See also 2for
1for ಹಾರ್‍
ಉಪಸರ್ಗ
  1. ಪ್ರತಿನಿಧಿಯಾಗಿ: sits for Mysore ಮೈಸೂರಿನ ಪ್ರತಿನಿಧಿಯಾಗಿದ್ದಾನೆ; ಶಾಸನಸಭೆಯಲ್ಲಿ ಮೈಸೂರಿನಿಂದ ಚುನಾಯಿತನಾದ ಸದಸ್ಯನಾಗಿದ್ದಾನೆ.
  2. ಸ್ಥಾನದಲ್ಲಿ; ಪ್ರತಿಯಾಗಿ; ಪರ್ಯಾಯವಾಗಿ; ಬದಲು: a substitute for butter ಬೆಣ್ಣೆಯ ಬದಲು, ಬದಲಿಗೆ.
  3. ಬೆಲೆಯಾಗಿ ಯಾ ಶಿಕ್ಷೆಯಾಗಿ ಯಾ ದಂಡವಾಗಿ; ಪ್ರತಿಯಾಗಿ: thrashed for his pains ಅವನು ಪಟ್ಟ ಪರಿಶ್ರಮಕ್ಕೆ ಪ್ರತಿಯಾಗಿ ಬಡಿತ ತಿಂದ. bought for Rs. two ಎರಡು ರೂಪಾಯಿಗಳಿಗೆ ಕೊಂಡ. fined for speeding ವೇಗವಾಗಿ ಹೋದದ್ದಕ್ಕಾಗಿ ದಂಡಕ್ಕೊಳಗಾದ.
  4. ಪಕ್ಷವಹಿಸಿ; ಬೆಂಬಲವಾಗಿ; ಕಡೆ; ಪರವಾಗಿ: am for tariff reform ನಾನು ಸುಂಕದ ಸುಧಾರಣೆಯ ಪರ.
  5. ಉದ್ದೇಶದಿಂದ; ಉದ್ದೇಶಕ್ಕಾಗಿ; -ಕ್ಕೆ; -ಕ್ಕಾಗಿ; -ಓಸ್ಕರ: went for a walk ಗಾಳಿಸಂಚಾರಕ್ಕಾಗಿ ಹೋದ. for sale ಬಿಕರಿಗಿದೆ; ಮಾರಾಟಕ್ಕಾಗಿ ಇದೆ.
  6. ಅನುಕೂಲವಾಗಲೆಂದು; ಅನುಕೂಲಕ್ಕಾಗಿ; ಅನುಕೂಲಿಸಲೆಂದು: did it for her good ಅವಳ ಹಿತಕ್ಕಾಗಿಯೇ ಅದನ್ನು ಮಾಡಿದೆ.
  7. ಪಡೆಯುವುದಕ್ಕಾಗಿ; ಪಡೆಯಲಿಕ್ಕಾಗಿ: send for a cab ಗಾಡಿಗಾಗಿ ಹೇಳಿ ಕಳುಹಿಸು.
  8. ಗೆಲ್ಲುವುದಕ್ಕೆ: ಗೆಲ್ಲಲಿಕ್ಕಾಗಿ; ಜಯಿಸಲು: play for penny points ಪಾಯಿಂಟಿಗೆ ಒಂದು ಪೆನ್ನಿ ಗೆಲ್ಲಲು ಆಡು.
  9. ಕಾಪಾಡಲು; ಉಳಿಸಲು; ಕಾಪಾಡಲಿಕ್ಕಾಗಿ; ಉಳಿಸಿಕೊಳ್ಳಲಿಕ್ಕಾಗಿ; ರಕ್ಷಿಸಿಕೊಳ್ಳಲಿಕ್ಕಾಗಿ: cannot do it for the life of me ಸತ್ತರೂ ನಾನದನ್ನು ಮಾಡಲಾರೆ; ಜೀವ ಉಳಿಸಿಕೊಳ್ಳುವುದಕ್ಕೂ ಅದನ್ನು ಮಾಡಲಾರೆ.
  10. ಮುಟ್ಟಲು; ಸೇರಲೆಂದು; ತಲುಪಲು: sailed for India ಇಂಡಿಯಾ ತಲುಪಲು ಹಡಗು ಹತ್ತಿದ. made for shelter ರಕ್ಷಿತ ಸ್ಥಾನಕ್ಕೆ ಹೋದ. getting on for three o’clock (ಈಗ ಹೊತ್ತು) ಮೂರು ಗಂಟೆ ಆಗುತ್ತಿದೆ.
  11. ಒಬ್ಬ ವ್ಯಕ್ತಿ ಯಾ ವಸ್ತುವಿಗೆ ಸೇರಲೆಂಬ ಉದ್ದೇಶದಿಂದ: bought shoes for the servants ಸೇವಕರಿಗಾಗಿ ಷೂಗಳನ್ನು ಕೊಂಡನು. won a name for himself ತನಗೆ ಹೆಸರು ಸಂಪಾದಿಸಿಕೊಂಡ.
  12. (ಭಾವ, ಶಕ್ತಿ, ಅರ್ಹತೆಗಳನ್ನು ಸೂಚಿಸುವ ಕ್ರಿಯಾಪದಗಳು, ಗುಣವಾಚಕಗಳು, ನಾಮಪದಗಳು, ಭಾವಸೂಚಕಾವ್ಯಯಗಳು, -ಇವೆಲ್ಲವುಗಳಾದ ಮೇಲೆ) -ರ ವಿಷಯದಲ್ಲಿ; -ರ ಬಗೆಗೆ: don’t care for games ಆಟಗಳನ್ನು ಕಂಡರೆ ಇಷ್ಟವಿಲ್ಲ. fit for nothing ಯಾವುದಕ್ಕೂ ಯೋಗ್ಯವಲ್ಲದ. a longing for praise ಹೊಗಳಿಕೆಗಾಗಿ ಹಂಬಲಿಕೆ. oh for wings! ರೆಕ್ಕೆಗಳಿದ್ದಿದ್ದರೆ! ready for dinner ಊಟಕ್ಕೆ ಸಿದ್ಧವಾಗಿ. time for school ಶಾಲೆಗೆ (ಸರಿಯಾದ) ವೇಳೆಯಾಗಿದೆ. is the man for the job ಆ ಕೆಲಸಕ್ಕೆ ಅರ್ಹನಾದ ಮನುಷ್ಯ. it is for you to make the move ಮುಂದಿನ ಹೆಜ್ಜೆ ನಿನ್ನದು; ಮುಂದಿನ ಕಾರ್ಯಕ್ರಮ ಕೈಗೊಳ್ಳುವುದು ನಿನಗೆ ಸೇರಿದ್ದು, ನಿನ್ನ ಜವಾಬ್ದಾರಿ.
  13. ಪರಿಣಾಮವಾಗಿ; ಫಲಿತಾಂಶದಲ್ಲಿ: all out for 44 ನಲವತ್ನಾಲ್ಕು ರನ್ನುಗಳಿಗೆ ಎಲ್ಲರೂ ಔಟು.
  14. ಅಷ್ಟು ನಷ್ಟಕ್ಕೆ: 150 for 6 wickets ಆರು ವಿಕೆಟ್ಟುಗಳ ನಷ್ಟಕ್ಕೆ 150 ರನ್‍ ಗಳಿಸಿದರು.
  15. ಅಷ್ಟು ಮೊತ್ತಕ್ಕೆ: drew on him for Rs.100 (ಬ್ಯಾಂಕಿನಿಂದ) ಆತನ ಲೆಕ್ಕದಲ್ಲಿ 100 ರೂಪಾಯಿ ಮೊತ್ತ ಪಡೆದೆ.
  16. (ಒಳ್ಳೆಯದಕ್ಕೆ ಯಾ ಕೆಟ್ಟದ್ದಕ್ಕೆ) ಆಗಿ; ಆಗುವಂತೆ; ಪ್ರಭಾವ, ಪರಿಣಾಮ – ಬೀರುವಂತೆ: they live for each other ಅವರು ಒಬ್ಬರಿಗಾಗಿ ಒಬ್ಬರು ಬದುಕುತ್ತಿದ್ದಾರೆ. can shift for myself ನನ್ನ ಪಾಡು ನಾನು ನೋಡಿಕೊಳ್ಳಬಲ್ಲೆ. things look bad for you ಪರಿಸ್ಥಿತಿ ನಿನಗೆ ಕೆಟ್ಟದಾಗಿರುವಂತೆ ತೋರುತ್ತದೆ, ಒಳ್ಳೆಯ ಪರಿಣಾಮವಾಗುವ ಸೂಚನೆ ಕಾಣುವುದಿಲ್ಲ.
  17. ನಾಮಪದ, ಸರ್ವನಾಮ ಯಾ ಧಾತ್ವರ್ಥವಾಚಿಯೊಡನೆ ನಾಮಪದಗುಚ್ಛವಾಗಿ ಪ್ರಯೋಗ: it is usual for hats to be worn ಹ್ಯಾಟುಗಳನ್ನು ಹಾಕಿಕೊಳ್ಳುವುದು ವಾಡಿಕೆ. it is bad for him to smoke ಹೊಗೆಬತ್ತಿ ಸೇದುವುದು ಅವನಿಗೆ ಕೆಟ್ಟದ್ದು.
  18. ಇಂತಹವನೆಂದು ಯಾ ಇಂತಹುದೆಂದು; ಹಾಗೆಂದು; ಅಂತೆಂದು. hold it for certain ಖಂಡಿತವೆಂದು ಅಭಿಪ್ರಾಯಪಡು. be hanged for a pirate ಕಡಲುಗಳ್ಳನೆಂದು ಗಲ್ಲಿಗೇರಿಸಲ್ಪಡು. mistaken for the prime minister ಪ್ರಧಾನಿಯೆಂದು ತಪ್ಪಾಗಿ ಗ್ರಹಿಸಲ್ಪಟ್ಟ. he was beaten up and left for dead ಅವನನ್ನು ಬಡಿದು ಚಚ್ಚಿ, ಸತ್ತಿದ್ದಾನೆಂದು ಕೈಬಿಡಲಾಯಿತು. did it for the second time ಎರಡನೆಯ ಸಲ ಹಾಗೆ ಮಾಡಿದ.
  19. ಕಾರಣದಿಂದ; ನಿಮಿತ್ತದಿಂದ; ಸಲುವಾಗಿ; ಒಬ್ಬನಿಗಾಗಿ ಯಾ ಒಂದು ಕಾರಣಕ್ಕಾಗಿ: did it for pure wantonness ಕೇವಲ ಕುಚೋದ್ಯಕ್ಕಾಗಿ ಮಾಡಿದ. do it for my sake ನನಗಾಗಿ ಅದನ್ನು ಮಾಡು. I tremble for him ಆತನಿಗೆ ಏನಾಗುತ್ತದೆಯೋ ಎಂದು ನಡುಗುತ್ತೇನೆ. notorious for parsimony ಜಿಪುಣತನಕ್ಕೆ ಪ್ರಸಿದ್ಧ.
  20. ಆದರೂ; ಆದಾಗ್ಯೂ: for all that ಅದೆಲ್ಲ ಇದ್ದರೂ. for all you say ನೀನು ಏನೇ ಹೇಳಿದರೂ. for all his bragging ಅವನು ಎಷ್ಟೇ, ಏನೇ ಬಡಾಯಿ ಕೊಚ್ಚಿದರೂ. for all he seems to dislike me I still like him ಅವನಿಗೆ ನನ್ನನ್ನು ಕಂಡರೆ ಆಗದಿರುವಂತೆ ಕಂಡರೂ, ನನಗೆ ಮಾತ್ರ ಅವನನ್ನು ಕಂಡರೆ ಇಷ್ಟವೇ.
  21. ಅಡ್ಡಿಯ ದೆಸೆಯಿಂದ; ಅಡಚಣೆಯ ಕಾರಣದಿಂದ: were it not for, but for, except for ಇದೊಂದು ಅಡ್ಡಿಯಿಲ್ಲದಿದ್ದಿದ್ದರೆ. could not speak but for weeping ಅಳುವಿನ ದೆಸೆಯಿಂದ ಮಾತನಾಡಲಾಗಲಿಲ್ಲ.
  22. ಅನುಗುಣವಾಗಿ: bulk for bulk ಗಾತ್ರಕ್ಕೆ ಗಾತ್ರ. word for word ಪದಕ್ಕೆ ಪದ; ಅಕ್ಷರಶಃ.
  23. ಒಂದಕ್ಕೆ – ಭಿನ್ನವಾಗಿ, ವ್ಯತಿರಿಕ್ತವಾಗಿ: for one enemy he has a hundred friends ಅವನಿಗೆ ಒಬ್ಬ ಶತ್ರುವಿದ್ದರೆ, ನೂರು ಜನ ಸ್ನೇಹಿತರಿದ್ದಾರೆ.
  24. ಸಂಬಂಧಿಸಿದಂತೆ; ಕುರಿತು; ವಿಷಯದಲ್ಲಿ: for the rest ಉಳಿದದ್ದರ ಬಗೆಗೆ. hard up for money ಹಣದ ವಿಷಯದಲ್ಲಿ ತೊಂದರೆಯಾಗಿರು. for my part ನಾನಾದರೂ; ನನ್ನ ಮಟ್ಟಿಗೆ; ನನಗೆ ಸಂಬಂಧಿಸಿದಂತೆ.
  25. (ಸಾಮಾನ್ಯ ಸ್ವರೂಪ ಯಾ ಸ್ವಭಾವವನ್ನು) ಪರಿಗಣಿಸಿದಲ್ಲಿ; ಯೋಚಿಸಿ ನೋಡಿದರೆ; (ಯಾವುದೇ ಗುಣ, ಲೋಪದೋಷ, ಮೊದಲಾದವನ್ನು) ಉಪೇಕ್ಷಿಸಿದರೆ; ಗಣಿಸದೆ ಬಿಟ್ಟರೆ: a humane man for an executioner ಅವನು (ವೃತ್ತಿಯಲ್ಲಿ) ವಧಕಾರ ಎಂಬುದನ್ನು ಯೋಚಿಸಿದರೆ, ನಿಜಕ್ಕೂ ಅವನು ದಯಾಳುವೆನ್ನಬೇಕು. quite active for a man of 80 ಎಂಬತ್ತು ವರ್ಷದ ವ್ಯಕ್ತಿ ಎಂಬುದನ್ನು ಪರಿಗಣಿಸಿದರೆ, ಬಹಳ ಚಟುವಟಿಕೆಯುಳ್ಳವನೇ.
  26. ಅವಧಿಯವರೆಗೆ; ಇಷ್ಟು ಮಟ್ಟಿಗೆ; ಇಲ್ಲಿಯವರೆಗೂ: made comfortable for life ಜೀವಾವಧಿ ಅನುಕೂಲವಾಗಿ ಬದುಕುವಂತೆ ಏರ್ಪಾಟು ಮಾಡಿ. for the present ಸದ್ಯದ ಮಟ್ಟಿಗೆ. has been so for months ತಿಂಗಳುಗಟ್ಟಲೆ ಹೀಗೆಯೇ ಇದೆ.
ನುಡಿಗಟ್ಟು
  1. alas for him! ಅಯ್ಯೋ ಪಾಪ! ಅವನ ಗತಿ ಹೀಗಾಯಿತೇ!
  2. be for it (ಅಶಿಷ್ಟ) ಶಿಕ್ಷೆ ಕಾದಿರು; ತೊಂದರೆಗೆ ಸಿದ್ಧನಾಗಿರು.
  3. fie for shame! ಛೇ! ನಾಚಿಕೆಗೇಡು!
  4. for all that (ಹೇಳಿರುವುದು, ಮಾಡಿರುವುದು, ಮೊದಲಾದವು) ಇಷ್ಟೆಲ್ಲಾ ಆದರೂ ಇಷ್ಟೆಲ್ಲ ನಡೆದಿದ್ದರೂ.
  5. for all the world ಖಂಡಿತ; ನಿಸ್ಸಂದೇಹವಾಗಿ. looked for all the world like a porpoise ಖಂಡಿತ, ಒಂದು ಕಡಲಹಂದಿಯಂತೆಯೇ ಕಾಣುತ್ತಿತ್ತು.
  6. for good
    1. ಕಟ್ಟ ಕಡೆಯದಾಗಿ; ಅಂತಿಮವಾಗಿ; ಕೊನೆಯದಾಗಿ; ಆತ್ಯಂತಿಕವಾಗಿ.
    2. ಶಾಶ್ವತವಾಗಿ; ಎಂದೆಂದಿಗೂ: he’s leaving the country for good ಅವನು ಶಾಶ್ವತವಾಗಿ ಊರು ಬಿಟ್ಟು ಹೋಗುತ್ತಿದ್ದಾನೆ; ಅವನು ಎಂದೆಂದಿಗೂ ಈ ದೇಶಕ್ಕೆ ವಾಪಸು ಬರುವುದಿಲ್ಲ.
  7. go for.
  8. good enough for me ನನ್ನ ಮಟ್ಟಿಗೆ ಸಾಕಷ್ಟು ಚೆನ್ನಾಗಿದೆ; ನನಗೆ ಸಾಕು.
  9. I for one do not believe it ನಾನಂತೂ ಅದನ್ನು ನಂಬುವುದಿಲ್ಲ; ನನ್ನ ಮಟ್ಟಿಗೆ ಹೇಳುವುದಾದರೆ ನಾನದನ್ನು ನಂಬುವುದಿಲ್ಲ.
  10. is not long for this world ಈ ಲೋಕದಲ್ಲಿ ಹೆಚ್ಚುಕಾಲ ಇರಲಾರ, ಹೆಚ್ಚು ಕಾಲ ಬದುಕಿರಲಾರ; ಬೇಗ ಸಾಯುತ್ತಾನೆ.
  11. nothing for it but to submit ತಲೆಬಾಗುವುದರ ಹೊರತು ಬೇರೇನೂ ಉಪಾಯ ಉಳಿದಿಲ್ಲ; ಸೋಲೊಪ್ಪದೆ ಬೇರೆ ದಾರಿ ಇಲ್ಲ.
  12. not paid for ಅದರ ಬೆಲೆ ಕೊಟ್ಟಿಲ್ಲ, ಸಲ್ಲಿಸಿಲ್ಲ.
  13. now for it ಈಗ ಅದಕ್ಕೆ ಹೋಗೋಣ.
  14. once for all ಅಂತಿಮವಾಗಿ; ಆಖೈರಾಗಿ.
  15. stand for ಪ್ರತಿನಿಧಿಸು.
  16. take for granted (ಯಾವುದೇ ವಿಷಯವನ್ನು) ನಿಜವೆಂದು ಭಾವಿಸಿಕೊಂಡುಬಿಡು; ಸಿದ್ಧವೆಂದು ಪರಿಗಣಿಸು.
  17. take my word for it ನನ್ನ ಮಾತನ್ನು ನಂಬು.
  18. take somebody or something for ಒಬ್ಬನನ್ನು ಯಾ ಒಂದನ್ನು ಬೇರೊಬ್ಬನಾಗಿ ಯಾ ಬೇರೊಂದನ್ನಾಗಿ (ತಪ್ಪಾಗಿ)-ತಿಳಿ. ಗ್ರಹಿಸು, ಎಣಿಸು: do you take me for a fool? ನನ್ನನ್ನು ಮುಟ್ಠಾಳನೆಂದು ಎಣಿಸುವೆಯಾ?
  19. there’s (or that’s) for you (ಧೈರ್ಯ, ಕೃತಜ್ಞತೆ, ಮೊದಲಾದವುಗಳ ವಿಷಯದಲ್ಲಿ ಮೆಚ್ಚುಗೆಯನ್ನು ಯಾ ವ್ಯಂಗ್ಯವನ್ನು ಸೂಚಿಸುವ ಉದ್ಗಾರ): there’s courage for you! (ಮೆಚ್ಚುಗೆ) ಧೈರ್ಯ ಅಂದರೆ ಅದು. that’s gratitude for you! (ವ್ಯಂಗ್ಯವಾಗಿ) ಕೃತಜ್ಞತೆ ಎಂದರೆ ಇದೇ!
  20. too beautiful for words ಮಾತಿಗೆ ಈರಿದಷ್ಟು ಸುಂದರವಾದ: ಮಾತಿನಿಂದ ಬಣ್ಣಿಸಲಾಗದಷ್ಟು ಸುಂದರವಾದ; ವರ್ಣನಾತೀತವಾಗಿ ಸುಂದರವಾದ.
  21. went for a soldier (ಪ್ರಾಚೀನ ಪ್ರಯೋಗ) ಸೈನಿಕನಾಗಲು ಹೋದ.
  22. what for? ಏತಕ್ಕಾಗಿ? ಯಾವುದಕ್ಕಾಗಿ? ಯಾವ – ಉದ್ದೇಶಕ್ಕಾಗಿ, ಪ್ರಯೋಜನಕ್ಕಾಗಿ? what is this tool for? ಈ ಹತ್ಯಾರದ ಉಪಯೋಗ ಏನು? what did you do that for? ನೀನು ಏಕೆ ಅದನ್ನು ಮಾಡಿದೆ?
  23. wish to see it for myself ನಾನೇ ಖುದ್ದಾಗಿ ಅದನ್ನು ನೋಡಬಯಸುತ್ತೇನೆ (ಇತರರ ಹೇಳಿಕೆಗಳನ್ನು, ವರ್ಣನೆಗಳನ್ನು ನಂಬುವುದಿಲ್ಲ).
See also 1for
2for ಹಾರ್‍
ಸಂಯೋಜಕಾವ್ಯಯ
  1. ಆದ್ದರಿಂದ ; ಇದನ್ನು ನೋಡಿದರೆ.
  2. ಏಕೆಂದರೆ; ಈ ಕಾರಣದಿಂದ: I asked him to stay to tea, for I had something to tell him ಅವನನ್ನು ಚಹಾಗೆ ಇರಲು ಹೇಳಿದೆ, ಏಕೆಂದರೆ ಅವನಿಗೆ ನಾನು ಯಾವುದನ್ನೋ ಹೇಳಬೇಕಾಗಿತ್ತು.
  3. ಏಕೆಂದರೆ; ಇದನ್ನು ಮನಗಾಣಲು: ಈ ಅಂಶವನ್ನು ಗಮನಿಸಿ ಯಾ ನೆನಪಿನಲ್ಲಿಟ್ಟು: the two sides are equal, for ABC is isosceles ಅವೆರಡು ಬಾಹುಗಳು ಸಮವಾಗಿವೆ, ಏಕೆಂದರೆ ABC ಸಮದ್ವಿಬಾಹು ತ್ರಿಭುಜ.