flunkey ಹ್ಲಂಕಿ
ನಾಮವಾಚಕ
(ಬಹುವಚನ flunkeys).
  1. (ಸಾಮಾನ್ಯವಾಗಿ ಹೀನಾರ್ಥಕ ಪ್ರಯೋಗ) ಡವಾಲಿ ಜವಾನ; ಸಮವಸ್ತ್ರದ ಸೇವಕ; ಯಜಮಾನನ ಅಂತಸ್ತು, ಅಧಿಕಾರಗಳನ್ನು ಸೂಚಿಸುವ ಲಾಂಛನಗಳನ್ನೂ ಸಮವಸ್ತ್ರವನ್ನೂ ಧರಿಸಿದ ಆಳು; ಮುಖ್ಯವಾಗಿ ಬಾಗಿಲಿನಲ್ಲಿ, ವಾಹನದಲ್ಲಿ ಯಜಮಾನನ ಸೇವೆಗೆ ಸಿದ್ಧನಾಗಿರುವ ಸೇವಕ, ಕಿಂಕರ.
  2. ಹೊಗಳುಭಟ್ಟ; ಭಟ್ಟಂಗಿ; ಮುಖಸ್ತುತಿಕಾರ; ಸ್ತುತಿಪಾಠಕ; ಇಚ್ಚಕವಾಡುವವ.
  3. ಗುಲಾಮ; ದಾಸ; ಅಂತಸ್ತು, ಅಧಿಕಾರ, ಐಶ್ವರ್ಯ, ಮೊದಲಾದವುಗಳಲ್ಲಿ ಮೇಲ್ಪಟ್ಟವರಿಗೆ ತೊತ್ತಿನಂತೆ ನಡೆದುಕೊಳ್ಳುವವನು.
  4. (ಅಮೆರಿಕನ್‍ ಪ್ರಯೋಗ) ಆಳು; ಅದಿಗೆಯವನು, ಕಾವಲುಗಾರ, ಮೊದಲಾದವರು.