footing ಹುಟಿಂಗ್‍
ನಾಮವಾಚಕ
  1. ಕಾಲಿಡುವುದು; ಕಾಲೂರುವುದು.
  2. ಕಾಲ್ನೆಲೆ; ಕಾಲಾಸರೆ; ಪಾದಾಧಾರ; ಕಾಲಿಡಲು ಜಾಗ (ರೂಪಕವಾಗಿ ಸಹ).
  3. ಭದ್ರ, ಸುರಕ್ಷಿತ – ಸ್ಥಾನ (ರೂಪಕವಾಗಿ ಸಹ).
  4. (ವ್ಯಕ್ತಿಗೆ ಯಾ ಸಂಸ್ಥೆಗೆ ಇತರರೊಡನೆ ಇರುವ) ಸಲಿಗೆ ಸಂಬಂಧ, ಸ್ಥಾನಮಾನ, ಮೊದಲಾದವು.
  5. (ಉದ್ಯೋಗ, ಸಂಘ, ಮೊದಲಾದವಕ್ಕೆ) ಸೇರಲು ತೆರುವ ಪ್ರವೇಶಧನ.
  6. ಅಡಿವರಿಸೆ; ಗೋಡೆ ಮೊದಲಾದವುಗಳ ಅಡಿಯಲ್ಲಿ ಮುಂದಕ್ಕೆ ಚಾಚಿಕೊಂಡಿರುವ ವರಿಸೆ.
  7. (ನಿಲುಸಾಲಿನಲ್ಲಿನ ಸಂಖ್ಯೆಗಳ)
    1. ಮೊತ್ತ.
    2. ಮೊತ್ತದ ಗಣನೆ.