See also 2fluke  3fluke  4fluke
1fluke ಹ್ಲೂಕ್‍
ನಾಮವಾಚಕ
  1. ಚಪ್ಪಟೆ ಈನು; ವಿವಿಧ ಜಾತಿಯ ಚಪ್ಪಟೆಯಾಕಾರದ ಈನುಗಳು.
  2. ‘ಹ್ಲೌಂಡರ್‍’ ಈನು.
  3. ಕುರಿಯ ಯಕೃತ್ತಿನಲ್ಲಿ ಸೇರಿಕೊಳ್ಳುವ ಎಲೆಯ ಆಕಾರದ ಕ್ರಿಮಿ. Figure: fluke
  4. ಒಂದು ಜಾತಿಯ ಆಲೂಗೆಡ್ಡೆ, ಬಟಾಟೆ.
See also 1fluke  3fluke  4fluke
2fluke ಹ್ಲೂಕ್‍
ನಾಮವಾಚಕ
  1. ಲಂಗರು ಹಲ್ಲು; ಲಂಗರಿನ ತೋಳಿನ ಅಗಲವಾದ ತ್ರಿಕೋನಾಕಾರದ ತಗಡು.
  2. ಭರ್ಜಿತಲೆ; ಈಟಿ ಮೊನೆ; ಈನುಗಳನ್ನು ಇರಿಯುವ ಭರ್ಜಿ ಮೊದಲಾದವುಗಳ, ಮೊನೆಯಿರುವ ತಲೆ.
  3. (ತಿಮಿಂಗಿಲದ) ಬಾಲದ ಪಾಲಿ; ಪುಚ್ಫಪಾಲಿ; ತಿಮಿಂಗಿಲದ ತ್ರಿಕೋನಾಕಾರದ ಬಾಲದ ಹಾಳೆಗಳಲ್ಲಿ ಒಂದು.
See also 1fluke  2fluke  4fluke
3fluke ಹ್ಲೂಕ್‍
ನಾಮವಾಚಕ
  1. ಆಕಸ್ಮಿಕ ಸಾಧನೆ; ಅದೃಷ್ಟವಶಾತ್‍ ಸರಿಯಾಗಿ ಗುರಿ ತಗುಲಿದ ಆಕಸ್ಮಿಕ ಏಟು; ಸುದೈವದಿಂದ ಗುರಿ ತಗುಲಿದ ಏಟು.
  2. ಆಕಸ್ಮಿಕ ಮಂದಮಾರುತ.
See also 1fluke  2fluke  3fluke
4fluke ಹ್ಲೂಕ್‍
ಸಕರ್ಮಕ ಕ್ರಿಯಾಪದ

ಆಕಸ್ಮಿಕವಾಗಿ ಸಾಧಿಸು; ಸುದೈವದಿಂದ ಗುರಿಯನ್ನು ಹೊಡೆ; ಅದೃಷ್ಟವಶಾತ್‍ ಗುರಿಗೆ ಹೊಡೆ.

ಅಕರ್ಮಕ ಕ್ರಿಯಾಪದ

ಸುದೈವದಿಂದ ಯಶಸ್ವಿಯಾಗು; ಆಕಸ್ಮಿಕವಾಗಿ ಗುರಿಗೆ ತಗುಲು; ಅದೃಷ್ಟಬಲದಿಂದ ಗುರಿ ಮುಟ್ಟು.