flog ಹ್ಲಾಗ್‍
ಸಕರ್ಮಕ ಕ್ರಿಯಾಪದ
  1. (ಬೆತ್ತ, ಚಾವಟಿ, ಚಡಿ, ಮೊದಲಾದವುಗಳಿಂದ) ಹೊಡೆ; ಬಾರಿಸು; ಬಡಿ; ಬಿಗಿ.
  2. (ಕುದುರೆ ಮೊದಲಾದವನ್ನು ಚಾವಟಿಯಿಂದ ಹೊಡೆದು) ಚುರುಕುಗೊಳಿಸು; ಮುಂದಕ್ಕೆ – ಹೊಡೆ, ಹೋಗುವಂತೆ ಮಾಡು.
  3. (ಅಶಿಷ್ಟ) ಸೋಲಿಸು; ಈರಿಸು: completely flogged when he got to the top ಅವನು ಮೇಲಕ್ಕೆ ಹತ್ತಿ ಬಂದಾಗ ಪೂರ್ತಿ ಸೋತುಹೋಗಿದ್ದ.
  4. (ಅಶಿಷ್ಟ) ಕದಿ.
  5. (ಅಶಿಷ್ಟ) ಮಾರು.
  6. (ಹೊಳೆಯಲ್ಲಿ) ಪುನಃಪುನಃ ಗಾಳಬೀಸು.
  7. ಕಟುವಾಗಿ ಟೀಕಿಸು; ನೋವಾಗುವಂತೆ ಖಂಡಿಸು; the opposition papers continue to flog the government over the economic crisis ಆರ್ಥಿಕ ಮುಗ್ಗಟ್ಟಿನ ವಿಷಯವಾಗಿ ಸರ್ಕಾರವನ್ನು ವಿರೋಧಪಕ್ಷದ ಪತ್ರಿಕೆಗಳು ಕಟುವಾಗಿ ಟೀಕಿಸುತ್ತಲೇ ಇವೆ.
  8. (ವಿದ್ಯೆ ಮೊದಲಾದವನ್ನು) ಒತ್ತಾಯದಿಂದ ಕಲಿಸು; ಹೊಡೆದು ಕಲಿಸು: flog learning into ಹೊಡೆದು ವಿದ್ಯೆ ಕಲಿಸು.
  9. (ಸೋಮಾರಿತನ ಮೊದಲಾದವನ್ನು) ಹೊಡೆದು – ಓಡಿಸು, ಬಿಡಿಸು: flog laziness out of ಹೊಡೆದು ಸೋಮಾರಿತನ ಬಿಡಿಸು.
ಅಕರ್ಮಕ ಕ್ರಿಯಾಪದ
  1. (ಕ್ರಿಕೆಟ್‍ ಆಟದಲ್ಲಿ) ಬೋಲ್‍ ಮಾಡಿದ ಚೆಂಡನ್ನು ಚೆನ್ನಾಗಿ ಥಳಿಸು; ಮನಸ್ವಿ ಬಾರಿಸು.
  2. ಕಷ್ಟಪಟ್ಟು ಯಾ ಪ್ರಯಾಸದಿಂದ – ನಡೆ, ಮುಂದುವರಿ.
ನುಡಿಗಟ್ಟು
  1. flog a dead horse ಸತ್ತ ಕುದುರೆಯನ್ನು ಹೊಡೆ; ಕಳೆದುಹೋದ ಯಾ ಇತ್ಯರ್ಥವಾದ ವಿಷಯದ ಬಗೆಗೆ ವೃಥಾ ಚರ್ಚಿಸು; ಶಕ್ತಿಯ ಅಪವ್ಯಯ ಮಾಡು, ದುಂದುಮಾಡು.
  2. flog to death (ಆಡುಮಾತು) (ತಲೆಚಿಟ್ಟು ಹಿಡಿಯುವವರೆಗೆ, ಬೇಸರ ಹುಟ್ಟುವವರೆಗೆ) ಮಾತಾಡುತ್ತಾ, ಪ್ರಶಂಸಿಸುತ್ತಾ, ಪ್ರಚಾರಮಾಡುತ್ತಾ – ಹೋಗು; ಮಾತು, ಹೊಗಳಿಕೆ, ಪ್ರಚಾರ, ಮೊದಲಾದವನ್ನು ಬೆಳೆಸುತ್ತಾ ಹೋಗು.