1following ಹಾಲೋಇಂಗ್‍
ಗುಣವಾಚಕ
  1. ಅನುಸರಿಸುವ.
  2. (ಕ್ರಮದಲ್ಲಿ, ಕಾಲದಲ್ಲಿ) ಅನಂತರ ಬರುವ; ತರುವಾಯದ; ಅನಂತರದ; ಆಮೇಲಿನ.
  3. ಮುಂದೆ ಹೇಳುವ; ಮುಂದೆ ಬರುವ ; ಮುಂದೆ ಕಾಣಿಸಿದ; ಕೆಳಗೆ ನಮೂದಿಸಿದ.
  4. ಪರಿಣಾಮವಾಗಿ ಬರುವ; ಅನುಗತವಾಗುವ.
  5. (ಗಾಳಿಯ ವಿಷಯದಲ್ಲಿ) ವ್ಯಕ್ತಿಯು ಹೋಗುತ್ತಿರುವ ದಿಕ್ಕಿನಲ್ಲಿ ಬೀಸುತ್ತಿರುವ.
2following ಹಾಲೋಇಂಗ್‍
ನಾಮವಾಚಕ
  1. (ಒಬ್ಬನ) ಅನುಯಾಯಿಗಳು; ಅವಲಂಬಿಗಳು; ಬೆಂಬಲಿಗರು.
  2. ಓದುಗ ಗುಂಪು; ವಾಚಕವರ್ಗ; ಪಾಠಕ ವೃಂದ; ಒಬ್ಬ ಲೇಖಕನ ಕೃತಿಗಳನ್ನು ಯಾ ಪ್ರಕಟಣೆಯನ್ನು ತಪ್ಪದೆ ಓದುವವರು.
  3. ಪ್ರೋತ್ಸಾಹಿ ತಂಡ; ಕ್ರೀಡೆಯ ಯಾ ವಿನೋದದ ಪ್ರೋತ್ಸಾಹಿಗಳು.
  4. (ಕಲಾವಿದನ ಯಾ ಕ್ರೀಡಾ ಪಟುವಿನ) ಅಭಿಮಾನಿಗಳು; ಅಭಿಮಾನಿವರ್ಗ.
3following ಹಾಲೋಇಂಗ್‍
ಉಪಸರ್ಗ

ತರುವಾಯ; ಅನಂತರ: following the lecture the meeting was open to discussion ಉಪನ್ಯಾಸದ ತರುವಾಯ ಸಭೆಗೆ ಚರ್ಚಿಸಲು ಅವಕಾಶ ಕೊಡಲಾಯಿತು.