See also 2flood
1flood ಹ್ಲಡ್‍
ನಾಮವಾಚಕ
  1. (ನೀರಿನ) ಉಬ್ಬರ; ಒಳ ನುಗ್ಗು; ಒಳಹರಿವು.
  2. (ಕಾವ್ಯಪ್ರಯೋಗ)
    1. ನದಿ; ಹೊಳೆ.
    2. ಸಮುದ್ರ.
  3. ನೆರೆ; ಹೊನಲು; ಪ್ರವಾಹ; ಹುಚ್ಚುಹೊಳೆ; ಜಲಪ್ರಳಯ.
  4. (ನೀರಿನ ಯಾ ನೀರಿನಂಥ) ಸುರಿತ; ಸುರಿಮಳೆ; ಪ್ರವಾಹ: floods of rain ಮಳೆ ಸುರಿತ. a flood of abuse ಬೈಗುಳದ ಸುರಿಮಳೆ. a flood of tears ಕಣ್ಣೀರಿನ ಪ್ರವಾಹ. a flood of light ಬೆಳಕಿನ ಪ್ರವಾಹ.
  5. = 1floodlight.
ಪದಗುಚ್ಛ
  1. flood and field ನೀರು ಮತ್ತು ನೆಲ; ನೆಲಜಲ.
  2. Noah’s Flood ಬೈಬಲಿನ ಜೆನಿಸಿಸ್‍ ಯಾ ಸೃಷ್ಟಿ ಪ್ರಕರಣದಲ್ಲಿ ಹೇಳಿರುವ ನೋವಾ ಎಂಬುವನ ಕಾಲದ ಜಲಪ್ರಳಯ, ಮಹಾಪ್ರಳಯ.
  3. the Flood = ಪದಗುಚ್ಛ \((2)\).
See also 1flood
2flood ಹ್ಲಡ್‍
ಸಕರ್ಮಕ ಕ್ರಿಯಾಪದ
  1. ಪ್ರವಾಹ ಬರು; ನೆರೆ ಬರು; ಕೊಚ್ಚಿಹೋಗು; (ಪ್ರವಾಹದಿಂದ) ತುಂಬು, ಮುಳುಗಿಸು (ರೂಪಕವಾಗಿ ಸಹ): was flooded with letters ಕಾಗದಗಳ ಪ್ರವಾಹದಿಂದ ತುಂಬಿ, ಮುಳುಗಿ.
  2. (ಜಈನು ಮೊದಲಾದವಕ್ಕೆ) ನೀರುಹಾಯಿಸು; ನೀರು ಕೊಡು.
  3. (ಉರಿಯುತ್ತಿರುವ ಮನೆ, ಗಣಿ, ಮೊದಲಾದವಕ್ಕೆ) ನೀರಿನ ಪ್ರವಾಹ ಹರಿಸು; ನೀರನ್ನು ಪ್ರವಾಹದಂತೆ ಬಿಡು.
  4. (ಕಾರ್ಬೊರೇಟರಿಗೆ) ಹೊರಹರಿಯುವಂತೆ ಪೆಟ್ರೋಲನ್ನು ತುಂಬು.
  5. (ಮಳೆಯ ವಿಷಯದಲ್ಲಿ ನದಿಯನ್ನು) ತುಂಬಿಹರಿಸು; ಉಕ್ಕಿಸು; ಉಕ್ಕಿ ಹರಿಯುವಂತೆ ತುಂಬು.
  6. (ಪ್ರವಾಹದ ಕಾರಣದಿಂದ) (ಮನೆ ಮೊದಲಾದವುಗಳಿಂದ) ಹೊರಹೊರಡಿಸು; ಹೊರಕ್ಕೆ–ಕಳುಹಿಸು, ಓಡಿಸು, ಅಟ್ಟು.
ಅಕರ್ಮಕ ಕ್ರಿಯಾಪದ
  1. ಹೆಚ್ಚುಹೆಚ್ಚಾಗಿ, ಅಧಿಕ ಪ್ರಮಾಣದಲ್ಲಿ – ಬರು.
  2. ಪ್ರವಾಹ, ನೆರೆ– ಬಂದಿರು, ಬರು; ಪ್ರವಾಹದಿಂದ ತುಂಬಿಹೋಗು; ನೆರೆಯಿಂದ ಮುಳುಗಿಹೋಗು.
  3. ಗರ್ಭಕೋಶದಲ್ಲಿ ಆದ ರಕ್ತಸ್ರಾವದಿಂದ ವಿಶೇಷವಾಗಿ ರಕ್ತ ಕಳೆದುಕೊ; ಗರ್ಭಕೋಶೀಯ ರಕ್ತಸ್ರಾವ ಹೊಂದಿರು.