floating ಹ್ಲೋಟಿಂಗ್‍
ಗುಣವಾಚಕ
  1. ತೇಲುವ; ತೇಲಾಡುವ.
  2. ತೇಲಿಸುವ; ಪ್ಲಾವಕ.
  3. (ನೀರಿನ ವಿಷಯದಲ್ಲಿ) ಉಕ್ಕಿಹರಿಯುವ; ಪ್ರವಾಹಭರಿತವಾಗಿರುವ.
  4. (ಮನದೆದುರು, ಕಣ್ಣೆದುರು) ಸುಳಿದಾಡುವ; ಹಾರಾಡುವ.
  5. (ನಿಧಿ, ಬಂಡವಾಳ, ಮೊದಲಾದವುಗಳ ವಿಷಯದಲ್ಲಿ) ಚಲಾವಣೆಯಲ್ಲಿರುವ; ಬಳಕೆಯಲ್ಲಿರುವ; ಚಲಾವಣೆಗೆ ಬರುವ; ಶಾಶ್ವತವಾಗಿ ತೊಡಗಿಸಿಲ್ಲದ.
  6. ಸಂಚಾರಿ; ಚಲ; ಕ್ಷಣ ಕ್ಷಣಕ್ಕೂ ಬದಲಾಗುವ; ಆಗಾಗ ಉದ್ಭವಿಸಿ ವ್ಯಾಪಕವಾಗಿ ಹರಡುವ: floating rumours ಸಂಚಾರಿ ಗಾಳಿಸುದ್ದಿಗಳು.
  7. (ಸರಕಿನ ವಿಷಯದಲ್ಲಿ) ಸಮುದ್ರ; ಸಮುದ್ರದ ಮೇಲಿರುವ: floating trade ತೇಲುವ್ಯಾಪಾರ; ಸಮುದ್ರದ ಮೇಲಿನ ಹಡಗುಗಳಲ್ಲಿಯ ಸರಕಿನ ವ್ಯಾಪಾರ. floating rate ಸಮುದ್ರ ಸರಕುಗಳ ದರಗಳು.
  8. ಅಸ್ಥಿರ; ಅಲೆಮಾರಿ; ಸ್ಥಿರವಾಗಿ ಒಂದೆಡೆ ನಿಲ್ಲದೆ ತಿರುಗುವ; ಬಂದು ಹೋಗುವ: floating population ಬಂದು ಹೋಗುವ ಜನಸಮುದಾಯ.