See also 2flit
1flit ಹ್ಲಿಟ್‍
ಅಕರ್ಮಕ ಕ್ರಿಯಾಪದ
  1. ವಲಸೆಹೋಗು; ಗುಳೆ ಹೋಗು; ಬೇರೆ ಸ್ಥಳಕ್ಕೆ ಹೋಗು; ಬಿಟ್ಟು ಹೋಗು.
  2. (ಮುಖ್ಯವಾಗಿ ಸ್ಕಾಟ್ಲಂಡ್‍ ಮತ್ತು ಉತ್ತರ ಇಂಗ್ಲಂಡ್‍ಗಳಲ್ಲಿ) ವಾಸಸ್ಥಳ, ನಿವಾಸ – ಬದಲಾಯಿಸು; ಬೇರೆ ವಸತಿಗೆ ಹೋಗು.
  3. (ಹಗುರವಾಗಿ, ವೇಗವಾಗಿ, ಯಾ ನಯವಾಗಿ) ಚಲಿಸು; ಓಡಾಡು; ತಾರಾಡು; ಸುಳಿದಾಡು.
  4. (ಮುಖ್ಯವಾಗಿ ಹಕ್ಕಿ, ಬಾವಲಿ, ಮೊದಲಾದವು)
    1. ಹಗುರವಾಗಿ ಹಾರಾಡು.
    2. (ದೂರಹೋಗದೆ) ಅಲ್ಲಲ್ಲೇ ಹಾರಾಡು.
  5. (ರೂಪ, ಕಾಲ, ಮೊದಲಾದವು) ಬೇಗನೆ ಕಳೆದುಹೋಗು, ಉರುಳಿಹೋಗು: hours flitted by ಗಂಟೆಗಳು ಉರುಳಿದವು.
See also 1flit
2flit ಹ್ಲಿಟ್‍
ನಾಮವಾಚಕ
  1. (ಮುಖ್ಯವಾಗಿ ಸಾಲಕೊಟ್ಟವರು ಮೊದಲಾದವರಿಂದ ತಪ್ಪಿಸಿಕೊಳ್ಳಲು ಹೋಗುವ) ವಲಸೆ; ಗುಳೆ; ವಸತಿ ಬದಲಾವಣೆ; ನೆಲೆಮಾರ್ಪು.
  2. (ಹಗುರವಾದ, ವೇಗವಾದ, ಯಾ ನಯವಾದ) ಚಲನೆ; ಓಡಾಟ; ತಾರಾಟ.
  3. ಸುಳಿದಾಟ; ಅಲ್ಲಲ್ಲೇ ಹಾರಾಟ.