foolscap ಹೂಲ್ಸ್‍ಕ್ಯಾಪ್‍
ನಾಮವಾಚಕ
  1. (fool’s cap ಸಹ ಪ್ರಯೋಗ) ಕೋಡಂಗಿ ಟೋಪಿ; ನಾಟಕದಲ್ಲಿ ವಿದೂಷಕ ಧರಿಸುವ, ಗೆಜ್ಜೆಕಟ್ಟಿದ, ಶಂಕುವಿನಾಕಾರದ ಟೋಪಿ.
  2. (fool’s cap ಸಹ ಪ್ರಯೋಗ) ಮಂಕು ಟೋಪಿ; ಬೇಗ ಕಲಿಯದ ಯಾ ಸೋಮಾರಿಯಾದ ವಿದ್ಯಾರ್ಥಿಗಳಿಗೆ ಶಿಕ್ಷೆಯಾಗಿ ಶಾಲೆಗಳಲ್ಲಿ ತೊಡಿಸುತ್ತಿದ್ದ ಶಂಕುವಿನಾಕಾರದ ಉದ್ದನೆಯ ಟೋಪಿ.
  3. ಹೂಲ್‍ಸ್ಕೇಪು; ಒಂದು ಗೊತ್ತಾದ ಅಳತೆಯ ಕಾಗದ (ಸುಮಾರು $330 \times 200$ ಯಾ 400 ಮಿಲಿಈಟರ್‍.) (ಹಳೆಯ ಕಾಲದಲ್ಲಿ, ಬರೆಯುವ ಕಾಗದ ತಯಾರಕರು ನಿಗದಿಮಾಡಿದ್ದ ಅಳತೆಯ ಕಾಗದ).