footman ಹುಟ್‍ಮನ್‍
ನಾಮವಾಚಕ
  1. ಪದಾತಿ; ಕಾಲಾಳು.
  2. ಸಮವಸ್ತ್ರದ ಸೇವಕ; ಸವಾರಿ ಗಾಡಿಯ. ಮನೆಬಾಗಿಲಿನ, ಊಟದ ಮೇಜಿನ ಬಳಿಯ, ಪೋಷಾಕು ಧರಿಸಿದ ಆಳು, ಸೇವಕ, ಕಿಂಕರ.
  3. ಮುಕ್ಕಾಲ ಅಡ್ಡಣಿಗೆ; ತ್ರಿಪಾದಿ ನಿಲುವು; ಅಡುಗೆಯನ್ನು ಬಿಸಿಯಾಗಿಡಲು ಬಳಸುವ, ಒಲೆಯ ಮುಂದೆ ಪಾತ್ರೆಗಳನ್ನಿಡುವ, ಮೂರು ಕಾಲಿನ ಲೋಹದ ನಿಲುವು.