See also 2folk
1folk ಹೋಕ್‍
ನಾಮವಾಚಕ
(ಬಹುವಚನ folk ಯಾ folks).
  1. (ಪ್ರಾಚೀನ ಪ್ರಯೋಗ) ಜನ; ದೇಶ; ಜನಾಂಗ; ರಾಷ್ಟ್ರ; ಜನತೆ.
  2. (ಬಹುವಚನ ಯಾ ಏಕವಚನದಲ್ಲಿ) (ಪ್ರಾಚೀನ ಪ್ರಯೋಗ ಯಾ ಪ್ರಾಂತೀಯ ಪ್ರಯೋಗದಲ್ಲಿ ಮಾತ್ರ) ಜನ (ಸಾಮಾನ್ಯ) ; ಮಂದಿ: folks say that there wasn’t much rain last summer ಕಳೆದ ಬೇಸಿಗೆಯಲ್ಲಿ ಬಹಳ ಮಳೆಯಿರಲಿಲ್ಲವೆಂದು ಜನ ಹೇಳುತ್ತಾರೆ.
  3. ಒಂದು ನಿರ್ದಿಷ್ಟ ವರ್ಗದ ಜನ: city folk ನಗರದ ಜನ.
  4. (ಬಹುವಚನದಲ್ಲಿ) (ಅನೌಪಚಾರಿಕ) ಕುಟುಂಬದವರು; ಸಂಬಂಧಿಗಳು; ಬಂಧುಗಳು; ನೆಂಟರು: all his folks come from France ಅವನ ಬಂಧುಗಳೆಲ್ಲ ಹ್ರಾನ್ಸಿನಿಂದ ಬಂದವರು.
  5. (ಬಹುವಚನದಲ್ಲಿ) (ಅನೌಪಚಾರಿಕ) (ತನ್ನ) ತಂದೆತಾಯಿಗಳು: will your folks let you go? ನಿನ್ನ ತಂದೆ ತಾಯಿಗಳು ನಿನ್ನನ್ನು ಹೋಗಗೊಡುವರೆ?
See also 1folk
2folk ಹೋಕ್‍
ಗುಣವಾಚಕ
  1. ಸಾಮಾನ್ಯ ಜನದ; ಜನಸಾಮಾನ್ಯರ ಯಾ ಜನಸಾಮಾನ್ಯ ಸಂಬಂಧಿಸಿದ ಯಾ ಜನಸಾಮಾನ್ಯರಲ್ಲಿ ರೂಢಿಯಲ್ಲಿರುವ ಸಂಬಂಧಿಸಿದ ಯಾ ಜನಸಾಮಾನ್ಯರಲ್ಲಿ ರೂಢಿಯಲ್ಲಿರುವ, ಪ್ರಚಲಿತವಾಗಿರುವ: folk belief ಜನಸಾಮಾನ್ಯರ ನಂಬಿಕೆ; ಜನಪದ ನಂಬಿಕೆ.
  2. ಜಾನಪದ; ಸಾಂಪ್ರದಾಯಿಕ; ಸಮಾಜದ ಸಾಂಪ್ರದಾಯಿಕ ರೀತಿಗಳನ್ನು ಪ್ರತಿಬಿಂಬಿಸುವ: folk culture ಜಾನಪದ ಸಂಸ್ಕೃತಿ.