food ಹೂಡ್‍
ನಾಮವಾಚಕ
  1. ಆಹಾರ; ತಿಂಡಿ; ತಿನಿಸು; ತೀನಿ; ಉಣಿಸು; ಊಟ; ಗ್ರಾಸ.
  2. ಪೌಷ್ಟಿಕ ದ್ರವ್ಯ; ಪೋಷಕದ್ರವ್ಯ.
  3. ಆಹಾರ – ವಸ್ತು, ಸಾಮಗ್ರಿ.
  4. ಅನ್ನ; ಖಾದ್ಯ: food and drink ಅನ್ನಪಾನ; ತಿಂಡಿತೀರ್ಥ.
  5. (ಯಾವುದೋ) ನಿರ್ದಿಷ್ಟ ಆಹಾರ; ಒಂದು ಗೊತ್ತಾದ ರೀತಿಯ ಆಹಾರ.
  6. ಸಸ್ಯಪೋಷಕ; ಸಸ್ಯ, ಚರ್ಮ, ಮೊದಲಾದವುಗಳಿಗೆ ನೀಡುವ ಪೋಷಕ ದ್ರವ್ಯ.
  7. ಗ್ರಾಸ; ಆಹಾರ; ಸಾಮಗ್ರಿ; ಮನಸ್ಸಿಗೆ ಒದಗಿಸುವ ಸಾಮಗ್ರಿ: mental food ಮಾನಸಿಕ ಆಹಾರ. intellectual food ಬೌದ್ಧಿಕ ಗ್ರಾಸ. food for thought ಆಲೋಚನಾ ಸಾಮಗ್ರಿ. food for meditation ಚಿಂತನ ಸಾಮಗ್ರಿ.
ನುಡಿಗಟ್ಟು
  1. be food for fishes ನೀರಿನಲ್ಲಿ ಮುಳುಗಿ ಸಾಯು; ಜಲಸಮಾಧಿಯಾಗು; ಈನುಗಳಿಗೆ ಆಹಾರವಾಗು.
  2. be food for worms ಸಾಯಿ; ಹುಳುಗಳಿಗೆ ಆಹಾರವಾಗು.
  3. food for powder (ಮದ್ದುಗುಂಡಿಗೆ ಆಹುತಿಯಾಗುವ) ಸೈನಿಕರು.