floater ಹ್ಲೋಟರ್‍
ನಾಮವಾಚಕ
  1. ಪ್ಲಾವಕ; ತೇಲಿಸುವ ವ್ಯಕ್ತಿ ಯಾ ತೇಲಿಸುವ ಸಾಧನ.
  2. ಪ್ಲಾವಕ; ತೇಲುಗ; ತೇಲಿ ಹೋಗುವವನು(ಳು) ಯಾ ತೇಲುವ ವಸ್ತು.
  3. ಸುಳಿದಾಡುವ, ಹಾರಾಡುವ, ತೂಗಾಡುವ – ವ್ಯಕ್ತಿ, ವಸ್ತು, ಸಾಧನ, ಮೊದಲಾದವು.
  4. ಸ್ಥಾಪಕ; ಆರಂಭಗಾರ; ಕಂಪೆನಿ, ಉದ್ಯೋಗ, ವ್ಯಾಪಾರ – ಇವನ್ನು ಪ್ರಾರಂಭಿಸುವವನು, ಅಸ್ತಿತ್ವಕ್ಕೆ ತರುವವನು.
  5. (ಬ್ರಿಟಿಷ್‍ ಪ್ರಯೋಗ) ಸರ್ಕಾರಿ ಆಧಾರಪತ್ರ; (ಮುಖ್ಯವಾಗಿ ಸ್ಟಾಕ್‍ ಎಕ್ಸ್‍ಚೇಂಜಿನ ಬಂಡವಾಳಪತ್ರಗಳ ಮಾರುವೆಯಲ್ಲಿ) ಆಧಾರವಾಗಿ ಪರಿಗಣಿಸುವ, ಸರ್ಕಾರ ಮೊದಲಾದವುಗಳ ಸಾಲಪತ್ರ.
  6. ಅಲೆಮಾರಿ; ಪದೇಪದೇ ತನ್ನ ವಾಸಸ್ಥಳ, ಉದ್ಯೋಗ, ಮೊದಲಾದವನ್ನು ಬದಲಾಯಿಸುತ್ತ ಅಲೆಯುವವನು.
  7. (ಅಮೆರಿಕನ್‍ ಪ್ರಯೋಗ) ಪಕ್ಷಾಂತರಿ; ಯಾವ ಪಕ್ಷಕ್ಕೂ ಸೇರದ, ಹಣ ಕೊಟ್ಟು ಮತವನ್ನು ಪಡೆಯಬಹುದಾದ ಮತದಾರ.
  8. (ಅಮೆರಿಕನ್‍ ಪ್ರಯೋಗ) ಕಳ್ಳ ಮತದಾರ; ಒಂದೇ ಚುನಾವಣೆಯಲ್ಲಿ ಬೇರೆಬೇರೆ ಹೆಸರಿನಲ್ಲಿ ಕಳ್ಳತನದಿಂದ ಮತ ಚಲಾಯಿಸುವವನು(ಳು).
  9. ಚಲವಸ್ತು ವಿಮೆ; ಪದೇಪದೇ ಸ್ಥಳದಿಂದ ಸ್ಥಳಕ್ಕೆ ಕೊಂಡೊಯ್ಯಬೇಕಾದ ವಸ್ತುವಿನ ರಕ್ಷಣೆಗಾಗಿ ಮಾಡುವ ವಿಮೆ.
  10. (ಅಶಿಷ್ಟ) ಬಹಿಷ್ಕಾರ ಆಜ್ಞೆ; ಯಾವನೋ ಒಬ್ಬನಿಗೆ ತಕ್ಷಣ ಊರುಬಿಟ್ಟು ಹೋಗಬೇಕೆಂದು ಪೊಲೀಸರು ನೀಡುವ ಆಜ್ಞೆ.
  11. (ಅಶಿಷ್ಟ) ತಪ್ಪು; ಅವಿವೇಕದ ಪ್ರಮಾದ.