗಳನ್ನು) ಒಡೆದು ನುಗ್ಗು; ಒಳಹೊಗು.
  8. (ವಾಹನವನ್ನು) ಮುನ್ನಡೆಸು; ಮುಂದೂಡು.
  9. (ವಸ್ತುವನ್ನು) ಒಬ್ಬನ ಮೇಲೆ ಬಲವಂತವಾಗಿ – ಹೇರು, ಹೊರಿಸು; ಒಬ್ಬನು ಬಲಾತ್ಕಾರಕ್ಕೊಳಗಾಗಿ ಆರಿಸುವಂತೆಮಾಡು: force a card (ಇಂದ್ರಜಾಲ ಪ್ರದರ್ಶನದಲ್ಲಿ) ಅವನಿಗೇ ಅರಿವಿಲ್ಲದಂತೆ ಒಂದು ಇಸ್ಪೀಟೆಲೆಯನ್ನು ಒಬ್ಬನು ಆರಿಸುವಂತೆ ಮಾಡು.
  10. ಪ್ರಯತ್ನ ಯಾ ಪ್ರಯಾಸ ಪಟ್ಟು ಒಂದು ಪರಿಣಾಮವನ್ನು – ಆಗಮಾಡು, ಮಾಡಿಸು, ಉಂಟುಮಾಡು, ತರು, ತರಿಸು: force a smile ಬಲವಂತವಾಗಿ ಒಂದು ಮುಗುಳ್ನಗೆ ತರು, ತರಿಸು. force one’s way ಪ್ರಯತ್ನ ಪಟ್ಟು ದಾರಿ ಮಾಡಿಕೊ. force the facts out of him ಬಲವಂತದಿಂದ ನಿಜಸ್ಥಿತಿಯನ್ನು ಅವನಿಂದ ಹೊರಡಿಸು.
  11. (ಬಲಾತ್ಕಾರದಿಂದ) ಕಸಿ; ಕಿತ್ತುಕೊ; ಸುಲಿ: forced it out of his hands ಅವನ ಕೈಯಿಂದ ಅದನ್ನು ಬಲಾತ್ಕಾರವಾಗಿ ಕಸಿದುಕೊಂಡ.
  12. (ಸಸ್ಯವನ್ನು) ಜುಲುಂಮಾಡು; ಬಲವಂತದ ಬೆಳೆವಣಿಗೆ ಉಂಟುಮಾಡು; ಕೃತಕ ಪ್ರಯತ್ನದಿಂದ ಕಾಲಕ್ಕೆ ಮುಂಚೆಯೇ ಪರಿಪಕ್ವಗೊಳಿಸು.
  13. (ಮಗುವಿನ, ವಿದ್ಯಾರ್ಥಿಯ) ಶಿಕ್ಷಣದ ಬೆಳವಣಿಗೆಯನ್ನು ತ್ವರೆಗೊಳಿಸು; ಹೆಚ್ಚು ಓದಿ ಬರೆಯುವಂತೆ ಮಾಡಿ ಕಲಿಕೆಯನ್ನು ತ್ವರೆಗೊಳಿಸು.
  14. (ಸಾದೃಶ್ಯ, ಉಪಮಾನ, ಮೊದಲಾದವನ್ನು) ಪ್ರಯಾಸದಿಂದ ಕಲ್ಪಿಸು; ಮಿತಿಈರಿ, ಔಚಿತ್ಯಈರಿ, ಕಷ್ಟಪಟ್ಟು – ಎಳೆ, ಬೆಳಸು.
  15. (ಭೌತವಿಜ್ಞಾನ) ಬಲಪ್ರಯೋಗಿಸು; ಬಾಹ್ಯ ಕ್ರಿಯೆಯಿಂದ ಕಾಯದ ವೇಗವನ್ನಾಗಲಿ ಯಾ ವೇಗದ ದಿಕ್ಕನ್ನಾಗಲಿ ಬದಲಾಯಿಸು.
  16. (ಬಿರುಸಿನಿಂದ ಯಾ ಅಡೆತಡೆಗೆ ವಿರುದ್ಧವಾಗಿ) ನುಗ್ಗಿಸು; ನಡೆಸು; ಚೋದಿಸು.
ಅಕರ್ಮಕ ಕ್ರಿಯಾಪದ

(ಇಸ್ಪೀಟು ಆಟಗಾರ ಯಾ ಆತನ ಆಟದ ವಿಷಯದಲ್ಲಿ) ಇನ್ನೊಬ್ಬ ಆಟಗಾರ ತುರುಹು ಇಳಿಸುವಂತೆ ಯಾ ನಿರ್ದಿಷ್ಟ ಎಲೆ ಇಳಿಸುವಂತೆ ಮಾಡು.

ಪದಗುಚ್ಛ
  1. force an analogy, simile, etc. ಒಂದು ದೃಷ್ಟಾಂತ, ಉಪಮಾನ, ಮೊದಲಾದವನ್ನು ಮಿತಿಈರಿ – ಅಂದರೆ ಔಚಿತ್ಯಈರಿ, ಕ್ಲೇಶಪಟ್ಟು – ಎಳೆ.
  2. forced labour (ಸಾಮಾನ್ಯವಾಗಿ ಕಠಿಣ ಪರಿಸ್ಥಿತಿಗಳಲ್ಲಿ ಮಾಡಬೇಕಾದ) ಕಡ್ಡಾಯ ದುಡಿಮೆ; ಬಲಾತ್ಕಾರದ ದುಡಿಮೆ.
  3. forced march (ಸೈನ್ಯದಳಗಳ ವಿಷಯದಲ್ಲಿ) ಪ್ರಯಾಸದ ಮುನ್ನಡೆ; ಹೆಚ್ಚು ಪರಿಶ್ರಮಪಡಬೇಕಾಗುವ ಮುನ್ನಡೆ.
  4. force down (ವಿಮಾನ ಮೊದಲಾದವನ್ನು) ಬಲವಂತವಾಗಿ ಇಳಿಸು: US aircraft forced down by Soviet fighters ಸೋವಿಯತ್‍ ಹೈಟರುಗಳಿಂದ ಬಲವಂತವಾಗಿ ಇಳಿಸಲ್ಪಟ್ಟ ಅಮೆರಿಕದ ವಿಮಾನ.
  5. force one’s voice (ಸರಾಗವಾಗಿ, ಸಹಜವಾಗಿ, ಸಾಧ್ಯವಾಗುವುದಕ್ಕಿಂತ ಈರಿದ ಸ್ವರಗಳನ್ನು ಹೊರಪಡಿಸುವುದಕ್ಕಾಗಿ ತನ್ನ ದನಿಯನ್ನು) ಪ್ರಯಾಸದಿಂದ ಏರಿಸು; ಕಷ್ಟಪಟ್ಟು ಮೇಲೆತ್ತು.
  6. force the bidding ಹರಾಜಿನಲ್ಲಿ ಸವಾಲನ್ನು, ಬೆಲೆಯನ್ನು – ಅತಿವೇಗವಾಗಿ ಏರಿಸುತ್ತ ಹೋಗು, ಬಿರುಸಾಗಿ ಮೇಲೇರಿಸು.
  7. force the game (ಸ್ಕೋರನ್ನು ಬೇಗ ಏರಿಸಿಕೊಳ್ಳಲಿಕ್ಕಾಗಿ) ಅಪಾಯ ಲೆಕ್ಕಿಸದೆ ಆಡು.
  8. force the pace or running (ಎದುರಾಳಿಯನ್ನು ಬೇಗ ದಣಿಸುವ ಸಲುವಾಗಿ) ವೇಗ ತುಂಬ ಹೆಚ್ಚಿಸು.
See also 1force  2force
3force ಹೋರ್ಸ್‍
ನಾಮವಾಚಕ

(ಬ್ರಿಟನ್ನಿನ ಉತ್ತರಭಾಗದ ಪ್ರಯೋಗ) ಜಲಪಾತ; ಅಬ್ಬಿ; ತಡಸಲು; ನೀರ್ಬೀಳು; ಧುಮುಕುನೀರು; ದಬದಬೆ.