See also 2foot
1foot ಹುಟ್‍
ನಾಮವಾಚಕ
(ಬಹುವಚನ feet)
  1. ಅಡಿ; ಪಾದ; ಚರಣ.
  2. ಹೆಜ್ಜೆ; ನಡೆ; ನಡಗೆ: has a light foot ಚುರುಕಾಗಿ ನಡೆಯುತ್ತಾನೆ. swift of foot ನಡೆ ಚುರುಕಾದ.
  3. (ಬ್ರಿಟಿಷ್‍ ಪ್ರಯೋಗ, ಚರಿತ್ರೆ) ಕಾಲ್ಬಲ; ಪದಾತಿದಳ: the 4th foot ನಾಲ್ಕನೆಯ ಪದಾತಿದಳ. a captain of foot ಪದಾತಿದಳದ ಕ್ಯಾಪ್ಟನ್ನು.
  4. (ಮಂಚ, ಮೇಜು, ಗೋರಿ, ಹಾಸಿಗೆ, ಮೊದಲಾದವುಗಳ) ಕಾಲ್ಕಡೆ; ಪಾದಪಾರ್ಶ್ವ, ಕಾಲಿನ; ಕಡೆಯ ತುದಿ; ಕೆಳತುದಿ.
  5. (ಕಾಲುಚೀಲ ಮೊದಲಾದವುಗಳ) ಪಾದ; ಪಾದದ, ಹೆಜ್ಜೆಯ – ಭಾಗ.
  6. (ಛಂದಸ್ಸು) ಗಣ.
  7. (ಬಹುವಚನದಲ್ಲಿ, foot ಎಂದೂ ಸಹ ಪ್ರಯೋಗ) (ಅಳತೆ) ಒಂದು ಅಡಿ; 12 ಅಂಗುಲ ಯಾ 30.48 ಸೆಂಟಿಈಟರ್‍: ten feet long ಹತ್ತಡಿ ಉದ್ದ. a ten-foot pole ಹತ್ತು ಅಡಿಯ ಕಂಬ.
  8. ಪೀಠ; ಯಾವುದೇ ವಸ್ತುವಿನ ಕೆಳಗಿನ ಆಧಾರಭಾಗ.
  9. (ಪ್ರಾಣಿವಿಜ್ಞಾನ) ಪಾದ; ಕಾಲು; ಅಕಶೇರುಕಗಳಲ್ಲಿ ಸಂಚಾರಕ್ಕೆ ಬಳಸುವ ಅಂಗ.
  10. (ಸಸ್ಯವಿಜ್ಞಾನ) (ಹೂವಿನ) ದಳದ ಬುಡ.
  11. ಕೂದಲ – ಬೇರು, ಮೂಲ.
  12. (ಬೆಟ್ಟ, ಏಣಿ, ಗೋಡೆ, ಪಟ್ಟಿ, ಪುಟ, ತರಗತಿ, ಮೊದಲಾದವುಗಳ) ಬುಡ; ಅಡಿ; ಅತ್ಯಂತ – ಕೆಳಭಾಗ, ಕೊನೆ, ತುದಿ.
  13. (ಬಹುವಚನ foots) ಮಷ್ಟು; ಮಡ್ಡಿ; ಗಸಿ; ಚರಟ; ದ್ರವದ ತಳದಲ್ಲಿ ನಿಂತಿರುವ ಪದಾರ್ಥ.
  14. (ಅಡಿ) ಮಣೆ; ಹೊಲಿಗೆ ಯಂತ್ರದಲ್ಲಿ ಬಟ್ಟೆಯನ್ನು ಬಿಗಿಯಾಗಿ ಹಿಡಿದಿಡುವ ಭಾಗ.
  15. ಕಚ್ಚಾ ಸಕ್ಕರೆ.
ನುಡಿಗಟ್ಟು
  1. at foot (ಕುದುರೆಮರಿಯ ವಿಷಯದಲ್ಲಿ) ತಾಯಿಯ ಜೊತೆ ಹೋಗು, ಓಡಾಡು.
  2. at one’s foot
    1. ಒಬ್ಬನ ಶಿಷ್ಯನಾಗಿ.
    2. ಒಬ್ಬನ ಪಾದತಲದಲ್ಲಿ; ಒಬ್ಬನ – ಅಧೀನನಾಗಿ, ಆಶ್ರಿತನಾಗಿ, ಶರಣಾಗತನಾಗಿ.
  3. carry one off his feet ಉತ್ಸಾಹಭರಿತನನ್ನಾಗಿ ಮಾಡು; ಉದ್ರೇಕಿಸು; ಮೈಮರೆಸು; ಪರವಶಗೊಳಿಸು.
  4. $^2$change one’s feet.
  5. $^1$drag one’s feet.
  6. 1fall on one’s feet.
  7. feet of clay ಐಬು; ಮುಖ್ಯ ದೌರ್ಬಲ್ಯ; ದೊಡ್ಡದೋಷ: have feet of clay ದೋಷಯುಕ್ತನಾಗಿರು; (ಸಾಮಾನ್ಯವಾಗಿ ಪ್ರತಿಷ್ಠಿತ) ದೋಷವನ್ನು, ದೌರ್ಬಲ್ಯವನ್ನು – ಹೊಂದಿರು.
  8. find length of one’s foot ಒಬ್ಬನ ಬಲಾಬಲಗಳನ್ನು ತಿಳಿದಿರು; (ಒಬ್ಬನನ್ನು) ನಿರ್ವಹಿಸುವ ಗುಟ್ಟು ತಿಳಿದಿರು.
  9. 1find one’s foot.
  10. foot in the door.
  11. get one’s feet wet ಭಾಗವಹಿಸಲು ಪ್ರಾರಂಭಿಸು; ಪಾಲ್ಗೊಳ್ಳಲು ಶುರುಮಾಡು.
  12. have a foot in both the camps ಎರಡೂ ಕಡೆ ಇರು; ಪರಸ್ಪರ ವಿರೋಧಿಗಳಾದ ಎರಡೂ ಪಕ್ಷಗಳಲ್ಲಿ ಇರು.
  13. have one foot in the grave ಸಾವು ಸಈಪಿಸಿರು; ಮೃತ್ಯುಮುಖದಲ್ಲಿರು; ಸಾವಿನ ಹೊಸ್ತಿಲಲ್ಲಿರು; ಸಮಾಧಿಯೊಳಕ್ಕೆ ಕಾಲಿಟ್ಟಿರು; ‘ಊರು ಹೋಗು, ಕಾಡು ಬಾ’ ಎನ್ನುವ ಸ್ಥಿತಿಯಲ್ಲಿರು.
  14. have one’s feet on the ground ವ್ಯಾವಹಾರಿಕ ದೃಷ್ಟಿಯುಳ್ಳವನಾಗಿರು; ವ್ಯವಹಾರಸ್ಥನಾಗಿರು.
  15. have (or put) one’s foot on the neck of ಒಬ್ಬನ ಕುತ್ತಿಗೆಯ ಮೇಲೆ ತನ್ನ ಕಾಲನ್ನು ಮೆಟ್ಟು, ಅದುಮಿಡು; ಬಗ್ಗುಬಡಿ; ಪೂರ್ತಿ ಸೋಲಿಸು; ಹಿಡಿತದಲ್ಲಿಟ್ಟುಕೊಂಡಿರು; ಅಧೀನದಲ್ಲಿಟ್ಟುಕೊ; ವಶವರ್ತಿಯನ್ನಾಗಿ ಮಾಡಿಕೊ.
  16. have the $^1$ball at one’s feet.
  17. keep one’s feet ಕಾಲು ಭದ್ರವಾಗಿರು; ಬೀಳದಂತೆ ದೃಢವಾಗಿ ನಿಂತಿರು.
  18. know length of one’s feet = ನುಡಿಗಟ್ಟು \((8)\).
  19. measure another’s foot by one’s own last ತನ್ನ ಅಳತೆಗೋಲಿನಿಂದ ಇನ್ನೊಬ್ಬನನ್ನು ಅಳೆ.
  20. my foot! ತಿರಸ್ಕಾರದಿಂದ ಅಲ್ಲಗಳೆಯುವಾಗ ಯಾ ವಿರೋಧ ಸೂಚಿಸುವಾಗ ಬಳಸುವ ಉದ್ಗಾರ – ‘ನಿನ್ನ ತಲೆ!’, ‘ಅವನ ಯಾ ಅವಳ ತಲೆ’, ಮೊದಲಾದವು.
  21. not put a foot wrong ತಪ್ಪುಹೆಜ್ಜೆಯಿಡದೆ; ಸ್ವಲ್ಪವೂ ತಪ್ಪು ಮಾಡದೆ; ತಪ್ಪೆಸಗದೆ.
  22. off one’s feet ನಿಂತುಕೊಳ್ಳಲಾಗದಂತೆ; ಕಾಲೂರದಂತೆ; ಕಾಲೂರಿ ನಿಲ್ಲಲಾರದಂತೆ ಯಾ ಇಂಥ ಸ್ಥಿತಿಯಲ್ಲಿ: was rushed off my feet ಕಾಲೂರದಂತೆ ಎತ್ತಿಕೊಂಡು ಹೋದರು.
  23. on foot
    1. ಕಾಲುನಡಗೆಯಲ್ಲಿ; ಪಾದಚಾರಿಯಾಗಿ.
    2. ನಡೆಯುತ್ತಾ; ಹೂಡಲ್ಪಟ್ಟು; ಚಾಲಿತನಾಗಿ: set movement on foot ಚಳುವಳಿ – ಹೂಡು, ಪ್ರಾರಂಭಿಸು.
  24. on one’s feet
    1. (ಮುಖ್ಯವಾಗಿ ಭಾಷಣ ಮಾಡಲು) ಎದ್ದುನಿಂತು; ನಿಂತುಕೊಂಡು.
    2. ಜೀವಿಸಿದ್ದು.
    3. ಆರೋಗ್ಯವುಳ್ಳವನಾಗಿ.
  25. on the right foot ಅನುಕೂಲಕರ ಪರಿಸ್ಥಿತಿಯಲ್ಲಿ.
  26. on the wrong foot ಅನನುಕೂಲ ಪರಿಸ್ಥಿತಿಯಲ್ಲಿ; ಎಡವಟ್ಟಿನಲ್ಲಿ.
  27. put one’s $^1$best feet forward.
  28. put one’s feet up (ಆಡುಮಾತು) (ಕಾಲು ಚಾಚಿಕೊಂಡು) ವಿಶ್ರಾಂತಿ ಪಡೆ.
  29. put one’s foot down
    1. ಕದಲದಿರು; ದೃಢನಿಲುವನ್ನು ತಾಳು.
    2. ಮೋಟಾರುವಾಹನದ (ಆಕ್ಸಿಲರೇಟರನ್ನು ಕಾಲಿನಿಂದ ಒತ್ತಿ) ವೇಗ ಹೆಚ್ಚಿಸು.
  30. put one’s foot in it ಅವಿವೇಕ ಮಾಡಿಕೊ; ತಪ್ಪು ಮಾಡು; ಎಡವು.
  31. set foot in (or on) (ಸ್ಥಳ ಮೊದಲಾದವುಗಳಿಗೆ) ಹೋಗು; ಪ್ರವೇಶಿಸು.
  32. set on foot (ಕೆಲಸ, ಕಾರ್ಯ, ಮೊದಲಾದವನ್ನು) ಆರಂಭಿಸು; ಶುರುಮಾಡು.
  33. set somebody on his feet ಒಬ್ಬನನ್ನು ಸ್ವಾವಲಂಬಿಯನ್ನಾಗಿ ಮಾಡು; ಸ್ವತಂತ್ರನಾಗಿರುವಂತೆ ಮಾಡು.
  34. stand on one’s feet ಸ್ವತಂತ್ರನಾಗಿರು; ಸ್ವಾವಲಂಬಿಯಾಗಿರು; ತನ್ನ ಕಾಲಮೇಲೆ ತಾನು ನಿಂತಿರು; ಇತರರ ಸಹಾಯ ಬೇಡದಂತಿರು.
  35. to one’s own feet ನಿಲ್ಲುವ ಸ್ಥಿತಿಯಲ್ಲಿ ಯಾ ಸ್ಥಿತಿಗೆ.
  36. tread under foot
    1. ತುಳಿದುಹಾಕು; ಕಾಲ ಕೆಳಗೆ ಹೊಸಕಿಹಾಕು.
    2. ದಮನಮಾಡು; ಅಡಗಿಸಿಡು; ತುಳಿದಿಡು.
  37. under foot ಕಾಲಡಿಯಲ್ಲಿ; ಕಾಲ ಕೆಳಗೆ; ನೆಲದ ಮೇಲೆ.
  38. under one’s feet ಒಬ್ಬನ ಪ್ರಗತಿಯನ್ನು ತಡೆಯುತ್ತ; ಒಬ್ಬನು ಮುಂದುವರೆಯುವುದಕ್ಕೆ ಅಡ್ಡಿಯಾಗಿ, ಅಡ್ಡಿ ಪಡಿಸುತ್ತ.
  39. with foal at foot (ಕುದುರೆ) ಮರಿ ಹಾಕಿರುವ.
  40. (with one’s) feet first (or foremost) ಅಡಿ ಮುಂದಾಗಿ; ಪಾದ ಮುಂದಾಗಿ; ಶ್ಮಶಾನಕ್ಕೆ – ಸಾಗುತ್ತ, ಒಯ್ಯಲ್ಪಡುತ್ತ.
See also 1foot
2foot ಹುಟ್‍
ಸಕರ್ಮಕ ಕ್ರಿಯಾಪದ
  1. ಅಡಿಯಿಡು; ತುಳಿ.
  2. ನಡೆ; ಕಾಲ್ನಡೆಯಲ್ಲಿ ಪ್ರಯಾಣ ಮಾಡು.
  3. (ಕಾಲು ಚೀಲಕ್ಕೆ) ಹೊಸ ಪಾದ ಹಾಕು.
  4. (ಲೆಕ್ಕವನ್ನು) ಒಟ್ಟು ಕೂಡು; ಕೂಡಿಸು.
  5. (ಬಿಲ್ಲಿನ) ಹಣವನ್ನು – ಸಲ್ಲಿಸು, ಕೊಡು, ತೆರು, ಪಾವತಿಮಾಡು.
ಅಕರ್ಮಕ ಕ್ರಿಯಾಪದ

(ಬಿಲ್ಲು, ಲೆಕ್ಕದ ಬಾಬುಗಳು, ಮೊದಲಾದವುಗಳ ವಿಷಯದಲ್ಲಿ) ಮೊತ್ತವಾಗು; ಒಟ್ಟು ಆಗು; ಜುಮ್ಲಾ ಆಗು.

ಪದಗುಚ್ಛ
  1. foot it
    1. ಕುಣಿ; ನರ್ತಿಸು.
    2. ಹೆಜ್ಜೆ ಇಡು; ಹೆಜ್ಜೆಹಾಕು; ನಡೆ; ಹೋಗು.
  2. foot the bill (ಆಡುಮಾತು) ಬಿಲ್ಲಿನ ಹಣ ಸಲ್ಲಿಸು ಯಾ ಸಲ್ಲಿಸಲು ಒಪ್ಪು.