See also 2fob  3fob
1fob ಹಾಬ್‍
ನಾಮವಾಚಕ
  1. (ಷರಾಯಿಯ ನಡುಪಟ್ಟಿಯಲ್ಲಿ ಇರುವ) ಗಡಿಯಾರದ ಕಿಸೆ; ಗಡಿಯಾರ ಇಡುವ ಸಣ್ಣ ಜೇಬು.
  2. = fob-chain.
  3. ಜೇಬುಗಡಿಯಾರದ ಸರಪಳಿಗೆ ಸಿಕ್ಕಿರುವ ಅಲಂಕಾರದ ವಸ್ತು.
  4. ಬೀಗದಕೈನ ಉಂಗುರಕ್ಕೆ ಸಿಕ್ಕಿಸಿರುವ ಚಿಕ್ಕ ಪಟ್ಟಿ, ಕುಣಿಕೆ, ಯಾ ಕೊಂಡಿ.
See also 1fob  3fob
2fob ಹಾಬ್‍
ಸಕರ್ಮಕ ಕ್ರಿಯಾಪದ

(ಷರಾಯಿಯ ನಡುಪಟ್ಟಿಯ) ಸಣ್ಣ ಕಿಸೆಯಲ್ಲಿಡು; ಸಣ್ಣಜೇಬಿನಲ್ಲಿ ಇಟ್ಟುಕೊ; ಜೇಬಿಗೆ ಸೇರಿಸು.

See also 1fob  2fob
3fob ಹಾಬ್‍
ಸಕರ್ಮಕ ಕ್ರಿಯಾಪದ
  1. ಮೋಸಮಾಡು; ವಂಚಿಸು; ಕೈಕೊಡು.
  2. (ಮೋಸದಿಂದ ಕೀಳುಪದಾರ್ಥವನ್ನು) (ವ್ಯಕ್ತಿಯ) ತಲೆಗೆ ಕಟ್ಟು; (ವ್ಯಕ್ತಿಗೆ) ತಗಲುಗಟ್ಟು; ತಗಲುಹಾಕು: he tried to fob off an inferior brand on us ಕೀಳು ಸರಕನ್ನು ನಮ್ಮ ತಲೆಗೆ ಕಟ್ಟಲು ಅವನು ಯತ್ನಿಸಿದ.
  3. (ವ್ಯಕ್ತಿಗೆ ಕೀಳುಪದಾರ್ಥ ಕೊಟ್ಟು) ನುಣುಚಿಕೊ; ಜಾರಿಕೊ; ತಪ್ಪಿಸಿಕೊ: she fobbed us off with false promises ಅವಳು ನಮಗೆ ಹುಸಿಭಾಷೆ ಕೊಟ್ಟು ತಪ್ಪಿಸಿಕೊಂಡಳು.