See also 2flush  3flush  4flush  5flush  6flush  7flush
1flush ಹ್ಲಷ್‍
ಸಕರ್ಮಕ ಕ್ರಿಯಾಪದ
  1. (ಹಕ್ಕಿಗಳನ್ನು) ಹಾರಿ ಹೋಗುವಂತೆ ಮಾಡು; ಚದುರಿಸು.
  2. ಹೊರತರು; ಹೊರಹೊರಡಿಸು; ಹೊರಕ್ಕೋಡಿಸು.
ಅಕರ್ಮಕ ಕ್ರಿಯಾಪದ

(ಹಕ್ಕಿಯ ವಿಷಯದಲ್ಲಿ) ರೆಕ್ಕೆಗೆದರಿ ಹಾರಿಹೋಗು; ಇದ್ದಕ್ಕಿದ್ದಂತೆ ಹಾರಿ ಹೊರಟುಹೋಗು.

ನುಡಿಗಟ್ಟು

flush out ಮರೆಸಿಟ್ಟುಕೊಂಡಿರುವ ಜಾಗದಿಂದ ಹೊರಹೊರಡಿಸು, ಓಡಿಸು.

See also 1flush  3flush  4flush  5flush  6flush  7flush
2flush ಹ್ಲಷ್‍
ನಾಮವಾಚಕ
  1. ಒಮ್ಮೆಲೇ ಚದುರಿಸಿಬಿಟ್ಟ ಯಾ ಹಾರಿಹೋಗುವಂತೆ ಮಾಡಿದ ಹಕ್ಕಿಗಳ ಹಿಂಡು ಸಮೂಹ.
  2. ಚದುರಿಸುವಿಕೆ; ಹಾರಿ ಹೋಗುವಂತೆ ಮಾಡುವಿಕೆ.
See also 1flush  2flush  4flush  5flush  6flush  7flush
3flush ಹ್ಲಷ್‍
ಸಕರ್ಮಕ ಕ್ರಿಯಾಪದ
  1. (ಬಚ್ಚಲು, ಚರಂಡಿ, ಮೊದಲಾದವನ್ನು) ನೀರನ್ನು ರಭಸದಿಂದ ಹರಿಸಿ – ಚೊಕ್ಕಟಗೊಳಿಸು, ನಿರ್ಮಲ ಮಾಡು.
  2. ನೀರನ್ನು ರಭಸದಿಂದ ಹರಿಸಿ ವಸ್ತು ಯಾ ಪದಾರ್ಥವನ್ನು – ಹೊರದೂಡು, ಹೊರಹಾಕು, ಹೊರಗೆಸೆ.
  3. (ಹುಲ್ಲುಗಾವಲಿಗೆ) ನೀರು ಹಾಯಿಸು.
  4. (ಸಸ್ಯಗಳ ವಿಷಯದಲ್ಲಿ) ಕುಡಿಯಿಡಿಸು; ಕುಡಿಯೊಡೆಸು; ಚಿಗುರಿಸು: rain flushes the plants ಮಳೆ ಸಸ್ಯಗಳನ್ನು ಚಿಗುರಿಸುತ್ತದೆ.
  5. (ರಕ್ತದ ವಿಷಯದಲ್ಲಿ) (ಮುಖಕ್ಕೇರಿ ಮುಖವನ್ನು) ಕೆಂಪೇರಿಸು; ಕೆಂಪೇರುವಂತೆ ಮಾಡು; ರಂಗಾಗಿಸು; ಬಣ್ಣವೇರಿಸು.
  6. (ಹೆಮ್ಮೆಯಿಂದ ಯಾ ಭಾವದ ಆವೇಗದಿಂದ) ಕೆಂಪೇರಿಸು; ಕೆರಳಿಸು; ಉದ್ರೇಕಿಸು; ಉತ್ಸಾಹಗೊಳಿಸು; ಹುರಿದುಂಬಿಸು; ಪ್ರೋತ್ಸಾಹಿಸು; ಉತ್ತೇಜಿಸು; ಉದ್ದೀಪನಗೊಳಿಸು: flushed with victory ಗೆಲವಿನಿಂದ ಉದ್ದೀಪಿತನಾದ. flushed with exercise ವ್ಯಾಯಾಮದಿಂದ ಕೆಂಪೇರಿದ.
ಅಕರ್ಮಕ ಕ್ರಿಯಾಪದ
  1. ಚಿಮ್ಮು; ಉಕ್ಕಿಬರು; ರಭಸದಿಂದ ಹೊರಹೊರಡು.
  2. ಉಜ್ಜ್ವಲವರ್ಣದಿಂದ – ಹೊಳೆ, ಪ್ರಕಾಶಿಸು.
  3. (ಮುಖದ ವಿಷಯದಲ್ಲಿ) ಕೆಂಪಗಾಗು; ಕೆಂಪೇರು; ಕೆಂಡದಂತಾಗು.
  4. (ಲಜ್ಜೆ, ಸಂಕೋಚ, ಯಾ ನಾಚಿಕೆಯಿಂದ) ಕೆಂಪಡರು; ರಂಗಾಗು; ರಂಗೇರು.
  5. (ರಕ್ತದ ವಿಷಯದಲ್ಲಿ) ಮುಖಕ್ಕೆ ನುಗ್ಗಿ ಅದನ್ನು – ಕೆಂಪಾಗಿಸು, ರಂಗೇರಿಸು.
  6. (ಗಿಡದ ವಿಷಯದಲ್ಲಿ) ಚಿಗುರೊಡೆ; ಚಿಗುರು; ಕುಡಿಯೊಡೆ; ಕುಡಿಯಿಡು.
See also 1flush  2flush  3flush  5flush  6flush  7flush
4flush ಹ್ಲಷ್‍
ನಾಮವಾಚಕ
  1. (ನೀರಿನ) ನುಗ್ಗು; ನುಗ್ಗಲು; ರಭಸ; ಚಿಮ್ಮುವಿಕೆ; ಉಕ್ಕಿಬರುವಿಕೆ; ಜಲಪ್ರವಾಹ.
  2. ಅಚಾನಕ್‍ ಹೆಚ್ಚಳ; ಹಠಾತ್‍ ಸಮೃದ್ಧಿ; ಇದ್ದಕ್ಕಿದ್ದಂತೆ ಬಂದ ಸಮೃದ್ಧಿ ಯಾ ಹೆಚ್ಚಳ.
  3. ನೀರುಗಿರಣಿಯ (ಚಕ್ರದಿಂದ ಹೊರಡುವ) ಪ್ರವಾಹ.
  4. ಭಾವಾವೇಗ; ಭಾವದ ಆವೇಗ.
  5. ಭಾವೋತ್ಸಾಹ; ವಿಜಯೋಲ್ಲಾಸ; ಭಾವದಿಂದಲೋ ಗೆಲವಿನಿಂದಲೋ ಹುಟ್ಟಿದ ಉಲ್ಲಾಸ, ಹುರುಪು, ಉತ್ಸಾಹ.
  6. (ಹುಲ್ಲು ಮೊದಲಾದವುಗಳ) ಹೊಸ ಚಿಗುರು.
  7. (ಬಚ್ಚಲು, ಚರಂಡಿ, ಮೊದಲಾದವನ್ನು) ರಭಸದಿಂದ ನೀರು ಹರಿಸಿ ಚೊಕ್ಕಟಗೊಳಿಸುವುದು, ತೊಳೆಯುವುದು.
  8. (ಬೆಳಕಿನ ಯಾ ಬಣ್ಣದ) ಹೊಳಪು; ಕಾಂತಿ; ಪ್ರಕಾಶ.
  9. ಮುಖಕ್ಕೆ ರಕ್ತವೇರುವುದು.
  10. (ಮುಖಕ್ಕೆ ರಕ್ತವೇರುವುದರಿಂದ) ಮುಖ ಕೆಂಪೇರುವುದು.
  11. (ಜ್ವರ ಮೊದಲಾದವುಗಳ) ತಾಪ; (ಜ್ವರ ಮೊದಲಾದವುಗಳಿಂದ) ಮೈಸುಡುವುದು; ಕಾವೇರುವುದು.
  12. (ಸೌಂದರ್ಯ, ಆರೋಗ್ಯ, ಜೀವನದ) ನವಚೈತನ್ಯ; ಹೊಸ ಕಳೆ; ಬಲ; ಶಕ್ತಿ; ಓಜಸ್ಸು; ನವಕಾಂತಿ.
See also 1flush  2flush  3flush  4flush  6flush  7flush
5flush ಹ್ಲಷ್‍
ಗುಣವಾಚಕ
  1. ತುಂಬಿ ತುಳುಕುವ.
  2. ತುಂಬಿಹರಿಯುವ; ತುಂಬಿ ಪ್ರವಹಿಸುವ; ಪ್ರವಾಹವಾಗಿ ಹರಿಯುವ.
  3. (ಸಾಮಾನ್ಯವಾಗಿ ಆಖ್ಯಾತಕ ಪ್ರಯೋಗ) (ಪದಾರ್ಥ, ಹಣ, ಮೊದಲಾದವುಗಳು) ತುಂಬಿ ತುಳುಕುವ; ಸಮೃದ್ಧವಾಗಿರುವ; ಯಥೇಚ್ಛವಾಗಿರುವ; ಪುಷ್ಕಳವಾಗಿರುವ.
  4. (ಸಾಮಾನ್ಯವಾಗಿ ಆಖ್ಯಾತಕ ಪ್ರಯೋಗ) (ಹಣದ ವಿಷಯದಲ್ಲಿ) ಸಮೃದ್ಧ; ಶ್ರೀಮಂತನಾಗಿರುವ.
  5. ಮಟ್ಟವಾದ; ಸಮತಲವಾದ.
  6. ಸಮಕ್ಷೇತ್ರದಲ್ಲಿರುವ; (ಇನ್ನೊಂದರೊಡನೆ) ಸಮತಲದಲ್ಲಿರುವ; ಸಪಾಟಾದ; ಚಾಚುಗಳು, ಉಬ್ಬಿರುವ ಏಣುಗಳು–ಇಲ್ಲದ.
See also 1flush  2flush  3flush  4flush  5flush  7flush
6flush ಹ್ಲಷ್‍
ಸಕರ್ಮಕ ಕ್ರಿಯಾಪದ
  1. ಮಟ್ಟ(ಸ) ಮಾಡು; ಸಮಮಾಡು; ಸಮತಲಗೊಳಿಸು.
  2. (ಸೇರಿಕೆಯ ಬಿರುಕನ್ನು ಮುಚ್ಚಿ) ಸಪಾಟಾಗಿಸು; ಸಮತಲದೊಡನೆ ನಯಮಾಡು.
See also 1flush  2flush  3flush  4flush  5flush  6flush
7flush ಹ್ಲಷ್‍
ನಾಮವಾಚಕ

ಒಂದೇ ರಂಗಿನ ಇಸ್ಪೀಟೆಲೆಗಳು.

ಪದಗುಚ್ಛ
  1. royal flush (ಪೋಕರ್‍ ಆಟದಲ್ಲಿ) ಏಸ್‍ ಯಾ ಹಾಸಿನಿಂದ ತೊಡಗಿ ಅನುಕ್ರಮವಾಗಿ ಬರುವ ಇಸ್ಪೀಟೆಲೆಗಳ ಗುಂಪು.
  2. straight flush ಅನುಕ್ರಮವಾಗಿ ಬರುವ ಇಸ್ಪೀಟೆಲೆಗಳ ಗುಂಪು.