See also 2foliate
1foliate ಹೋಲಿಅ(ಏ)ಟ್‍
ಗುಣವಾಚಕ
  1. ಎಲೆಯಂಥ; ಪರ್ಣೀಯ.
  2. ಎಲೆಗಳುಳ್ಳ; ಎಲೆಗ; ಪರ್ಣಿ; ಎಲೆಗಳಿರುವ.
  3. ಗೊತ್ತಾದ ಸಂಖ್ಯೆಯ ಸಣ್ಣ ಎಲೆಗಳುಳ್ಳ; ನಿರ್ದಿಷ್ಟ ಸಂಖ್ಯೆಯ ಕೂಡೆಲೆಗಳುಳ್ಳ: five foliate ಪಂಚಪರ್ಣಿ; ಐದೆಲೆಗ; ಐದು ಕೂಡೆಲೆಗಳುಳ್ಳ.
See also 1foliate
2foliate ಹೋಲಿಏಟ್‍
ಸಕರ್ಮಕ ಕ್ರಿಯಾಪದ
  1. (ವಾಸ್ತುಶಿಲ್ಪ) (ಬಾಗಿಲಿನ ಕಮಾನನ್ನು) ಎಲೆಚಿತ್ತಾರದಿಂದ ಸಿಂಗರಿಸು; ಪತ್ರಚಿತ್ರಣದಿಂದ ಸಿಂಗರಿಸು: the Arabs foliated the arch ಅರಬ್ಬರು ಕಮಾನನ್ನು ಎಲೆಯಾಕಾರದ ಚಿತ್ರಗಳಿಂದ ಅಲಂಕರಿಸಿದರು.
  2. (ಸಂಪುಟದ) ಹಾಳೆಗಳಿಗೆ (ಪುಟಗಳಿಗಲ್ಲ) ಕ್ರಮಸಂಖ್ಯೆ ಹಾಕು; ಪತ್ರಸಂಖ್ಯೆ ಹಾಕು; ಹಾಳೆ ಅಂಕಿ ಹಾಕು.
ಅಕರ್ಮಕ ಕ್ರಿಯಾಪದ
  1. ಪದರಪದರವಾಗಿ ಒಡೆ; ರೇಕುಗಳಾಗಿ ಒಡೆ; ಎಲೆಯೆಲೆಯಾಗಿ ಬಿರಿ.
  2. ಎಲೆಬಿಡು.