See also 2flux
1flux ಹ್ಲಕ್ಸ್‍
ನಾಮವಾಚಕ
  1. (ಪ್ರಾಚೀನ ಪ್ರಯೋಗ) ಅತಿಸಾರ; ರೋಗದಿಂದ ರಕ್ತ, ಮಲ, ಮೊದಲಾದವುಗಳ ಸ್ರವಣ, ಅತಿಯಾದ ವಿಸರ್ಜನೆ.
  2. ಆಮಶಂಕೆ; ರಕ್ತಭೇದಿ.
  3. ಹೊರಹರಿವು; ಹೊರಹರಿಯುವುದು; ಹೊರಹೊಮ್ಮುವುದು; ಬಹಿಃಪ್ರವಹಣ.
  4. ಹರಿವು; ಪ್ರವಾಹ; ಪ್ರವಹಣ; ಹೊನಲು.
  5. ಸಮುದ್ರದ ಉಬ್ಬರದ ಒಳಹರಿವು.
  6. ವಾಕ್‍ ಪ್ರವಾಹ; ವಾಗ್ಧಾರೆ; ವಾಗ್ಝರಿ; ಭಾಷಣ, ಮಾತು, ಮೊದಲಾದವುಗಳ ಧಾರೆ.
  7. ಸಂತತ ಪರಿವರ್ತನೆ; ಬದಲಾವಣೆಗಳ ನಿರಂತರ ಪ್ರವಾಹ, ಪರಂಪರೆ: in a state of flux ಬದಲಾಯಿಸುತ್ತಲೇ ಇರುವ ಸ್ಥಿತಿಯಲ್ಲಿ.
  8. (ಗಣಿತ) ಸ್ರವಣ; ಧಾರೆ; ನಿರಂತರ ಚಲನೆ: line is the flux of a point ಬಿಂದುವಿನ ಸ್ರವಣವೇ ರೇಖೆ.
  9. (ಭೌತವಿಜ್ಞಾನ) ಪ್ರಸರ:
    1. ಯಾವುದೇ ಗೊತ್ತಾದ ತಲದ ಮೂಲಕ ದ್ರವ, ಅನಿಲ, ಕಣಗಳು, ಶಕ್ತಿ, ಮೊದಲಾದವು ಹರಿದುಹೋಗುವ ದರ.
    2. ಒಂದು ಗೊತ್ತಾದ ಅವಧಿಯಲ್ಲಿ ಗೊತ್ತಾದ ಪ್ರದೇಶವನ್ನು ಹಾದು ಹೋಗುವ ಮೊತ್ತ.
  10. (ರಸಾಯನವಿಜ್ಞಾನ) ಸ್ರಾವಕ; ದ್ರವಣವನ್ನು ಉತ್ತೇಜಿಸಲು ಉಪಯೋಗಿಸುವ ಲೋಹ ಮೊದಲಾದವುಗಳ ಜೊತೆಯಲ್ಲಿ ಬೆರೆಸುವ ಯಾವುದೇ ಪದಾರ್ಥ.
  11. ಪ್ರವಾಹ; ಒಂದು ನಿರ್ದಿಷ್ಟ ಪ್ರದೇಶದ ಮೇಲೆ ನಿರ್ದಿಷ್ಟ ಅವಧಿಯಲ್ಲಿ ಬೀಳುವ ವಿಕಿರದ ಯಾ ಕಣಗಳ ಮೊತ್ತ.
  12. ಪ್ರವಾಹ; ಒಂದು ನಿರ್ದಿಷ್ಟ ತಲದ ಮೂಲಕ ಹಾಯುವ ಒಟ್ಟು ವಿದ್ಯುತ್‍ಕ್ಷೇತ್ರ ಯಾ ಕಾಂತಕ್ಷೇತ್ರ.
  13. ಮಿಶ್ರಣ; ಬೆರಕೆ; ಕರಗುವುದನ್ನು ಅನುಕೂಲಿಸಲು ಲೋಹ ಮೊದಲಾದವುಗಳೊಡನೆ ಬೆರೆಸುವ ಪದಾರ್ಥ.
ಪದಗುಚ್ಛ
  1. flux and reflux ಉಬ್ಬರವಿಳಿತ; ಏರಿಳಿತ; ಪ್ರವಾಹ ಮತ್ತು ಪ್ರತಿಪ್ರವಾಹ; ಹರಿವೂ ಮರುಹರಿವೂ (ರೂಪಕವಾಗಿ ಸಹ).
  2. bloody flux ಆಮಶಂಕೆ; ರಕ್ತಭೇದಿ.
See also 1flux
2flux ಹ್ಲಕ್ಸ್‍
ಸಕರ್ಮಕ ಕ್ರಿಯಾಪದ

ದ್ರವವಾಗಿಸು; ದ್ರವೀಕರಿಸು; ಕರಗಿಸು; ಕರಗುವ ವಸ್ತುವಿನೊಡನೆ ಸೇರಿಸಿ ಕರಗಿಸು.

ಅಕರ್ಮಕ ಕ್ರಿಯಾಪದ
  1. ತುಂಬಿ ಹರಿ; ಪ್ರವಾಹವಾಗಿ ಹೊರ ಹರಿ; ತುಂಬಿ ಪ್ರವಹಿಸು.
  2. ಕರಗಿ (ಹೊರ) ಹರಿ; ಪ್ರವಹಿಸು.