See also 2follow
1follow ಹಾಲೋ
ಸಕರ್ಮಕ ಕ್ರಿಯಾಪದ
  1. (ಚಲಿಸುತ್ತಿರುವ ವಸ್ತು ಯಾ ವ್ಯಕ್ತಿಯ) ಹಿಂದೆ ಹೋಗು; ಹಿಂದೆ ಬರು; ಅನುಸರಿಸು; ಬೆನ್ನು ಹತ್ತು; ಬೆನ್ನು ಹಿಡಿ; ಹಿಂಬಾಲಿಸು: they followed us for miles ಅವರು ನಮ್ಮನ್ನು ಮೈಲಿಗಟ್ಟಲೆ ಹಿಂಬಾಲಿಸಿದರು.
  2. (ಹಾದಿ) ಹಿಡಿ; (ದಾರಿ) ಹಿಡಿದು ಹೋಗು; (ಮಾರ್ಗದಲ್ಲಿ) ಸಾಗು: follow this road for a mile ಒಂದು ಮೈಲಿ ಈ ದಾರಿ ಹಿಡಿದು ಹೋಗು.
  3. (ಕ್ರಮದಲ್ಲಿ, ಕಾಲದಲ್ಲಿ) ಅನುಸರಿಸು; ಹಿಂಬಾಲಿಸು: follow the leader ನಾಯಕನನ್ನು ಅನುಸರಿಸು.
  4. ಒಡಗೂಡಿ ಹೋಗು ಯಾ ಬರು; ಸಂಗಡ ಹೋಗು; ಜೊತೆಯಲ್ಲಿ ಹೋಗು: he followed her home from the party ಸಂತೋಷಕೂಟವಾದ ಮೇಲೆ ಅವನು ಅವಳ ಜೊತೆಯಲ್ಲಿ ಮನೆಯವರೆಗೂ ಹೋದನು.
  5. ಸೇವಿಸು; ಸೇವೆಮಾಡು: you may depend on my following him ನಾನು ಅವನ ಸೇವೆ ಮಾಡುವೆನೆಂಬ ನೆಚ್ಚಿಕೆ ನೀನು ಇಟ್ಟುಕೊಳ್ಳಬಹುದು.
  6. ಮೆಚ್ಚಿ ಹಿಂಬಾಲಿಸು; ಅನುಚರನಾಗಿ ಹೋಗು; ಅನುಯಾಯಿಯಾಗಿ ಹೋಗು: I have followed him these twenty years ಈ ಇಪ್ಪತ್ತು ವರ್ಷಕಾಲ ನಾನು ಅವನನ್ನು ಮೆಚ್ಚಿಕೊಂಡು ಹಿಂಬಾಲಿಸಿದ್ದೇನೆ.
  7. ಅನುಸರಿಸು; (ಒಂದರ) ಫಲವಾಗಿ ಬರು; ಪರಿಣಾಮವಾಗಿ ಬರು; ಒಳಗೊಳ್ಳು: trade follows the flag ವ್ಯಾಪಾರ ಬಾವುಟವನ್ನು ಅನುಸರಿಸುತ್ತದೆ; ಬಾವುಟ ಹೋದ ಕಡೆ (ಅದರ ಪರಿಣಾಮವಾಗಿ) ವ್ಯಾಪಾರ ಹೋಗುತ್ತದೆ. because he is good it does not follow that he is wise ಅವನು ಒಳ್ಳೆಯವನೆಂಬ ಕಾರಣದಿಂದ, ಅವನು ವಿವೇಕಿ ಎಂದು ಫಲಿಸುವುದಿಲ್ಲ (ಹೇಳಲಾಗುವುದಿಲ್ಲ).
  8. ಸಾಧಿಸಲು ಯತ್ನಿಸು; ಗುರಿಯಲ್ಲಿಟ್ಟುಕೊ: to follow knowledge ಜ್ಞಾನವನ್ನು ಸಾಧಿಸಲು.
  9. ಮಾರ್ಗದರ್ಶಕನನ್ನಾಗಿ ಭಾವಿಸು; ನಾಯಕನನ್ನಾಗಿ ಮನ್ನಿಸು; ಸ್ವಾಮಿಯಾಗಿ ಅಂಗೀಕರಿಸು: the Indians followed Nehru ಭಾರತೀಯರು ನೆಹರೂರವರನ್ನು ನಾಯಕನನ್ನಾಗಿ ಅಂಗೀಕರಿಸಿದರು.
  10. ಹೇಳಿದಂತೆ ಮಾಡು; ವಿಧೇಯನಾಗಿ ನಡೆದುಕೊ; ಪಾಲಿಸು: follow orders ಆಜ್ಞೆಗಳನ್ನು ಪಾಲಿಸು.
  11. (ಅಭಿಪ್ರಾಯಗಳನ್ನು, ಧ್ಯೇಯವನ್ನು) ಹಿಡಿ; ಅನುಸರಿಸು; ಅವಲಂಬಿಸು; ಅಂಗೀಕರಿಸು: follow a policy of peace ಶಾಂತಿನೀತಿಯನ್ನು ಅನುಸರಿಸು.
  12. -ಅಂತೆ ಮಾಡು ; -ಹಾಗೆ ನಡೆ; -ಅಂತೆ ನಡೆದುಕೊ; ಅನುಸರಿಸು; ಆದರ್ಶವಾಗಿ ತೆಗೆದುಕೊ; ಒಪ್ಪಿಕೊ: follow his example ಅವನ ಮೇಲ್ಪಂಕ್ತಿಯನ್ನು ಅನುಸರಿಸು; ಅವನ ಆದರ್ಶದಂತೆ ನಡೆ.
  13. (ವೃತ್ತಿ ಮೊದಲಾದವನ್ನು) ಹಿಡಿ; ಅವಲಂಬಿಸು: he followed the profession of an artist ಅವನು ಕಲಾವಿದ ವೃತ್ತಿಯನ್ನು ಅವಲಂಬಿಸಿದನು.
  14. (ವಾದವನ್ನು, ಭಾಷಣಕಾರನು ಹೇಳುವುದನ್ನು) ಅರ್ಥಮಾಡಿಕೊ; ತಿಳಿದುಕೊ; ಗ್ರಹಿಸು: the argument is too difficult for them to follow ಆ ವಾದವು ಅವರಿಗೆ ಅರ್ಥಮಾಡಿಕೊಳ್ಳಲಾಗದಷ್ಟು ಕಷ್ಟವಾಗಿದೆ.
  15. (ವ್ಯಕ್ತಿಯ ಯಾ ವಸ್ತುವಿನ) ಹಿಂದೆ ಹೋಗು; ಹಿಂದೆ ಬಾ; ಹಿಂಬಾಲಿಸು: follow in his steps ಅವನ ಹೆಜ್ಜೆ ಹಿಡಿದು ಹೋಗು.
  16. ಶವಯಾತ್ರೆಯಲ್ಲಿ ಭಾಗವಹಿಸು; ಶವದ ಹಿಂದೆ ಯಾ ಜೊತೆಯಲ್ಲಿ ಸ್ಮಶಾನದವರೆಗೆ ಹೋಗು; ಒಬ್ಬ ವ್ಯಕ್ತಿಯ ಶವಸಂಸ್ಕಾರಕ್ಕೆ ಹೋಗು.
  17. (ಘಟನೆಗಳು, ಕಾಲ್ಚೆಂಡಾಟದ ತಂಡ ಮೊದಲಾದವುಗಳ ಬಗ್ಗೆ) ಇತ್ತೀಚಿನ ಸ್ಥಿತಿಯನ್ನು ಯಾ ಪ್ರಗತಿಯನ್ನು ತಿಳಿದಿರು.
  18. ತರುವಾಯದ್ದನ್ನು ಒದಗಿಸು, ನೀಡು; ತರುವಾಯ ಬರುವಂತೆ, ಆಗುವಂತೆ ಮಾಡು: follow angry words with blows ಕೋಪದ ನುಡಿಗಳ ತರುವಾಯ ಏಟು ಕೊಡು.
ಅಕರ್ಮಕ ಕ್ರಿಯಾಪದ
  1. ಹಿಂದೆ ಹೋಗು; ಹಿಂದೆ ಬರು: if one sheep goes through the gate the rest will follow ಒಂದು ಕುರಿ ಗೇಟಿನ ಮೂಲಕ ನುಗ್ಗಿದರೆ ಉಳಿದವೂ ಅದರ ಹಿಂದೆ ಹೋಗುತ್ತವೆ. follow in one’s steps ಒಬ್ಬನನ್ನು ಅನುಸರಿಸು, ಹಿಂಬಾಲಿಸು; ಒಬ್ಬನ ಹೆಜ್ಜೆ ಹಿಡಿದು ಹೋಗು. follow in the wake of ಒಂದರ ಹಾದಿಯನ್ನು ಅನುಸರಿಸಿ ಹೋಗು, ಬರು.
  2. ತರುವಾಯ ಬರು; ಆಮೇಲೆ ಬರು; ಮುಂದೆ ಬರು: letter follows ಕಾಗದ ತರುವಾಯ ಬರುತ್ತದೆ.
  3. ಸಂಗಡವಿರು; ಜೊತೆಯಲ್ಲಿರು.
  4. ಸೇವಿಸು; ಸೇವೆಮಾಡು.
  5. (ಪರಿಣಾಮವಾಗಿ) ಉಂಟಾಗು; ಸಂಭವಿಸು; ಫಲಿಸು; ಅನುಗತವಾಗು; ಸಿದ್ಧಿಸು: that he must be innocent follows from this ಅವನು ನಿರಪರಾಧಿಯಾಗಿರಬೇಕೆಂದು ಇದರಿಂದ ಸಿದ್ಧವಾಗುತ್ತದೆ. it must follow as the night follows the day ಹಗಲಾದ ಮೇಲೆ ರಾತ್ರಿಯಾಗುವಂತೆಯೇ ಅದು ಸಿದ್ಧಿಸುತ್ತದೆ.
  6. (ಕ್ರಮದಲ್ಲಿ) ತರುವಾಯ ಬರು; ಆಮೇಲೆ ಬರು; ಅನುಕ್ರಮವಾಗಿ ಬರು: his arguments are as follows ಅವನ ವಾದಗಳು ಕ್ರಮವಾಗಿ ಹೀಗಿವೆ.
  7. ಆಮೇಲೆ ಆಗು; ತರುವಾಯ ಸಂಭವಿಸು: after the defeat disorders followed ಸೋಲಿನ ತರುವಾಯ ಗಲಭೆಗಳು ಆದುವು.
ಪದಗುಚ್ಛ
  1. as follows ಈ ಕೆಳಗಿನಂತೆ; ಈ ಮುಂದಿನದರಂತೆ; ಹೀಗೆ.
  2. follow after
    1. ಸಾಧಿಸಲು ಶ್ರಮಿಸು; ಪಡೆಯಲು ಶ್ರಮಿಸು.
    2. ಬೆನ್ನಟ್ಟು: ಹಿಂಬಾಲಿಸು.
  3. follow on (ಕ್ರಿಕೆಟ್‍) (ಬೋಲಿಂಗ್‍ ಎದುರಿಸುವ ಪಕ್ಷದ ಸರದಿ ಬಿಟ್ಟು) ಮರಳಿ ಬ್ಯಾಟಿನ ಆಟ ಮುಂದುವರಿಸು; (ಎದುರಾಳಿಗಿಂತ ನಿರ್ದಿಷ್ಟ ಸಂಖ್ಯೆಯ ಓಟಗಳನ್ನು ಕಡಮೆ ಗಳಿಸಿದ್ದರಿಂದ) ಮತ್ತೆ ಬ್ಯಾಟು ಮಾಡು; ಎದುರುಪಕ್ಷವನ್ನು ಬ್ಯಾಟು ಮಾಡಲು ಇಳಿಸಲಾಗದೆ ತಾನೇ ಮತ್ತೆ ಬ್ಯಾಟು ಮಾಡಲು ಪ್ರಾರಂಭಿಸು.
  4. follow out
    1. ಕಡೆಯವರೆಗೂ ಸಾಧಿಸು; ಕೊನೆಮುಟ್ಟಿಸು; ಕಡೆಗಾಣಿಸು.
    2. (ಸೂಚನೆಗಳು ಮೊದಲಾದವನ್ನು) ಯಥಾವತ್ತಾಗಿ ಕಾರ್ಯರೂಪಕ್ಕೆ ತರು; ಕರಾರುವಾಕ್ಕಾಗಿ ಪಾಲಿಸು.
  5. follow suit ಅಂತೆಯೇ, ಹಾಗೆಯೇ ಮಾಡು; ಮತ್ತೊಬ್ಬ ಮಾಡಿದಂತೆ ಮಾಡು: the little girl jumped over the fence, and her playmates followed suit ಚಿಕ್ಕ ಹುಡುಗಿ ಆ ಬೇಲಿಯನ್ನು ಹಾರಿದಳು, ಅವಳ ಆಟದ ಜೊತೆಗಾತಿಯರೂ ಹಾಗೆಯೇ ಮಾಡಿದರು.
  6. follow the sea ನಾವಿಕನಾಗು.
  7. follow through
    1. ಗಾಲ್‍ ಮೊದಲಾದ ಆಟಗಳಲ್ಲಿ ಚೆಂಡನ್ನು ಹೊಡೆದ ನಂತರ ದಾಂಡಿನ ಬೀಸನ್ನು ಸಾಧ್ಯವಾದಷ್ಟು ಮುಂದುವರಿಸು.
    2. ಒಂದು ಕೆಲಸವನ್ನು – ಮುಗಿಸು; ಪೂರ್ಣಗೊಳಿಸು; ಕೊನೆಗೊಳಿಸುವವರೆಗೆ ಮಾಡು.
    3. ವಚನವನ್ನು ಈಡೇರಿಸು.
  8. follow up
    1. ಬಿಡದೆ ಅನುಸರಿಸು; ಬೆನ್ನಟ್ಟಿ; ಅನುಧಾವಿಸು.
    2. (ಹಿಂದಿನ ಏಟು ಮೊದಲಾದವಕ್ಕೆ) ಮತ್ತೊಂದು ಏಟು ಹಾಕು; ಪುನಃ ಏಟು ಕೊಡು.
    3. (ಕಾಲ್ಚೆಂಡಾಟ ಮೊದಲಾದವಲ್ಲಿ) ಬೆಂಬಲಕೊಡಲು ಚೆಂಡಿನ (ಆಟಗಾರನ) ಹತ್ತಿರವಿರು.
    4. ತನಿಖೆಯನ್ನು ಮುಂದುವರೆಸು; ಇನ್ನು ಹೆಚ್ಚಿನ ತನಿಖೆ – ಕೈಗೊಳ್ಳು, ಪ್ರಾರಂಭಿಸು.
ನುಡಿಗಟ್ಟು
  1. follow one’s nose ಮೂಗಿನ ನೇರಕ್ಕೆ ಹೋಗು: (ಆಲೋಚನೆ ಯಾ ಪೂರ್ವ ನಿರ್ಧಾರವಿಲ್ಲದೆ ಸಹಜ ಪ್ರಕೃತಿ ಪ್ರೇರಿಸಿದಂತೆ) ನೆಟ್ಟಗೆ ಹೋಗು.
  2. follow the hounds ಬೇಟೆಯಾಡು; ಬೇಟೆಗೆ ಹೋಗು.
  3. follow the plough ನೇಗಿಲು – ಹಿಡಿ, ಹೊಡೆ; ಆರಂಬಗಾರನಾಗು; ನೇಗಿಲು ಹೊಡೆಯುವವನಾಗು.
See also 1follow
2follow ಹಾಲೋ
ನಾಮವಾಚಕ
  1. (ಬಿಲ್ಯರ್ಡ್ಸ್‍)
    1. (ಗುರಿ ಚೆಂಡಿನ ಹಿಂದೆ ಆಟಗಾರನ ಚೆಂಡು ಉರುಳುವಂತೆ ಮಾಡುವ) ಹೊಡೆತ.
    2. ಹಾಗೆ ಉಂಟು ಮಾಡಿದ ಚಲನೆ.
  2. (ಉಪಾಹಾರಗೃಹದಲ್ಲಿ) ಅರ್ಧಪ್ರಮಾಣದ ಪೂರಕಭಾಗ.