See also 2fool  3fool  4fool
1fool ಹೂಲ್‍
ನಾಮವಾಚಕ
  1. ದಡ್ಡ; ಎಗ್ಗ; ಪೆದ್ದ; ಮಂಕ; ಹುಚ್ಚ; ಅವಿವೇಕಿ; ಬುದ್ಧಿಹೀನ; ತಿಳಿಗೇಡಿ; ಅಜ್ಞ; ಮಡೆಯ; ಮುಟ್ಠಾಳ; ಮೂಢ.
  2. (ಮಧ್ಯಯುಗದ ಶ್ರೀಮಂತರ ಮನೆಗಳಲ್ಲಿಯ) ಹಾಸ್ಯಗಾರ; ವಿದೂಷಕ; ನಕಲಿಶ್ಯಾಮ; ಕೋಡಂಗಿ: play the fool ನಕಲಿಮಾಡು; ವಿದೂಷಕನ ಪಾತ್ರವಹಿಸು.
  3. ಮಂಕ; ಬೆಪ್ಪ; ಮರುಳ; ಸುಲಭವಾಗಿ ಮೋಸ ಹೋಗುವವನು: make a fool of
    1. (ಯಾವನೋ ಒಬ್ಬನನ್ನು) ಲೇವಡಿ ಮಾಡು; ಹಾಸ್ಯಾಸ್ಪದವಾಗಿಸು.
    2. (ಒಬ್ಬನನ್ನು) ಮೋಸ ಹೋಗಿಸು; ಮರುಳುಮಾಡು.
ಪದಗುಚ್ಛ
  1. All Fools’ Day ಸರ್ವಮೂರ್ಖರ ದಿನ; ಏಪ್ರಿಲ್‍ ಮೊದಲನೆಯ ತಾರೀಖು.
  2. April fool ಏಪ್ರಿಲ್‍ ಮೊದಲನೆಯ ತಾರೀಖಿನ ದಿನ ಮೋಸಹೋದವನು ಯಾ (ಮೋಸಗೊಂಡು) ಹುಚ್ಚುಹುಚ್ಚು ಕೆಲಸಕ್ಕೆ ಕಳುಹಿಸಲ್ಪಟ್ಟವನು.
ನುಡಿಗಟ್ಟು
  1. a fool’s bolt is soon shot ಆವಿವೇಕಿ ಬಾಯಿ ತೆರೆಯುವುದೂ ಬೇಗನೆ, ಬಾಯಿ ಮುಚ್ಚುವುದೂ ಬೇಗನೆ; ದಡ್ಡನ ವಾದ ಬೇಗ ಮುಗಿಯುತ್ತದೆ.
  2. be a fool for ಆಕರ್ಷಣೆಗಳಿಂದ ತಪ್ಪಿಸಿಕೊಳ್ಳಲು ಅಸಮರ್ಥನಾಗಿರು.
  3. be a fool for one’s pains ವೃಥಾ ಕಷ್ಟ ಪಡು; ಮೈ ನೋಯಿಸಿಕೊಂಡು ಮುಟ್ಠಾಳನಾಗು.
  4. be a fool to (ಪ್ರಾಚೀನ ಪ್ರಯೋಗ) (ಇನ್ನೊಂದರೊಡನೆ ಹೋಲಿಸಿದಾಗ) ಕೀಳಾಗಿರು: the Black Hole of Calcutta must have been a fool to it ಇದರ ಮುಂದೆ ‘ಕಲ್ಕತ್ತ ಕತ್ತಲೆ ಕೋಣೆ’ ಏನೇನೂ ಅಲ್ಲ.
  5. fool’s errand ಪ್ರಯೋಜನವಿಲ್ಲದ ಕೆಲಸ; ವ್ಯರ್ಥ ಕಾರ್ಯ.
  6. fool’s mate (ಚದುರಂಗ) ಮೊದಲನೆಯ ಆಟಗಾರನು ಎದುರಾಳಿಯ ಎರಡನೆಯ ಚಲನೆಯಲ್ಲೇ (ಶಹಾ ಕೊಡಲ್ಪಡುವುದರಿಂದ) ಸೋಲುವುದು.
  7. fool’s paradise ಭ್ರಾಂತಿಸ್ವರ್ಗ; ಭ್ರಮೆ.
  8. man is a fool or physician at thirty ಮೂವತ್ತು ವರ್ಷ ತುಂಬಿದ ಮೇಲೆ ದಡ್ಡದಡ್ಡನೇ, ಜಾಣ ಜಾಣನೇ; ತಿಳಿದವನಿಗೆ ಬುದ್ಧಿವಾದದ ಅಗತ್ಯವಿಲ್ಲ.
  9. no fool ದಡ್ಡನಲ್ಲ; ಅವಿವೇಕಿಯಲ್ಲ; ವಿವೇಕಿ.
  10. nobody’s fool = ನುಡಿಗಟ್ಟು \((9)\).
  11. no fool like an old fool (ಮುದಿ ನಲ್ಲನ ವಿಷಯದಲ್ಲಿ) ಮುದಿ ಮುಟ್ಠಾಳನಿಗಿಂತ ದೊಡ್ಡ ಮುಟ್ಠಾಳನಿಲ್ಲ.
  12. play (or act) the fool
    1. ಪೆದ್ದು ಪೆದ್ದಾಗಿ ವರ್ತಿಸು; ಅನುಚಿತವಾಗಿ ವರ್ತಿಸು; ಅವಿವೇಕದಿಂದ ವರ್ತಿಸು.
    2. ವಿದೂಷಕನಂತಾಡು.
See also 1fool  3fool  4fool
2fool ಹೂಲ್‍
ಗುಣವಾಚಕ

(ಅಮೆರಿಕನ್‍ ಪ್ರಯೋಗ, ಆಡುಮಾತು) = foolish.

See also 1fool  2fool  4fool
3fool ಹೂಲ್‍
ಸಕರ್ಮಕ ಕ್ರಿಯಾಪದ
  1. ಪುಸಲಾಯಿಸಿ (ಹಣ ಮೊದಲಾದವನ್ನು) ಕೀಳು, ಕಸಿದುಕೊ.
  2. (ಯಾವುದೋ ಒಂದು ಕೆಲಸ ಮಾಡುವಂತೆ) ಒಬ್ಬನನ್ನು ಪುಸಲಾಯಿಸು, ಮರುಳುಮಾಡು.
  3. (ವೃಥಾ ಕಾಲ, ಹಣ, ಮೊದಲಾದವುಗಳನ್ನು) ಕಳೆದುಬಿಡು; ಹಾಳು ಮಾಡು; ಅಪವ್ಯಯಮಾಡು.
  4. ಮರುಳುಗೊಳಿಸು; ವಂಚಿಸು; ಟೋಪಿಹಾಕು: his disguise didn’t fool anybody ಅವನ ಮಾರುವೇಷ ಯಾರನ್ನೂ ವಂಚಿಸಲಿಲ್ಲ.
ಅಕರ್ಮಕ ಕ್ರಿಯಾಪದ
  1. ಹುಚ್ಚನಂತೆ, ಅವಿವೇಕಿಯಂತೆ – ನಡೆ.
  2. ಚೆಲ್ಲಾಟವಾಡು; ಹುಡುಗಾಟವಾಡು.
  3. ಅಲಸಿಗನಾಗಿ ಓಡಾಡು; ಸೋಮಾರಿಯಾಗಿ ಕಾಲ ಕಳೆ.
  4. ನಕಲಿಮಾಡು; ಹಾಸ್ಯ(ಗಾರನ) ಪಾತ್ರ ವಹಿಸು; ವಿನೋದಕ್ಕಾಗಿ ವೇಷಧರಿಸು: a master maker of comedy, he could fool excellently ವಿನೋದನಾಟಕ ರಚನೆಯಲ್ಲಿ ಮಹಾಚತುರನಾಗಿದ್ದು, ಅವನು ತುಂಬಾ ಸೊಗಸಾಗಿ ಹಾಸ್ಯಪಾತ್ರ ಅಭಿನಯಿಸಬಲ್ಲನಾಗಿದ್ದ.
  5. ತಮಾಷೆ ಮಾಡು; ಹಾಸ್ಯ ಮಾಡು; ಗೇಲಿ ಮಾಡು: don’t be frightened, I was only fooling ಹೆದರಬೇಡ, ನಾನು ತಮಾಷೆ ಮಾಡುತ್ತಿದ್ದೆ, ಅಷ್ಟೆ.
ನುಡಿಗಟ್ಟು

fool along (ಅಮೆರಿಕನ್‍ ಪ್ರಯೋಗ) ನಿಧಾನವಾಗಿ ಸಾಗು; ಸಾವಕಾಶವಾಗಿ ಮುಂದುವರೆ.

See also 1fool  2fool  3fool
4fool ಹೂಲ್‍
ನಾಮವಾಚಕ

ಹಣ್ಣಿನ ರಸಾಯನ; ನುಣ್ಣಗೆ ಅರೆದು ಬೇಯಿಸಿ ಹಾಲು, ಕೆನೆ, ಮೊದಲಾದವುಗಳ ಜತೆ ಬೆರೆಸಿದ ಹಣ್ಣಿನ ಗಟ್ಟಿರಸ, (ಮುಖ್ಯವಾಗಿ) gooseberry fool ಗೂಸ್ಬರಿ ಹಣ್ಣಿನ ರಸಾಯನ.