See also 2foam
1foam ಹೋಮ್‍
ನಾಮವಾಚಕ
  1. (ದ್ರವದಲ್ಲಿ ಕಲಕಾಟ, ಕಿಣ್ವಕ್ರಿಯೆ, ಮೊದಲಾದವುಗಳಿಂದ ಉಂಟಾದ) ನೊರೆ; ಬುರುಗು; ಹೇನ.
  2. (ಕುದುರೆ ಯಾ ಇತರ ಪ್ರಾಣಿಯ) ಜೊಲ್ಲಿನ ಯಾ ಬೆವರಿನ ನೊರೆ.
  3. (ಕಾವ್ಯಪ್ರಯೋಗ) ಕಡಲು; ಸಮುದ್ರ.
  4. ಹೋಮ್‍ ರಬ್ಬರು ಯಾ ಪ್ಲಾಸ್ಟಿಕ್ಕು; ಸ್ಪಂಜಿನಂತೆ ತೂತುತೂತಾಗಿ ಹಗುರವಾಗಿರುವ ರಬ್ಬರು ಯಾ ಪ್ಲಾಸ್ಟಿಕ್ಕು.
See also 1foam
2foam ಹೋಮ್‍
ಸಕರ್ಮಕ ಕ್ರಿಯಾಪದ

(ಭೂತಕೃದಂತದಲ್ಲಿ) ನೊರೆನೊರೆಯಾಗಿರು; ನೊರೆಯಂತೆ ತೂತುತೂತಾಗಿ, ಪೊಳ್ಳಾದ ರಚನೆಯಾಗಿರು ಯಾ ರಚನೆ ಹೊಂದಿರು: foamed slag ನೊರೆ ಕಿಟ್ಟ; ನೊರೆಯಂತಿರುವ ಕಿಟ್ಟ.

ಅಕರ್ಮಕ ಕ್ರಿಯಾಪದ
  1. ನೊರೆಗರೆ; ನೊರೆಸೂಸು.
  2. (ಬಾಯಲ್ಲಿ) ನೊರೆಗೂಡು; ನೊರೆಕಟ್ಟು; ನೊರೆಕೀಳು; ನೊರೆಕಾರು; ನೊರೆಯಾಡು.
  3. (ನೀರು ಮೊದಲಾದವುಗಳ ವಿಷಯದಲ್ಲಿ)
    1. ನೊರೆಯಾಗು; ಬುರುಗಾಗು; ನೊರೆಗೂಡು; ಬುದ್ಬುದಿಸು.
    2. ನೊರೆಗರೆಯುತ್ತಾ ಹರಿ; ಬುರುಗುಡುತ್ತಾ ಹರಿ.
    3. ನೊರೆಯಲ್ಲಿ ಮಾಯವಾಗು; ನೊರೆಗಟ್ಟಿ ಮುಗಿದುಹೋಗು; ನೊರೆಯಲ್ಲಿ ಕೊನೆಗೊಳ್ಳು.
  4. (ಬಟ್ಟಲು ಮೊದಲಾದವು) ನೊರೆಗೂಡಿದ ಮದ್ಯದಿಂದ ತುಂಬಿರು: a glass of foaming beer ಒಂದು ಬಟ್ಟಲು ನೊರೆಯಾಡುತ್ತಿರುವ ಬಿಯರು.
  5. (ಆಡುಮಾತು) ಸಿಟ್ಟಾಗು; ಕ್ರೋಧಾವಿಷ್ಟನಾಗು; ರೋಷ ತಾಳು; ರೇಗಿಬೀಳು: he was foaming at the mouth when the children wouldn’t obey him ಮಕ್ಕಳು ಅವನು ಹೇಳಿದ ಹಾಗೆ ಕೇಳದಿದ್ದಾಗ ಅವನು ರೇಗಿ ಬೀಳುತ್ತಿದ್ದ.