forbid ಹರ್ಬಿಡ್‍
ಕ್ರಿಯಾಪದ
(ಭೂತರೂಪ forbad ಉಚ್ಚಾರಣೆ ಹರ್ಬ್ಯಾಡ್‍, ಯಾ forbade

ಉಚ್ಚಾರಣೆ ಹರ್ಬೇಡ್‍, ಭೂತಕೃದಂತ forbidden).

ಸಕರ್ಮಕ ಕ್ರಿಯಾಪದ
  1. (ವ್ಯಕ್ತಿ ಮೊದಲಾದವರನ್ನು) ನಿಷೇಧಿಸು; ಮಾಡಬೇಡವೆಂದು, ಹೋಗದಿರಲೆಂದು – ಆಜ್ಞೆ ಮಾಡು: forbid him to go ಅವನು ಹೋಗುವುದನ್ನು ನಿಷೇಧಿಸು.
  2. (ವ್ಯಕ್ತಿ ಮೊದಲಾದವರಿಗೆ) ನಿಷೇಧಿಸು; ವಸ್ತುವಿನ ಬಳಕೆ, ಪ್ರವೇಶ ಮೊದಲಾದವನ್ನು ತಪ್ಪಿಸು; forbid him the court ಆಟದ ಕೋರ್ಟಿಗೆ ಪ್ರವೇಶ ತಪ್ಪಿಸು. forbid smoking ಧೂಮಪಾನವನ್ನು ನಿಷೇಧಿಸು.
  3. (ವ್ಯಕ್ತಿ ಯಾ ವಿಷಯವನ್ನು) ಇರಗೊಡದಿರು; ಆಗಗೊಡದಿರು.
  4. (ಪರಿಸ್ಥಿತಿ, ಅಡೆತಡೆ, ಮೊದಲಾದವುಗಳನ್ನು) ತಡೆ; ನಿಷೇಧಿಸು; ಆಗಗೊಡದಿರು; ತಪ್ಪಿಸು: lorries are forbidden in this road ಈ ರಸ್ತೆಯಲ್ಲಿ ಲಾರಿಗಳ ಸಂಚಾರವನ್ನು ನಿಷೇಧಿಸಿದೆ. God forbid! ದೇವರು (ಅಪಾಯ) ತಪ್ಪಿಸಲಿ!