See also 2focus
1focus ಹೋಕಸ್‍
ನಾಮವಾಚಕ
(ಬಹುವಚನ foci ಉಚ್ಚಾರಣೆ ಹೋಸೈ ಯಾ focuses).
  1. ನಾಭಿ:
    1. (ಸಮತಲ ಜ್ಯಾಮಿತಿ) ಒಂದು ವಕ್ರದ ಯಾ ಘನದ ಮೇಲಿನ ವಿವಿಧ ಬಿಂದುಗಳಿಂದ ಯಾವುದೇ ಬಿಂದುವಿಗಿರುವ ದೂರಗಳಿಗೆ ರೇಖೀಯ ಸಂಬಂಧವಿದ್ದರೆ ಅಂತಹ ಬಿಂದು.
    2. (ದ್ಯುತಿಶಾಸ್ತ್ರ, ಉಷ್ಣಶಾಸ್ತ್ರ, ಇತ್ಯಾದಿ) ನಾಭಿ ಪ್ರತಿಫಲನದ ಯಾ ವಕ್ರೀಭವನದ ತರುವಾಯ ಕಿರಣಗಳು ಂದು ಸೇರುವ ಬಿಂದು.
    3. ಯಾವ ಬಿಂದುವಿನಿಂದ ಕಿರಣಗಳು ಹೊರಡುವಂತೆ ಕಾಣಿಸುವುವೋ ಆ ಬಿಂದು.
    4. ಮಸೂರವು ಮೂಡಿಸುವ ಬಿಂಬ ಸ್ಪಷ್ಟವಾಗಿರಲು ಆಕೃತಿಯು ಯಾವ ಬಿಂದುವಿನಲ್ಲಿರಬೇಕೋ ಆ ಬಿಂದು.
    5. ಶಬ್ದದ ಅಲೆಗಳು ಆಗಮಿಸಿ ಯಾವ ಬಿಂದುವಿನಲ್ಲಿ ಬಂದು ಸೇರುವುವೋ ಆ ಬಿಂದು.
  2. = focal length.
  3. = focalization(2).
  4. (ರೋಗ, ಚಟುವಟಿಕೆ, ಮೊದಲಾದವುಗಳ) ಕೇಂದ್ರ; ಮುಖ್ಯಸ್ಥಾನ: the focus of attention ಗಮನದ ಕೇಂದ್ರ.
See also 1focus
2focus ಹೋಕಸ್‍
ಕ್ರಿಯಾಪದ
(ಭೂತರೂಪ ಮತ್ತು ಭೂತಕೃದಂತ focussed ಯಾ focused ವರ್ತಮಾನ ಕೃದಂತ

focussing ಯಾ focusing)

ಸಕರ್ಮಕ ಕ್ರಿಯಾಪದ
  1. ನಾಭೀಕರಿಸು; ನಾಭಿಗೂಡಿಸು:
    1. ಒಂದು ಬಿಂದುವಿನತ್ತ ಹೋಗುವಂತೆ ಮಾಡು.
    2. (ಕಣ್ಣು, ಮಸೂರ, ಮೊದಲಾದವುಗಳ) ನಾಭಿಯನ್ನು ಯಾವುದಕ್ಕೇ ಹೊಂದಿಕೆಮಾಡು.
    3. (ಯಾವುದೇ ವಸ್ತುವನ್ನು) ನಾಭಿಗೆ ತೆಗೆದುಕೊಂಡು ಬಾ.
  2. ಕೇಂದ್ರೀಕರಿಸು: he focussed his attention on the problem ಅವನು ಸಮಸ್ಯೆಯ ಮೇಲೆ ತನ್ನ ಗಮನವನ್ನು ಕೇಂದ್ರೀಕರಿಸಿದ.
ಅಕರ್ಮಕ ಕ್ರಿಯಾಪದ

ನಾಭಿಗೂಡು; ನಾಭೀಕರಿಸು; ಒಂದು ಬಿಂದುವಿನತ್ತ ಸಾಗು.