foist ಹಾಇಸ್ಟ್‍
ಸಕರ್ಮಕ ಕ್ರಿಯಾಪದ
  1. (ಮುಚ್ಚುಮರೆಯಿಂದ ಯಾ ಆಧಾರವಿಲ್ಲದೆ) ಸೇರಿಸು; ತೂರಿಸು; ನುಸುಳಿಸು: foist subversive ideas into a book ಬುಡಮೇಲು ಮಾಡುವ ಭಾವನೆಗಳನ್ನು ಗ್ರಂಥದಲ್ಲಿ ತೂರಿಸು.
  2. ಹೊರಿಸು; ತಲೆಗೆ ಕಟ್ಟು; ತಗುಲುಹಾಕು: foist inferior merchandise on a customer ಕೀಳು ಸರಕನ್ನು ಗಿರಾಕಿಯ ತಲೆಗೆ ಕಟ್ಟು.
  3. (ಗ್ರಂಥರಚನೆಯನ್ನು, ಭಾವನೆಗಳನ್ನು ವ್ಯಕ್ತಿಯ ಮೇಲೆ) ಹೊರಿಸು; ಆರೋಪಿಸು: it is unfair to foist this doctrine on him ಈ ಸಿದ್ಧಾಂತವನ್ನು ಅವನಿಗೆ ಆರೋಪಿಸುವುದು ನ್ಯಾಯವಲ್ಲ.