foliation ಹೋಲಿಏಷನ್‍
ನಾಮವಾಚಕ
  1. (ಗಿಡದಲ್ಲಿ) ಎಲೆಬಿಡುವುದು; ಪರ್ಣಾಂಕರಣ.
  2. (ಗಿಡದಲ್ಲಿ) ಎಲೆಬಿಟ್ಟಿರುವುದು; ಪರ್ಣಿತವಾಗಿರುವುದು.
  3. (ಸಸ್ಯವಿಜ್ಞಾನ) (ಮೊಗ್ಗಿನೊಳಗಿನ ಯಾ ಗಿಡದ ಕಾಂಡದ ಮೇಲಿನ) ಎಲೆಕ್ರಮ; ಪರ್ಣವಿನ್ಯಾಸ; ಪರ್ಣರಚನೆ; ಪರ್ಣವ್ಯವಸ್ಥೆ; ಎಲೆಗಳು ಜೋಡಣೆಗೊಂಡಿರುವ ರೀತಿ.
  4. ರೇಕುಬಡಿಯುವುದು; ತೆಳುಹಾಳೆಯಾಗಿ (ಲೋಹವನ್ನು) ಬಡಿಯುವುದು; ತೆಳುಹಾಳೆಯಾಗಿ (ಲೋಹವನ್ನು) ಬಡಿಯುವುದು.
  5. (ಭೂವಿಜ್ಞಾನ)
    1. ಪರ್ಣೀಕರಣ; (ಶಿಲೆಗಳ ವಿಷಯದಲ್ಲಿ) ಎಲೆಗಳಂಥ ಪದರಗಳಾಗಿ ಒಡೆಯುವುದು.
    2. ಅಂಥ ಒಂದು ಪದರ.
  6. (ವಾಸ್ತುಶಿಲ್ಪ) ಶೃಂಗವೃತ್ತಾಲಂಕಾರ; ಸಣ್ಣ ಕಮಾನುಗಳಿಂದ ಕೂಡಿದ ಕೆತ್ತನೆ.
  7. ಕ್ರಮಸಂಖ್ಯೆ ಗುರುತಿಸುವಿಕೆ; ಪುಸ್ತಕದ ಯಾ ಹಸ್ತಪ್ರತಿಯ ಹಾಳೆಗಳಿಗೆ ಕ್ರಮಸಂಖ್ಯೆ ಹಾಕುವುದು.
  8. (ಗಾಜಿಗೆ) ತವರ, ಪಾದರಸಗಳ ಮಿಶ್ರಣದ ಲೇಪ.