folly ಹಾಲಿ
ನಾಮವಾಚಕ
  1. ಮೂರ್ಖತನ; ಅವಿವೇಕ; ದಡ್ಡತನ; ಹುಚ್ಚುತನ; ಮುಟ್ಠಾಳತನ; ಹೆಡ್ಡತನ; ತಿಳಿಗೇಡಿತನ; ಮರುಳು(ತನ).
  2. ಹುಚ್ಚುಕೆಲಸ, ಭಾವನೆ ಯಾ ನಡೆವಳಿ; ಹಾಸ್ಯಾಸ್ಪದ ಕೆಲಸ; ನಗೆಗೇಡು.
  3. ಹುಚ್ಚುಮಹಲು; ಅವಿವೇಕ ಸೌಧ; ಅನುಪಯೋಗ, ವ್ಯರ್ಥ ಎಂದು ಭಾವಿಸಲ್ಪಟ್ಟ ದುಬಾರಿ ಕಟ್ಟಡ: Smith’s Folly ಸ್ಮಿತ್‍ನ ಹುಚ್ಚುಮಹಲು.
  4. ದಡ್ಡತನ; ಸರಿಯಾಗಿ ಯೋಚಿಸದೆ ಬಂಡವಾಳ ಹೂಡುವುದು ಮೊದಲಾದ ದುಬಾರಿ ಹಾಗೂ ಬುದ್ಧಿಗೇಡಿನ ಉದ್ಯಮ.
  5. (ಬಹುವಚನದಲ್ಲಿ ನಾಟಕ) ಮೋಹಕ ನಟಿಯರು ಯಾ ಅವರು ಭಾಗವಹಿಸಿರುವ ಅಣಕನಾಟಕ.
  6. (ಪ್ರಾಚೀನ ಪ್ರಯೋಗ) (ಬಹುವಚನದಲ್ಲಿ) ಸ್ವೇಚ್ಛಾಚಾರ; ಹುಚ್ಚಾಟಗಳು; ಚೆಲ್ಲಾಟಗಳು; ಸ್ವೈರವರ್ತನೆ.