See also 2fly-by-night
1fly-by-night ಹ್ಲೈಬೈನೈಟ್‍
ನಾಮವಾಚಕ
  1. ನಿಶಾಚರ; ರಾತ್ರಿ ಸಂಚಾರಿ.
  2. ರಾತ್ರಿ – ಪರಾರಿಯಾಗುವವನು, ಕದ್ದು ಓಡುವವನು.
  3. ನಂಬಿಕೆಗೆ ಅನರ್ಹ; (ಮುಖ್ಯವಾಗಿ) ತಲೆ ತಪ್ಪಿಸಿಕೊಂಡು ಓಡಿಹೋಗುವ ಸಾಲಗಾರ; (ಸಾಲ ಮೊದಲಾದವನ್ನು) ಕೊಡಲು ಅರ್ಹತೆ, ಯೋಗ್ಯತೆ ಇಲ್ಲದವ.
  4. ನಂಬಿಕೆಗೆ ಅನರ್ಹವಾದ ವಸ್ತು, ವಿಷಯ.
See also 1fly-by-night
2fly-by-night ಹ್ಲೈಬೈನೈಟ್‍
ಗುಣವಾಚಕ
  1. (ಮುಖ್ಯವಾಗಿ ವ್ಯಾಪಾರ, ಉದ್ಯಮ, ಮೊದಲಾದವುಗಳಲ್ಲಿ) ವಿಶ್ವಾಸಾರ್ಹವಲ್ಲದ; ನಂಬಿಕೆಗೆ ಅನರ್ಹವಾದ: a fly-by-night operation ನಂಬಿಕೆಗೆ ಅನರ್ಹವಾದ ವ್ಯಾಪಾರ.
  2. ಕ್ಷಣಿಕ; ಕ್ಷಣಭಂಗುರ; ಹಂಗಾಮಿ; ಅಲ್ಪಕಾಲದ; ಅಲ್ಪಾಯುವಾದ; ಅಲ್ಪಾಯುಷಿಯಾದ: a fly-by-night theatre ಹಂಗಾಮಿ ರಂಗಭೂಮಿ; ರಾತ್ರೋರಾತ್ರಿ ಬೇರೆಡೆಗೆ ಹೋಗಿಬಿಡುವ ನಾಟಕಸಂಸ್ಥೆ.