fluorescence ಹ್ಲುಅರೆಸನ್ಸ್‍, ಹ್ಲೋರೆಸನ್ಸ್‍
ನಾಮವಾಚಕ

ಪ್ರತಿದೀಪ್ತಿ:

  1. ಯಾವುದೇ ವಿದ್ಯುತ್ಕಾಂತ ಅಲೆಗಳನ್ನು (ಸಾಮಾನ್ಯವಾಗಿ ಕಡಮೆ ಅಲೆಯುದ್ದ ಉಳ್ಳ ಎಕ್ಸ್‍ ಕಿರಣಗಳು, ನೇರಳಾತೀತ ಕಿರಣಗಳು, ಇಲೆಕ್ಟ್ರಾನ್‍ಗಳು, ಮೊದಲಾದವನ್ನು) ಹೀರಿಕೊಂಡ ಪದಾರ್ಥ ಆ ಕೂಡಲೇ ಹೊರಸೂಸುವ ಇನ್ನೊಂದು ಅಲೆಯುದ್ದದ (ದೃಶ್ಯ ಯಾ ಅದೃಶ್ಯ) ವಿದ್ಯುತ್ಕಾಂತ ಅಲೆಗಳು.
  2. ಪ್ರತಿದೀಪನ; ಪ್ರತಿದೀಪಕ ಗುಣ; ಪ್ರತಿದೀಪ್ತಿ ತೋರುವ ಗುಣ.