See also 2fluent
1fluent ಹ್ಲೂ(ಹ್ಲು)ಅಂಟ್‍
ಗುಣವಾಚಕ
  1. ಸರಾಗವಾಗಿ ಹರಿಯುವ; ಸುಗಮವಾಗಿ ಪ್ರವಹಿಸುವ.
  2. (ದ್ರವ ಯಾ ಅನಿಲಗಳಂತೆ) ಹರಿಯಬಲ್ಲ; ಪ್ರವಹಿಸಬಲ್ಲ; ದ್ರವಸ್ವಭಾವದ.
  3. (ಪ್ರಾಚೀನ ಪ್ರಯೋಗ) ಚಂಚಲ; ಅಸ್ತಿಮಿತ; ಬದಲಾಯಿಸುವ; ವ್ಯತ್ಯಾಸವಾಗಬಲ್ಲ.
  4. (ಚಲನ ವಕ್ರಾಕೃತಿ, ಮೊದಲಾದವುಗಳ ವಿಷಯದಲ್ಲಿ) ಸರಳವಾದ; ಸುಂದರವಾದ; ನಯವಾದ; ಲಲಿತವಾದ: fluent motion ಲಲಿತವಾದ ನಡೆ.
  5. (ಭಾಷಣದ ಯಾ ಶೈಲಿಯ ವಿಷಯದಲ್ಲಿ) ನಿರರ್ಗಳ; ಸಮೃದ್ಧ; ಅಡೆತಡೆಯಿಲ್ಲದ ಸರಾಗವಾಗಿ – ಬರುವ, ಹೊರಡುವ, ಹರಿಯುವ, ಪ್ರವಹಿಸುವ.
  6. ತಡವರಿಸದ; ನಿರರ್ಗಳ; ಸುಲಭವಾಗಿ ಮತ್ತು ಶೀಘ್ರವಾಗಿ (ಮನಸ್ಸಿನಲ್ಲಿರುವುದನ್ನು) ಅಭಿವ್ಯಕ್ತಿಗೊಳಿಸುವ: a fluent speaker ನಿರರ್ಗಳ ವಾಗ್ಮಿ.
See also 1fluent
2fluent ಹ್ಲೂ(ಹ್ಲು)ಅಂಟ್‍
ನಾಮವಾಚಕ
  1. (ಗಣಿತ) ನಿರರ್ಗಳ ಚರ; ಅನಂತ ಸೂಕ್ಷ್ಮ ಪರಿಮಾಣಗಳಲ್ಲಿ ಏರುತ್ತ ಯಾ ಇಳಿಯುತ್ತ ಹೋಗುವ ಚರ.
  2. (ಸಂದರ್ಭೋಚಿತ ಪ್ರಯೋಗ) ಬದಲಾಯಿಸುವ ಲಕ್ಷಣವುಳ್ಳ ಯಾವುದೇ ವಸ್ತು ಯಾ ವಿಷಯ.