See also 2flock  3flock
1flock ಹ್ಲಾಕ್‍
ನಾಮವಾಚಕ
  1. (ಉಣ್ಣೆ, ಹತ್ತಿ, ಮೊದಲಾದವುಗಳ ಎಳೆಗಳ) ಕುಚ್ಚು; ಗೊಂಡೆ; ಕಂತೆ; ಬೊಂತೆ.
  2. (ಬಹುವಚನದಲ್ಲಿ) (ರಜಾಯಿ, ದಿಂಬು, ಮೊದಲಾದವುಗಳಿಗೆ ತುಂಬುವ) ಕಳಪೆ ಉಣ್ಣೆ, ಬಟ್ಟೆಚೂರು, ಮೊದಲಾದ ಪದಾರ್ಥ.
  3. (ಜಾತ್ಯೇಕವಚನ ಯಾ ಬಹುವಚನದಲ್ಲಿ) (ಗೋಡೆಗೆ ಅಂಟಿಸುವ ಅಲಂಕಾರದ ಕಾಗದ ತಯಾರಿಕೆಯಲ್ಲಿ ಬಳಸುವ) ಪುಡಿ ತುಪ್ಪಟ ಯಾ ಚಿಂದಿಬಟ್ಟೆ.
  4. (ಬಹುವಚನದಲ್ಲಿ) (ರಸಾಯನವಿಜ್ಞಾನ) ಲಘು ಗರಣೆ; ಹಗುರವಾದ ಒತ್ತರದ ರಾಶಿ.
See also 1flock  3flock
2flock ಹ್ಲಾಕ್‍
ನಾಮವಾಚಕ
  1. ಜನಜಂಗುಳಿ; ಜನಸಮೂಹ; ಜನರ ಹಿಂಡು; ನೆರವಿ; ಜನರ ದೊಡ್ಡ ಗುಂಪು; come in flocks ಹಿಂಡುಹಿಂಡಾಗಿ ಬರು.
  2. (ಒಂದೇ ಜಾತಿಯ ಪ್ರಾಣಿಗಳ, ಮುಖ್ಯವಾಗಿ ಮೇವಿಗಾಗಿ ಒಟ್ಟುಗೂಡಿರುವ ಯಾ ಒಟ್ಟಿಗೆ ಪ್ರಯಾಣ ಮಾಡುತ್ತಿರುವ ಹಕ್ಕಿಗಳ) ಗುಂಪು; ತಂಡ; ಹಿಂಡು.
  3. (ಒಟ್ಟಿಗೆ ಇಟ್ಟಿರುವ ಸಾಮಾನ್ಯವಾಗಿ ಕುರಿ, ಮೇಕೆ, ಬಾತುಕೋಳಿ, ಮೊದಲಾದ) ಸಾಕುಮೃಗಗಳ ಮಂದೆ, ಹಿಂಡು.
  4. ಕ್ರೈಸ್ತರು.
  5. (ಆಯಾ ಕ್ರೈಸ್ತಗುರುವಿಗೆ ಸಂಬಂಧಿಸಿದ) ಕ್ರೈಸ್ತಸಭೆ ಯಾ ಸಂಘ.
  6. ಒಂದು ಕುಟುಂಬದ ಮಕ್ಕಳು, ಶಿಷ್ಯವರ್ಗ, ಮೊದಲಾದವು.
ಪದಗುಚ್ಛ

flocks and herds ಕುರಿದನಗಳು.

See also 1flock  2flock
3flock ಹ್ಲಾಕ್‍
ಅಕರ್ಮಕ ಕ್ರಿಯಾಪದ

ಒತ್ತಟ್ಟಿಗೆ ಸೇರು; ಒಟ್ಟುಗೂಡು; ಮಂದೆಗೂಡು; ಹಿಂಡಾಗು; ಗುಂಪಾಗು; ಸಮೂಹವಾಗು.

ಪದಗುಚ್ಛ
  1. flock in ಹಿಂಡಾಗಿ ಬರು.
  2. flock out ಹಿಂಡಾಗಿ ಹೋಗು; ಮಂದೆಗೂಡಿ ಹೋಗು.
  3. flock together ಹಿಂಡಾಗು; ಮಂದೆಗೂಡು.