See also 2folio
1folio ಹೋಲಿಓ, ಹೋಲ್ಯೋ
ನಾಮವಾಚಕ
(ಬಹುವಚನ folios).
  1. (ಮುಂಭಾಗದಲ್ಲಿ ಮಾತ್ರ ಪುಟಸಂಖ್ಯೆ ಹಾಕಿರುವ ಕಾಗದ, ಚರ್ಮಕಾಗದ, ಮೊದಲಾದವುಗಳ) ಹಾಳೆ.
  2. (ಜಮಾಖರ್ಚು ಲೆಕ್ಕ) ಪಾನು; ಲೆಕ್ಕ ಪುಸ್ತಕದಲ್ಲಿ ಒಟ್ಟಿಗೆ ಉಪಯೋಗಿಸುವ ಎದುರು ಬದುರು ಪುಟಗಳು.
  3. (ಜಮಾಖರ್ಚು ಲೆಕ್ಕ) ಖಾತೆಪುಟ; ಜಮಾಖರ್ಚುಗಳೆರಡನ್ನೂ ಒಂದೇ ಕಡೆ ಬರೆಯುವ ಲೆಕ್ಕಪುಸ್ತಕ ಮೊದಲಾದವುಗಳ ಪುಟ.
  4. ಅಚ್ಚಾದ ಪುಸ್ತಕದ ಹಾಳೆಸಂಖ್ಯೆ ಯಾ ಪುಟಸಂಖ್ಯೆ.
  5. ಪದ ಸಂಖ್ಯೆ; ದಸ್ತೈವಜಿನ ಉದ್ದವನ್ನು ಅಳೆಯಲು ಒಂದು ಮಾನವಾಗಿ ತೆಗೆದುಕೊಳ್ಳುವ (72 ಯಾ 90 ಯಾ 100) ಪದ ಸಂಖ್ಯೆ.
  6. ದ್ವಿಪತ್ರ; ಒಮ್ಮಡಿಕೆ ಕಾಗದ ಹಾಳೆ.
  7. ಒಮ್ಮಡಿಕೆ ಹಾಳೆಗಳ ಸಂಪುಟ.
  8. ಅತ್ಯಂತ ದೊಡ್ಡಗಾತ್ರದ ಸಂಪುಟ; ಅತ್ಯಂತ ದೊಡ್ಡ ಪ್ರಮಾಣದ ಹಾಳೆಗಳ ಪುಸ್ತಕ.
ಪದಗುಚ್ಛ

in folio (ಪುಸ್ತಕ) ಒಮ್ಮಡಿಕೆ ಹಾಳೆಯ(ಲ್ಲಿ); ಒಮ್ಮಡಿಕೆಯ ಹಾಳೆಗಳಲ್ಲಿ (ಮಾಡಿದ).

See also 1folio
2folio ಹೋಲಿಓ, ಹೋಲ್ಯೋ
ಗುಣವಾಚಕ
  1. ಒಮ್ಮಡಿಕೆ ಹಾಳೆಗಳಿಂದ ಮಾಡಿದ.
  2. ಹೋಲಿಯೋ ಗಾತ್ರದ; ಅತ್ಯಂತ ದೊಡ್ಡ ಪ್ರಮಾಣದ ಹಾಳೆಗಳುಳ್ಳ: a folio book ಅತ್ಯಂತ ದೊಡ್ಡ ಪ್ರಮಾಣದ ಹಾಳೆಗಳ ಪುಸ್ತಕ. in six volumes folio ಹೋಲಿಯೋಗಳ ಆರು ಸಂಪುಟಗಳಲ್ಲಿ.